ಹಸಿರುಡಲ್ಲೊಲ್ಲದ ಮರ

ನದಿಯ ತಟದಲ್ಲೊಂದು
ಬೋಳು ಬೋಳಾದ ಮರ
ಅದರ ಬುಡದಲ್ಲೊಂದಿಷ್ಟು
ಹಸಿರು ಹುಲ್ಲು
ಬೋಳಾದ ಮರದಲ್ಲಿ
ಹತ್ತಾರು ಕಾಗೆ ಗೂಡುಗಳು,
ನದಿಯ ದಡದಲ್ಲಿದ್ದೂ
ನೀರುಣ್ಣದ ಮರ,
ಎಷ್ಟೇ ಗಾಳಿ ಬೀಸಿದರೂ
ನಿಂತಿದೆ ಅಲುಗಾಡದೆ
ಸುಮಾರು ವರುಷಗಳಾಗಿತಂತೆ
ಹಾಗೆ ನಿಂತು
ಯಾರನ್ನೋ ಕಾಯುತ್ತಿರುವಂತಿದೆ
ಹಸಿರುಡಲ್ಲೊಲ್ಲದು,
ಇರಬೇಕಂತೆ ಹೀಗೆ
ವಿಧವೆಯಂತೆ
ಯಾರದೋ ಮನೆಯ
ಹಬ್ಬದಡುಗೆಗೆ,
ಉರಿ ಹಚ್ಚಿದ ಒಲೆಯಬ್
ಕಟ್ಟಿಗೆಯಾಗಬೇಕಂತೆ
ಅದಕ್ಕೆ ಈ ತಪಸ್ಸು
Comments
Post a Comment
ಅನ್ಸಿದ್ ಬರೀರಿ