Posts

Showing posts from April, 2012

ಮಸಣ ದಾರಿ

Image
ಮಸಣ ದಾರಿಗೆ ಹೂವು ಹಾಸಿದೆ ನವಿರು ಗಾಳಿಯು ಬೀಸಿದೆ ಶ್ವೇತ ಹೊದಿಕೆ ಮಣ್ಣ ಕುಡಿಕೆ ನಗುತ ವಿದಾಯವ ಹೇಳಿದೆ ಜಗದ ನಂಟು ಮುಗಿದುದುಂಟು ಇನ್ನೇಕೆ ಇಲ್ಲದ ಮುಜುಗರ ಅಳುವ ದಿನಗಳು ಮುಗಿದವಲ್ಲ, ನಿನ್ನ ಸಾವೇ ಸಡಗರ ಅಳುವರ್ಯಾರೋ ನಗುವರ್ಯಾರೋ ಇದೆಲ್ಲವು ನಾಟಕ ಮಂಚವು, ಬಂದ ಕೆಲಸವು ಮುಗಿಯಿತಿನ್ನು ಜೀವ ಸಾವಿಗೆ ಲಂಚವು

ಹನಿಗಳು

ಎಲೆ-ಎಲ್ಲೆ ~~~~~~~ ನೆಲಕೆ ಬಿದ್ದ ಒಣಗಿದೆಲೆಗೆ ಚಿಗುರ ಮೇಲೆ ಕೋಪ, ತೂಕಡಿಕೆ ~~~~~~~ ಗೋಡೆ ಮೂಲೆಯಲ್ಲಿ ಜೇಡ ಟೈಂ ಪಾಸಿಗೆ ಬಲೆ ಹೇಣೆಯುತಿತ್ತು, ತೂಕಡಿಕೊಂಡು ಹಾರುತಿದ್ದ ನೊಣ ಅಲ್ಲೇ ಬಿತ್ತು!!!! ಮೌ ನಾ ~~~~~ ಮೌನಕ್ಕೆ ಇರುವಷ್ಟು ತಾಕತ್ತು ಮಾತಿಗಿಲ್ಲ ಆಟೋಗ್ರಾಫ್ ಬುಕ್ಕು ~~~~~~~~~~~~~~~ ಹಳೆಯ ಡೈರಿಯಲ್ಲಿದ್ದ ಮುಖಗಳೆಲ್ಲ ನಸು ನಕ್ಕು ಮಾತನಾಡಿಸಿದವು ಕೆಲವು ಕ್ಯಾಕರಿಸಿ ಉಗಿದವೂ ಕೂಡ ಹೂ(ಡುಗಿ) ~~~~~~~ ಹುಡುಗಿ ಸಿಟ್ಟು ಬಂದು ಹಲ್ಲು ಮಸೆದು ನನ್ನ ಭುಜವ ಕಚ್ಚುತ್ತಿದ್ದಾಳೆ ಇರುಳ ನೆರಳು ~~~~~~~~~~ ಏ!! ಹುಡುಗಿ ನಿನ್ನ ನೆನಪುಗಳೆಲ್ಲ ನೆರಳಂತೆ ನನ್ನ ಹಿಂಬಾಲಿಸುತ್ತಿವೆಯಲ್ಲ, ಕಾರಿರುಳಲೂ ಸಹ!!!!!! ಚುಂಬನ ~~~~~~~ ಹರಿಯುತಿದ್ದ ನದಿ ಸುಮ್ಮನೇ ನಿಂತಿದ್ದ ದಡದಂಚಿಗೆ ಚುಂಬಿಸಿ ಪುಳಕಿಸುತಿತ್ತು ಕೆನ್ನೆ ಕುಳಿ ~~~~~~~ ಆಕೆ ನಗುವಾಗಲೆಲ್ಲಾ ಹುಟ್ಟಿ, ಬಂದ ಸಿಟ್ಟಿಗೆ ಸಾಯುತ್ತದೆ ಕಣ್ಣು ~~~~~~~~‘ ಕಪ್ಪು ಸುಂದರವೆಂದು ಗೊತ್ತಾಗಿದ್ದೇ ಆಕೆಯ ಕಣ್ಣು ಕಣ್ಣ ಹುಬ್ಬು ನೋಡಿದಾಗ ತಣಿದ ದಾಹ ~~~~~~~~~ ಬಿಸಿಲಲ್ಲಿ ಬಾಯಾರಿ ನೀರಿಗೆ ತಡಕಾಡುವಾಗ, ತುಟಿಯೊತ್ತಿ ತಣಿಸಿದಳು ನಿಶೆ ~~~~~~~~~ ಆಕೆಯಿಂದಲೇ ಸಂಜೆಗೆ ರಂಗೇರಿದ್ದು, ರಾತ್ರಿಗೆ ಮಂಪರೇರಿದ್ದು ನಿರೀಕ್ಷೆ ~~~~~~~~~ ಸಾಗರ ದಂಡೆಯಲಿ ಬಾಯ್

