ಯಾಕೋ ಗೊತ್ತಿಲ್ಲ!

ಮನೆಯ ಮುಂದೆ ನಾನು ಸುಮ್ಮನೆ ಹಾಗೆ ನಿಂತಿದ್ದೆ ಯಾಕೋ ಗೊತ್ತಿಲ್ಲ! ಹಾಡುಗಳ ಗುನುಗುಡುತ್ತಾ ಯಾರನ್ನೋ ನೆನೆಯುತ್ತಾ ಏನನ್ನೋ ಮರೆಯುತ್ತಾ ಮೋಡ ತುಂಬಿದ್ದ ಆಕಾಶವನ್ನೇ ನೋಡುತ್ತಾ! ಕಣ್ಣ ಮುಂದೆ ಹಲವರು ನೆನಪುಗಳ ಸಾಲಲ್ಲಿ ಬಂದು ನಿಂತು ನಸು ನಕ್ಕರು, ಕೆಲವರು ಅಣಕಿಸಿದರು ನನ್ನ ಭಾವನೆಗಳೇ ಕನಸುಗಳ ಕೆಣಕುತಿದ್ದವು ಜಗಳವಾಡುವುದಕ್ಕೆ ಕಾಲು ಕೆದರಿಕೊಂಡು ಬರುತ್ತಿದ್ದವು. ನಾನು ಮಾತ್ರ ಮಾತುಗಳಿಗೆ ತುಸು ಹೊತ್ತು ವಿರಾಮ ನೀಡಿ ದಿಟ್ಟಿಸುತ್ತಿದ್ದೆ ಅದೇ ಆಕಾಶವನ್ನೇ ಕಡಿಯುತ್ತಿರುವ ಸೊಳ್ಳೆಗಳ ಪರಿವೇ ಇಲ್ಲದೆ ತುಂಬು ಬಸುರಿಯಾದಂತ ಬಾನು ಹೆರಿಗೆಯ ರೂಪದಲ್ಲಿ ಮಳೆ ಸುರಿದಾಗಲೇ ವಾಸ್ತವಕೆ ನಾನು ಬಂದಿದ್ದು, ಸೊಳ್ಳೆ ಕಡಿದ ಕಾಲ ಕೆರೆದುಕೊಂಡಿದ್ದು