Posts

Showing posts from August, 2010

ಯಾಕೋ ಗೊತ್ತಿಲ್ಲ!

Image
ಮನೆಯ ಮುಂದೆ ನಾನು ಸುಮ್ಮನೆ ಹಾಗೆ ನಿಂತಿದ್ದೆ ಯಾಕೋ ಗೊತ್ತಿಲ್ಲ! ಹಾಡುಗಳ ಗುನುಗುಡುತ್ತಾ ಯಾರನ್ನೋ ನೆನೆಯುತ್ತಾ ಏನನ್ನೋ ಮರೆಯುತ್ತಾ ಮೋಡ ತುಂಬಿದ್ದ ಆಕಾಶವನ್ನೇ ನೋಡುತ್ತಾ! ಕಣ್ಣ ಮುಂದೆ ಹಲವರು ನೆನಪುಗಳ ಸಾಲಲ್ಲಿ ಬಂದು ನಿಂತು ನಸು ನಕ್ಕರು, ಕೆಲವರು ಅಣಕಿಸಿದರು ನನ್ನ ಭಾವನೆಗಳೇ ಕನಸುಗಳ ಕೆಣಕುತಿದ್ದವು ಜಗಳವಾಡುವುದಕ್ಕೆ ಕಾಲು ಕೆದರಿಕೊಂಡು ಬರುತ್ತಿದ್ದವು. ನಾನು ಮಾತ್ರ ಮಾತುಗಳಿಗೆ ತುಸು ಹೊತ್ತು ವಿರಾಮ ನೀಡಿ ದಿಟ್ಟಿಸುತ್ತಿದ್ದೆ ಅದೇ ಆಕಾಶವನ್ನೇ ಕಡಿಯುತ್ತಿರುವ ಸೊಳ್ಳೆಗಳ ಪರಿವೇ ಇಲ್ಲದೆ ತುಂಬು ಬಸುರಿಯಾದಂತ ಬಾನು ಹೆರಿಗೆಯ ರೂಪದಲ್ಲಿ ಮಳೆ ಸುರಿದಾಗಲೇ ವಾಸ್ತವಕೆ ನಾನು ಬಂದಿದ್ದು, ಸೊಳ್ಳೆ ಕಡಿದ ಕಾಲ ಕೆರೆದುಕೊಂಡಿದ್ದು

ಹೊರ ನಡೆದವು ಹನಿಗಳು

Image
ಜಾರುವ ತವಕದಲ್ಲಿದ್ದ ಕಣ್ಣ ಹನಿಗಳಲ್ಲಿ ಪ್ರಥಿಫಲಿಸಿ ಹಾರುತ್ತಿದ್ದ ಬೆಳಕು ಫಳಫಳನೆ ಹೊಳೆಯುತ್ತಿತ್ತು ಹನಿಗಳೊಳಗಿನ ನೋವ ಹೊರದೆಗೆದು ಎಲ್ಲರಿಗು ತೋರಲೆತ್ನಿಸುತಿತ್ತು, ನೋವೇನೆಂದು ಕಣ್ಣಿಗೂ ಗೊತ್ತಿಲ್ಲ ಕಂಗಳ ಕಾವಲಿದ್ದ ರೆಪ್ಪೆಗಳು ತಡೆಯಲೆತ್ನಿಸುತಿದ್ದವು ಹನಿಗಳು ಹೊರ ಹೋಗದಂತೆ, ಅಲ್ಲೇ ಮುದುರಿಕೊಂಡು ಕುತಿದ್ದವು ಬೆಚ್ಚಗೆ, ಬೆಚ್ಚಗಾಗುತ್ತಲೆ ಆವಿಯಾಗಿ ಹೊರ ನಡೆದವು ಹನಿಗಳು ಯಾರಿಗೂ ಕಾಣದಂತೆ

