ಅನಾಥಾಶ್ರಮದಲ್ಲೊಂದು ದಿನ....

ಮಕ್ಕಳೊಂದಿಬ್ಬರು ಇಹರು
ಒಬ್ಬ ಅಮೇರಿಕೆಯಲ್ಲಿ
ಸಾಫ್ಟವೇರು ಉದ್ಯೋಗಿ
ಮದುವೆಯಾಗಿ
ಚೆಂದದೆರಡು ಮಕ್ಕಳಿದ್ದಾರೆ
ಇನ್ನೊಬ್ಬ ಆಷ್ಟ್ರೇಲಿಯಾದಲ್ಲಿಹನು
ಯಾವುದೋ ಕಟ್ಟಡ ಕಟ್ಟುವ
ಕೆಲಸದಲ್ಲಿ ಬುಸ್ಯಿಯಾಗಿದ್ದನೆ
ಮದುವೆಯಾಗಿ ಒಂದೆರಡು
ಮರುಷಗಳು ಕಳೆದಿವೆಯಷ್ಟೆ
ಇವರಿಬ್ಬರ ಹೆತ್ತವರು
ನಾವುಗಳು ಇಲ್ಲೇ ಇದ್ದೇವೆ
ವೃದ್ಧಾಶ್ರಮದಲ್ಲಿ
ಅಲ್ಲೊಂದು ಇಲ್ಲೊಂದು
ಹೊತ್ತು ಕಳೆಯುತ್ತಾ,
ನೇರವಾಗಿದ್ದ ಬೆನ್ನು
ಕಾಮನಬಿಲ್ಲಂತೆ ಬಾಗುತಿಹುದು
ತಿಂಗಳು-ತಿಂಗಳಿಗೆ ಹಣ
ಕಳಿಸಿ ಸರಿಮಾಡುವರು
ಹೆತ್ತಂದಿನಿಂದ ತೋರಿದ
ಪ್ರೀತಿ ಮಮತೆಗೆ
ಸುಮ್ಮನೆ ಬದುತಿದ್ದೇವೆ
ಸಾಯಲಾರದೇ............
Comments
Post a Comment
ಅನ್ಸಿದ್ ಬರೀರಿ