Posts

Showing posts from April, 2011

ಬಾಳು ಪಯಣಿಸುತ್ತಿದೆ

Image
ಬಾಳು ಪಯಣಿಸುತ್ತಿದೆ ದೂರದೆಡೆಗೆ, ಕೈಗೆಟುಕಲಾರದ ಕನಸೆಂಬ ಕುಟುಕಿನೆಡೆಗೆ, ನಾನು ನನ್ನದೆಂಬ ಅಹಂ ಇದೆ ಕೋಪವಿದೆ, ಬದುಕ ಬಿಡೆನೆಂಬ ಕ್ರೂರತನವಿದೆ, ಸುಳ್ಳೆಂಬ ನಾಲಿಗೆಯಿದೆ..... ಆದರೂ ಬಾಳು ಪಯಣಿಸುತ್ತಿದೆ!! ಸತ್ಯವೆಲ್ಲ ಘೋರಿಯೊಳಗೆ ಮಣ್ಣೋದ್ದು ಮಲಗಿರಲು ಕಪಟ ಮೋಸಗಳೆಲ್ಲ ರೆಕ್ಕೆ ಬಂದು ಸ್ವಚ್ಚಂದದಿ ಹಾರಾಡುತಿವೆ, ಅವುಗಳನೇ ಪಾರಿಜಾತಗಳೆಂದು ಹೆಗಲೇರಿಸಿಕೊಂಡಿದ್ದೇವೆ.... ಆದರೂ ಬಾಳು ಪಯಣಿಸುತ್ತಿದೆ!!! ಮಹಾನ್ ಪುರುಷರೆಲ್ಲ ಸತ್ಯಕ್ಕೆ ಜೈಯೆಂದು ಕುಣಿಗೆ ಕೊರಳೊಡ್ಡಿ ಪ್ರಾಣವನೆ ಬಿಡುವಾಗ ಕೇಕೆ ಹಾಕಿ ನೋಡಿ ನಗುತ್ತಿದ್ದಾರೆ, ಇವರೆಲ್ಲ ನಮ್ಮ ಸುತ್ತ ಇದ್ದಾರೆ ಆದರೂ ಬಾಳು ಪಯಣಿಸುತ್ತಿದೆ!!! ಕಾರಿರುಳ ರಾತ್ರಿ ಬೆಳಕಿಲ್ಲ ಬರೀ ಭಯ, ಮನಸಲ್ಲಿ ಅಳುಕು... ದೂರದಲ್ಲೆಲ್ಲೊ ಮಿಣ ಮಿಣನೆ ಹೊಳೆಯುತಿಹ ಚುಕ್ಕಿಯಿದೆ, ಸಾಗುತಿಹ ಬಾಳು ಸರಿ ಹೋದಿತೆಂಬ ಭರವಸೆಯಿದೆ....

"ಮೊದಲ ಮಳೆಗೆ"

Image
ಚಿಟ-ಪಟ ಎಂದು ಸುರಿಯುತ್ತಿರೋ ಮಳೆಯಲ್ಲಿ ನೆನೆಯುವಾಗಲೆಲ್ಲ ಅವಳೇ ನೆನಪಾಗುತ್ತಾಳೆ, ಮುಂಜಾನೆಯಿಂದ ಬೆವರಿಳಿಸೋ ಬಿಸಿಲು ಮಾಯವಾಗಿ ತಂಪಾಗಿದೆ ಧರಣಿ, ಮರದೆಲೆಯ ಮೇಲಿಂದ ಬಿದ್ದ ನೀರಿನ ಹನಿ ನನ್ನವಳ ನೆನಪಾಗಿಸಿತ್ತು, ಬಿದ್ದದರ ಸದ್ದು ಕಿವಿಯ ಇಂಪಾಗಿಸಿತ್ತು, ಮೊದಲ ಮಳೆಗೆ ಮೈಯೆಲ್ಲಾ ಒದ್ದೆ, ಮನಸೆಲ್ಲ ಮುದ್ದೆ, ಅವಳ ನೆನಪಿಗೆ ಮಾಯವಾಗಿತ್ತು ಪ್ರೀತಿಯ ನಿದ್ದೆ.... ಮಳೆ ನಿಂತು ಗಂಟೆಯಾಗಿದೆ, ಅದರ ಗುಂಗಲ್ಲೇ ಅಲ್ಲೇ ನಿಂತಿದ್ದೇನೆ, ತಣ್ಣಗೆ ಬೀಸುತ್ತಿದ್ದ ಗಾಳಿ, ನಿಂತ ನೀರು, ನಾನೊಬ್ಬನೇ ಓ ಮರೆತಿದ್ದೆ ಅವಳ ನೆನಪು.... ಮತ್ಯಾರು ಇಲ್ಲ....

