ಖಾಲಿ ಖಾಲಿಯಗಿದೆಯಲ್ಲಾ?


ರತ್ರೋ ರಾತ್ರಿ ಆಗಸದಲ್ಲಿ
ಮಿಣ ಮಿಣನೆ ಹೊಳೆಯಬೇಕಿದ್ದ
ಚುಕ್ಕಿಗಳೇಕೋ ಸತ್ತು ಬಿದಿವೆಯಲ್ಲಾ?
ಅಲ್ಲೊಂದು ಇಲ್ಲೊಂದು ಎಂದು
ಹಾರಾಡಿಕೊಂಡು, ಚುಕ್ಕಿ-ಚಂದ್ರಮರ
ತನ್ನ ಮೇಲಿರಿಸಿಕೊಂಡು
ಓಡಾಡಿಕೊಂಡಿದ್ದ ನೀರ್ಮೋಡಗಳೇಕೋ
ಕರಗಿ ಹೋಗಿವೆಯಲ್ಲಾ?
ನಗೆಯ ಬೀರುತ, ಎಲ್ಲರನು
ನಗಿಸುತ ಆಚಿಂದೀಚೆಗೆ ಬೆಳಕನೊತ್ತು
ಓಡಾಡಿಕೊಂಡಿದ್ದ ಚಂದ್ರಮನೇಕೊ
ಕಾಣುತ್ತಿಲ್ಲವಲ್ಲಾ?
ಯಾರೂ ಇಲಾ ರಾತ್ರಿಯಾಗಸದಲ್ಲಿ
ಖಾಲಿ ಖಾಲಿಯಗಿದೆಯಲ್ಲಾ?
ಮಗು ಅಳುತ್ತಿದೆ, ಊಟ ಮಾಡಿಸಲು
ಕಷ್ಟವಾಗುತ್ತಿದೆ,
ಅಮ್ಮ ಚಂದಮಾಮನ ಹುಡುಕುತ್ತಿದ್ದಾಳೆ!!!
ಮನೆಯ ಮಾಳಿಗೆಯ ಮೇಲೆ
ಮಲಗಿದ್ದ ಹುಡುಗನಿಗೆ ಎಣಿಸಿಕೊಂಡು
ಮಲಗಲು ಚುಕ್ಕಿಗಳೇ ಇಲ್ಲಾ,
ಪೂರ್ವ-ಪಶ್ಚಿಮಗಳಿಗೆ
ತಲೆಯಾಡಿಸಿಕೊಂಡು ಹುಡುಕುತ್ತಿದ್ದಾನೆ ಚುಕ್ಕಿಗಳ!!!!!
ತನ್ನ ಗದ್ದೆಯ ಬದುವಿನ ಮೇಲೆ ಕೂತಿರುವ
ರೈತನಿಗೆ ಬಿತ್ತಿರುವ ಬತ್ತದ್ದೇ ಚಿಂತೆ
ಏಕೆಂದರೆ ಆಗಸದಲ್ಲಿ ಕಣ್ಗೆಟಕುವ
ಒಂದೇ-ಒಂದು ಮೋಡವಿಲ್ಲಾ!!!!
ಎಲ್ಲವೂ ಮುಚ್ಚಿ ಹೋಗಿವೆ
ಸ್ಯಾಟಲೈಟುಗಳಿಂದ,
ಮನುಷ್ಯನ ಮನಸ್ಸನ್ನು ಮುಚ್ಚಿಬಿಟ್ಟಿದೆ ವಿಜ್ನಾನ
ಇತಿ ಮಿತಿ ಇಲ್ಲದೆ ಬಳಸಿದ್ದಕ್ಕೆ ಎಲ್ಲವೂ ಮೌನ ಮೌನ...............

Comments

  1. super le tamma.........ekaangi here......

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