ಮಣ್ಣು-ಮೌನ

Image
ಎದೆಯೊಳಗೆ ತುಸು ಮೌನ, ಬಡಿದುಕೊಳ್ಳುತಿದ್ದ ಹೃದಯಕೂ, ತಂಬೂರಿಯ ತಂತಿ ನಡುಗುತ್ತಿದೆ ಯಾರಾದರು ಮೀಟಿಯಾರೆಂದು, ಕಣ್ಣ ಮಿಟುಕಿಸುವರಿಲ್ಲ ಇನ್ನೆಲ್ಲಿ ಮೀಟುವವರು.. ಕಿವಿಸತ್ತವನಿಗೂ ಕೇಳಿಸುವಷ್ಟು ಜೋರಾಗಿ ಕಿರುಚಬೇಕೆಂಬ ಬಯಕೆ, ಸುಮ್ಮನಾಗಿದೆ ಒಡಲು ಯಾರದೋ ಬೆಚ್ಚಗಿನ ಭಯಕೆ. ಸ್ವಾರ್ಥವಿದೆ ಮೌನಕೆ ಹಿಡಿ ಮರುಕವಿದೆ, ಎಲ್ಲವನು ಬಿಟ್ಟವರಿಗೆ ಮಾತು ಸರಕಾಗಿದೆ.  ಸತ್ತವರ ನೆರಳಂತೆ ಮಣ್ಣಾಗಿದೆ

ಹಿಂಬಾಲಿಸುತಿಹ ಸಾವೆ

Image
ಅಮ್ಮನ ಹೊಟ್ಟೆಯಲಿರುವಾಗಿನಿಂದ ಹಿಂಬಾಲಿಸುತಿಹ ಸಾವೆ, ನಾ ಹೆದರಲಾರೆ ನಿನಗೆ ಯಾಕೆಂದರೆ ನೀನೇ ಗತಿ ತಾನೆ ಜೀವನದ ಕೊನೆಗೆ...... ಮೌನ ಮಜ್ಜನದ ಎರಕ, ಸಾವೆ ನಾ ನೂಲು, ನೀ ಚರಕ, ಘಾಸಿಗೊಂಡವರದೆಲ್ಲ ಎರಡು ದಿನದ ಮರುಕ, ಒಮ್ಮೊಮ್ಮೆ ನೀ ಕಪ್ಪು, ಇನ್ನೊಮ್ಮೆ ನೀ ಬೆಳಕು, ರೌದ್ರವತೆಯ ಹೊತ್ತ ಸಾವೆ ಕೆಲವೊಮ್ಮೆ ಕೆಂಪಾದೆಯ, ರಕುತದೊಕುಳಿಯಾಡಿ ತಂಪಾದೆಯ ಜ್ವಾಲಾಮುಖಿಯ ಲಾವದಂತಾಗದಿರು ಸಾವೆ, ಚಿತೆಗೂ ನಿಲಕದಂತಾದೀತು ನನ ದೇಹ, ಮಣ್ಣಿಗೂ ಸೇರದಂತಾದೀತು. ಹಿಂಬಾಲಿಸು ಸಾವೆ ನನ್ನ ಅಳುತಿಹ ಕಂದನ ಕಣ್ಣೊಳಗಿನ ನೀರಂತೆ, ಹುಲಿಗುಡ್ಡದಲಿ ಕೂತಾಗ ಬೀಸಿದ ತಣ್ಣನೆಯ ಗಾಳಿಯಂತೆ, ಹಿಂಬಾಲಿಸುತಿಹ ಸಾವೇ.............