ಅವಳಿತ್ತಿರುವ ನೋವಿನ ಪ್ರೀತಿಗೆ ಪ್ರತಿಯಾಗಿ!!

Image
ನನ್ನ ಮೌನದ ಹೊರತು ಅವಳಿಗೇನು ಉಡುಗೊರೆಯ ಕೊಡಲಾರೆ ಅವಳಿತ್ತಿರುವ ನೋವಿನ ಪ್ರೀತಿಗೆ ಪ್ರತಿಯಾಗಿ!! ಒಂದಿಷ್ಟು ಕವಿತೆಗಳ ಗುಚ್ಛವಿದೆ ಅವಳ ನೆನಪಲ್ಲಿ ಬರೆದವು, ನೆನಪಾರುವ ಮೊದಲು ಸುಟ್ಟು ಹಾಕುವ ಎಂದು!!!! ಕನಸುಗಳು ಜಾರುತಿವೆ ಕಪ್ಪಿಟ್ಟಿಹ ಶರಥಿಯೆಡೆಗೆ, ಕ್ರೂರವಲ್ಲದ ಪ್ರೀತಿಯ ನವಿರದ ನೋವು ನನ್ನವಳು ನನಗಿತ್ತ ನವಿಲಗರಿ, ನೀನಿಲ್ಲದೆ ಬದುಕಬಲ್ಲೆ ಹುಡುಗಿ ನಿನ್ನ ನೆನಪಿಲ್ಲದೆ.........................

ನನ್ನ ನೆರಳೂ ಅಲ್ಲೆಲ್ಲೋ ಸತ್ತು ಬಿದ್ದಿದೆ,

Image
ನನ್ನೊಡನೆ ಬರುತ್ತಿದ್ದ ನನ್ನ ನೆರಳೂ ಅಲ್ಲೆಲ್ಲೋ ಸತ್ತು ಬಿದ್ದಿದೆ, ಪ್ರೀತಿ ಎಂಬೊ ವಿಷಪ್ರಾಶನವಾಗಿರಬೇಕು, ಕಪ್ಪಿದ್ದ ನನ್ನ ನೆರಳು ವಿಷಕೆ ನೀಲಿಯಾಗಿದೆ...... ಕೊಲೆಗಾತಿ ಇನ್ನೂ ನನ್ನ ಹೃದಯದಲ್ಲೇ ಬಚ್ಚಿಟ್ಟುಕೊಂಡಿದ್ದಾಳೆ, ನಗುತ್ತಿದ್ದಾಳೆ ಹಲ್ಲು ಕಿರಿದು!! ಅವಳೇ ಮುತ್ತಿಟ್ಟ ಕೆನ್ನೆಯ ಮೇಲೆ ಕಣ್ಣೀರು ಜಾರುವಾಟವಾಡುತ್ತಿದೆ!! ಅವಳ ನೆನಪಲ್ಲೇ ಹುಟ್ಟು ಪಡೆದಿದ್ದ ಕವನಗಳ ಅಕ್ಷ್ರರಗಳು ಸತ್ತು ಉದುರುತ್ತಿವೆ...... ಅವಳೆ ನೆಟ್ಟು ಬೆಳೆಸಿದ್ದ ಕನಸುಗಳು ಕಮರುತ್ತಿವೆ......