ಮುದುಕಿಯ ಲಾಟೀನು ಮತ್ತು ಕತ್ತಲು

Image
ಕಪ್ಪು ಕತ್ತಲು ಹೆಪ್ಪುಗಟ್ಟಿದೆ ಯಾರೋ ಮೋಹಿನಿಯ ಕಪ್ಪು ಕೂದಲು ಹರಡಿಕೊಂಡಿರುವಂತೆ ಬೆಳಕೀಯಲು ಒಂದೇ ಒಂದು ಚುಕ್ಕಿ ಪತ್ತೆ ಇಲ್ಲ! ಚಂದಿರನೋ ಭಯಭೀತನಾಗಿ ಕೆಲಸಕ್ಕೆ ರಜೆ ಹಾಕಿ ಹೋಗಿದ್ದಾನೆ! ಮರಗಿಡಗಳು ಅಲ್ಲಿಂದ ಕಾಲ್ಕಿತ್ತಲು ಪ್ರಯತ್ನಿಸುತ್ತಿವೆ, ಆದರೆ ಬೇರುಗಳು ಬಿಡುತಿಲ್ಲ! ಓ!! ದೂರದಲ್ಲೆಲ್ಲೋ ಸಣ್ಣಗೆ ಬೆಳಕು ಕಾಣುತ್ತಿದೆಯಲ್ಲಾ, ಹೇಗೋ ಬೆಳಕು ಬಂದರೆ ಸಾಕು, ಬೆಳಕು ಹಿಡಿದು ತಂದವರಾರು... ಬಾಗಿದ ಬೆನ್ನಿನಾಕೃತಿ ಹಾಗೊಂದು ಹೀಗೊಂದು ಸಣ್ಣಗೆ ಹೆಜ್ಜೆ ಹಾಕುತ್ತಿದ್ದ ಅದು ಮುದುಕಿ........ ಅದು ಹಿಡಿದ ಚಿಕ್ಕ ಸೀಮೆಎಣ್ಣೆಯ ಲಾಟೀನಿನ ಬೆಳಕಿಗೆ ಹೆದರಿ ಓಡುತ್ತಿದೆ ಕತ್ತಲು ಹೆಪುಗಟ್ಟಿದ್ದ ಕಪ್ಪುಗತ್ತಲು

ಹಸಿರುಡಲ್ಲೊಲ್ಲದ ಮರ

Image
ನದಿಯ ತಟದಲ್ಲೊಂದು ಬೋಳು ಬೋಳಾದ ಮರ ಅದರ ಬುಡದಲ್ಲೊಂದಿಷ್ಟು ಹಸಿರು ಹುಲ್ಲು ಬೋಳಾದ ಮರದಲ್ಲಿ ಹತ್ತಾರು ಕಾಗೆ ಗೂಡುಗಳು, ನದಿಯ ದಡದಲ್ಲಿದ್ದೂ ನೀರುಣ್ಣದ ಮರ, ಎಷ್ಟೇ ಗಾಳಿ ಬೀಸಿದರೂ ನಿಂತಿದೆ ಅಲುಗಾಡದೆ ಸುಮಾರು ವರುಷಗಳಾಗಿತಂತೆ ಹಾಗೆ ನಿಂತು ಯಾರನ್ನೋ ಕಾಯುತ್ತಿರುವಂತಿದೆ ಹಸಿರುಡಲ್ಲೊಲ್ಲದು, ಇರಬೇಕಂತೆ ಹೀಗೆ ವಿಧವೆಯಂತೆ ಯಾರದೋ ಮನೆಯ ಹಬ್ಬದಡುಗೆಗೆ, ಉರಿ ಹಚ್ಚಿದ ಒಲೆಯಬ್ ಕಟ್ಟಿಗೆಯಾಗಬೇಕಂತೆ ಅದಕ್ಕೆ ಈ ತಪಸ್ಸು

ಅನಾಥಾಶ್ರಮದಲ್ಲೊಂದು ದಿನ....

Image
ಮಕ್ಕಳೊಂದಿಬ್ಬರು ಇಹರು ಒಬ್ಬ ಅಮೇರಿಕೆಯಲ್ಲಿ ಸಾಫ್ಟವೇರು ಉದ್ಯೋಗಿ ಮದುವೆಯಾಗಿ ಚೆಂದದೆರಡು ಮಕ್ಕಳಿದ್ದಾರೆ ಇನ್ನೊಬ್ಬ ಆಷ್ಟ್ರೇಲಿಯಾದಲ್ಲಿಹನು ಯಾವುದೋ ಕಟ್ಟಡ ಕಟ್ಟುವ ಕೆಲಸದಲ್ಲಿ ಬುಸ್ಯಿಯಾಗಿದ್ದನೆ ಮದುವೆಯಾಗಿ ಒಂದೆರಡು ಮರುಷಗಳು ಕಳೆದಿವೆಯಷ್ಟೆ ಇವರಿಬ್ಬರ ಹೆತ್ತವರು ನಾವುಗಳು ಇಲ್ಲೇ ಇದ್ದೇವೆ ವೃದ್ಧಾಶ್ರಮದಲ್ಲಿ ಅಲ್ಲೊಂದು ಇಲ್ಲೊಂದು ಹೊತ್ತು ಕಳೆಯುತ್ತಾ, ನೇರವಾಗಿದ್ದ ಬೆನ್ನು ಕಾಮನಬಿಲ್ಲಂತೆ ಬಾಗುತಿಹುದು ತಿಂಗಳು-ತಿಂಗಳಿಗೆ ಹಣ ಕಳಿಸಿ ಸರಿಮಾಡುವರು ಹೆತ್ತಂದಿನಿಂದ ತೋರಿದ ಪ್ರೀತಿ ಮಮತೆಗೆ ಸುಮ್ಮನೆ ಬದುತಿದ್ದೇವೆ ಸಾಯಲಾರದೇ............

