ಹೊರ ನಡೆದವು ಹನಿಗಳು

ಜಾರುವ ತವಕದಲ್ಲಿದ್ದ
ಕಣ್ಣ ಹನಿಗಳಲ್ಲಿ ಪ್ರಥಿಫಲಿಸಿ
ಹಾರುತ್ತಿದ್ದ ಬೆಳಕು
ಫಳಫಳನೆ ಹೊಳೆಯುತ್ತಿತ್ತು
ಹನಿಗಳೊಳಗಿನ ನೋವ
ಹೊರದೆಗೆದು ಎಲ್ಲರಿಗು
ತೋರಲೆತ್ನಿಸುತಿತ್ತು,
ನೋವೇನೆಂದು ಕಣ್ಣಿಗೂ
ಗೊತ್ತಿಲ್ಲ
ಕಂಗಳ ಕಾವಲಿದ್ದ ರೆಪ್ಪೆಗಳು
ತಡೆಯಲೆತ್ನಿಸುತಿದ್ದವು
ಹನಿಗಳು ಹೊರ ಹೋಗದಂತೆ,
ಅಲ್ಲೇ ಮುದುರಿಕೊಂಡು ಕುತಿದ್ದವು
ಬೆಚ್ಚಗೆ,
ಬೆಚ್ಚಗಾಗುತ್ತಲೆ ಆವಿಯಾಗಿ
ಹೊರ ನಡೆದವು ಹನಿಗಳು
ಯಾರಿಗೂ ಕಾಣದಂತೆ
Comments
Post a Comment
ಅನ್ಸಿದ್ ಬರೀರಿ