Posts

Showing posts from October, 2010

ಯೋಧ

Image
ಮೊನ್ನೆಯಷ್ಟೆ ಮದುವೆಯಗಿದ್ದ ಆಗಲೇ ಗಡಿಯಲ್ಲಿ ಕಾವಲಿಗೆ ಕರೆಬಂದಿದೆ ದೇಶ ಸೇವೆಗೆ ಹೋಗಲೇಬೇಕು ಹೆಂಡತಿಯ ಕೆನ್ನೆಯ ಮೇಲಿನ ಅರಿಸಿಣದ ರಂಗಿನ್ನು ಅಳಿಸಿಲ್ಲ ಮಧು ಮಂಚದ ಮೇಲಿರುವ ಹೂವಿನ್ನು ಬಾಡಿಲ್ಲ ಇಬ್ಬರ ಮನದಲ್ಲೂ ದುಗುಡ ಬಟ್ಟೆ-ಬರೆಗಳೆಲ್ಲಾ ಬ್ಯಾಗಿನಲಿ ತುಂಬಿ ದೇವರಿಗೆ ಕೈ ಮುಗಿದು ಹೊರದುತಿಹನು ಹೆಂಡತಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಮನದಲ್ಲಿ ಭಯ ತುಂಬಿಕೊಂಡು ಕೈ ಬೀಸುತಿಹಳು.... ಅವನು ಓಡಿ ಬಂದವನೇ ಕವಳನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಕ್ಕಿದ ಮತ್ತೆ ಬರುವೆನೆಂದು..... ಒಳ ನುಸುಳುತಿಹ ಉಗ್ರರನು ತಡೆಯಲು ಜೀವದಾಸೆಯ ತ್ಯಜಿಸಿ ದೇವರನು ಮನದೊಳಗೆ ನೆನೆಸಿ ಬಂದೂಕನು ಹಿಡಿದು ಹೊರಟೇ ಹೊರಟ.... ಗುಂಡಿನ ಮೇಲೆ ಉಗ್ರರ ಹೆಸರು ಬರೆದಿರುವಂತೆ ಅವರೆಲ್ಲರ ಎದೆಗಳ ಸೀಳುತ ಭೋರ್ಗರೆದವು... ರೌದ್ರತೆ ಆಕಾಶದೆತ್ತರಕೆದ್ದಿತ್ತು ಶಾಂತಿ ನೆಲ ಕಚ್ಚಿತ್ತು ಸ್ವಲ್ಪ ಹೊತ್ತಿನಲ್ಲೇ ಎಲ್ಲಿಂದಲೋ ಬಂದ ಗುಂಡು ಎಡ ಎದೆಯ ಹೊಕ್ಕಿತ್ತು ದೇಹ ನೆಲವನರಸಿತ್ತು "ಮೇರಾ ಭಾರತ್ ಮಹಾನ್" ಎಂಬ ದ್ವನಿ ಹೊರಡಿಸಿತು ಬಾಯಿ ಕಣ್ ಗಳಲಿ ತನಗಾಗಿ ಕಾಯುತಿಹ ಹೆಂಡತಿಯ ಚಿತ್ರವಷ್ಟೇ ಜೀವ ದೇಹವ ಬಿಟ್ಟಾಗಲೂ ಮನಸು ತುಡಿಯುತಲೇ ಇತ್ತು........

ಗುಬ್ಬಿ ಮತ್ತು ಹೆಮ್ಮರ

Image
ನೂರಾರು ವರುಷಗಳಿಂದ ಬದುಕಿದ್ದ ಹೆಮ್ಮರವೊಂದು ಬಿಕ್ಕಿಸಿ ಬಿಕ್ಕಿಸಿ ಅಳುತ್ತಿತ್ತು, ಕೊಂಬೆ ಮೇಲೆ ಕೂತಿದ್ದ ಗುಬ್ಬಿ ಅಳುವ ಕಾರಣ ಕೇಳಿತು.... ಮಂತ್ರಿ ಹೊಸಮನೆಗೆ ಹೊಸ ಕಿಡಕಿ ಬಾಗಿಲುಗಳು ಬೇಕಂತೆ ಅದಕೆ ನನ್ನ ಬುಡದಿಂದ ಕತ್ತರಿಸುವರಂತೆ..... ಅದಕೆ ಗುಬ್ಬಿ ಸಮಾಧಾನಪಡಿಸಲು ಎಲ್ಲರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು ತಾನೆ ಎನ್ನಲು, ಮರ ಗೊಣ್ಣೆ ಒರೆಸಿಕೊಳ್ಳುತ್ತಾ ಅಳುತ್ತಿರುವುದು ನಾ ಸಾಯುತ್ತೇನೆಂದಲ್ಲ! ಇಷ್ಟು ದಿನ ನನ್ನ ತಬ್ಬಿಕೊಂಡು ಮಲಗುತ್ತಿದ್ದ ಲತೆ ಒಂಟಿಯಾಗುವಳೆಂದು! ಈಗ ಅಳುವ ಸರದಿ ಗುಬ್ಬಿಯದು....

ಪ್ರೀತಿಯ ಮಾಯೆಯೊಳಗೆ......

Image
ಪ್ರೀತಿಸುವವರು ಕೆಲವೊಬ್ಬರು ಹುಚ್ಚರಾಗುತ್ತಾರೆ, ಹುಚ್ಚು ಪ್ರೇಮಿಗಳಾಗುತ್ತಾರೆ, ಹುಡುಗಿ ಕೈ ಕೊಟ್ಟರೆ ಬಾಟಲಿ ಹಿಡಿದು ದೇವ ದಾಸರಾಗುತ್ತಾರೆ.... ಕೆಲವೊಂದು ಸಾರಿ ಹುಡುಗಿಯ ಮಡಿಲಲ್ಲಿ ಮಲಗಿ ಮಗುವಾಗುತ್ತಾರೆ, ಮಾಯವಾಗುತ್ತಾರೆ, ಜಗತ್ತೇ ಕಾಣದ ಕುರುಡರಾಗುತ್ತಾರೆ.... ಪ್ರೀತಿಸಿದ ಹುಡುಗಿ ಕನಸಾದರೆ ಹುಡುಗರು ಕವಿಗಳಾಗುತ್ತಾರೆ ಪ್ರೀತಿ ಕವನವಾಗುತ್ತದೆ.... ಪ್ರೀತಿಯೆಂಬ ಮಾಯೆಯೊಳಗೆ ಸಿಕ್ಕವರು ತಿರುವು ಪಡೆಯುತ್ತಾರೆ ಆ ತಿರುವು ಅವರ ಪ್ರೀತಿಯನ್ನವಲಂಬಿಸಿದೆ ಪ್ರೀತಿ ಹುಡುಗಿಯನ್ನವಲಂಬಿಸಿದೆ.......