ಖಾಲಿ ಖಾಲಿಯಗಿದೆಯಲ್ಲಾ?

Image
ರತ್ರೋ ರಾತ್ರಿ ಆಗಸದಲ್ಲಿ ಮಿಣ ಮಿಣನೆ ಹೊಳೆಯಬೇಕಿದ್ದ ಚುಕ್ಕಿಗಳೇಕೋ ಸತ್ತು ಬಿದಿವೆಯಲ್ಲಾ? ಅಲ್ಲೊಂದು ಇಲ್ಲೊಂದು ಎಂದು ಹಾರಾಡಿಕೊಂಡು, ಚುಕ್ಕಿ-ಚಂದ್ರಮರ ತನ್ನ ಮೇಲಿರಿಸಿಕೊಂಡು ಓಡಾಡಿಕೊಂಡಿದ್ದ ನೀರ್ಮೋಡಗಳೇಕೋ ಕರಗಿ ಹೋಗಿವೆಯಲ್ಲಾ? ನಗೆಯ ಬೀರುತ, ಎಲ್ಲರನು ನಗಿಸುತ ಆಚಿಂದೀಚೆಗೆ ಬೆಳಕನೊತ್ತು ಓಡಾಡಿಕೊಂಡಿದ್ದ ಚಂದ್ರಮನೇಕೊ ಕಾಣುತ್ತಿಲ್ಲವಲ್ಲಾ? ಯಾರೂ ಇಲಾ ರಾತ್ರಿಯಾಗಸದಲ್ಲಿ ಖಾಲಿ ಖಾಲಿಯಗಿದೆಯಲ್ಲಾ? ಮಗು ಅಳುತ್ತಿದೆ, ಊಟ ಮಾಡಿಸಲು ಕಷ್ಟವಾಗುತ್ತಿದೆ, ಅಮ್ಮ ಚಂದಮಾಮನ ಹುಡುಕುತ್ತಿದ್ದಾಳೆ!!! ಮನೆಯ ಮಾಳಿಗೆಯ ಮೇಲೆ ಮಲಗಿದ್ದ ಹುಡುಗನಿಗೆ ಎಣಿಸಿಕೊಂಡು ಮಲಗಲು ಚುಕ್ಕಿಗಳೇ ಇಲ್ಲಾ, ಪೂರ್ವ-ಪಶ್ಚಿಮಗಳಿಗೆ ತಲೆಯಾಡಿಸಿಕೊಂಡು ಹುಡುಕುತ್ತಿದ್ದಾನೆ ಚುಕ್ಕಿಗಳ!!!!! ತನ್ನ ಗದ್ದೆಯ ಬದುವಿನ ಮೇಲೆ ಕೂತಿರುವ ರೈತನಿಗೆ ಬಿತ್ತಿರುವ ಬತ್ತದ್ದೇ ಚಿಂತೆ ಏಕೆಂದರೆ ಆಗಸದಲ್ಲಿ ಕಣ್ಗೆಟಕುವ ಒಂದೇ-ಒಂದು ಮೋಡವಿಲ್ಲಾ!!!! ಎಲ್ಲವೂ ಮುಚ್ಚಿ ಹೋಗಿವೆ ಸ್ಯಾಟಲೈಟುಗಳಿಂದ, ಮನುಷ್ಯನ ಮನಸ್ಸನ್ನು ಮುಚ್ಚಿಬಿಟ್ಟಿದೆ ವಿಜ್ನಾನ ಇತಿ ಮಿತಿ ಇಲ್ಲದೆ ಬಳಸಿದ್ದಕ್ಕೆ ಎಲ್ಲವೂ ಮೌನ ಮೌನ...............