Posts

Showing posts from July, 2010

ನಲ್ಲೆಗೊಂದು ಪತ್ರ

Image
ಪ್ರಿಯೆ..... ನಲ್ಲೆ ಹೇಗಿದ್ದೀಯ? ನಾ ಕೊಟ್ಟಿದ್ದ ಹೂ ಹೇಗಿದೆ ಸೌಖ್ಯ ತಾನೆ? ನಿನ್ನ ಜೋತೆ ಕಳೆದ ಕ್ಷಣಗಳು ಆಗಾಗ ನನ್ನ ಕಣ್ ರೆಪ್ಪೆಯ ಹಿಂದೆ ಬಂದು ಕಾಡುವವು, ನೀ ನನ್ನೊಂದಿಗೆ ಹಾಕಿದ ಹೆಜ್ಜೆಗಳು ನನ್ನ ಸುತ್ತ-ಮುತ್ತ ಸುಳಿದಾಡುತ್ತಿವೆ ಏನೋ ಎನಿಸುತ್ತಿದೆ ಪಾರ್ಕಿನಲಿ ನಾವು ಗಂಟೇಗಟ್ಟಲೆ ಹರಟಿದ್ದು, ಅಲ್ಲೇ ಮಾರುತ್ತಾ ಹೊರಟಿದ್ದ ಚಿಪ್ಸ್ ಗಳನ್ನು ತಗೊಂಡೆ ಆದರೆ ಪರ್ಸು ರೂಮಿನಲ್ಲೆ ಮರೆತಿದ್ದೆ, ದುಡ್ಡು ನೀನೆ ಕೊಟ್ಟೆಯಲ್ಲಾ......... ಒಂದೊಮ್ಮೆ ಸುಮಾರು ಏಳೆಂಟು ಕಿಲೋಮೀಟರ್ ನಡೆದೆವು ನೆನಪಿದೆಯ, ಹೇಗೆ ತಾನೆ ಮರಿತೀಯ ಬಿಡು. ಉಸ್ಸಪ್ಪಾ! ಅಂತಾ ನಡೇಯೊಕಾಗದೆ ಅಲ್ಲಲ್ಲಿ ಕೂತದ್ದು ಎಲ್ಲವೂ ಹಚ್ಚ ಹಸಿರು.... ನೀನು ಐಸ್ ಕ್ರೀಮು ಕೊಡ್ಸು ಅಂತ ಕೇಳಿದಾಗ ನಾನು ಕೊಡಿಸದೆ ಸತಾಯಿಸಿದ್ದು, ಕೋಪ ಬಂದು ಮೌನ ಗೌರಿಯಾಗಿದ್ದು. ನಗೆ ಬಂದು ಹೋಗುತ್ತದೆ... ನೀನು ಅಪ್ಪಿ ಕೆನ್ನೆಗಿಟ್ಟ ಮುತ್ತು ಇನ್ನು ನನ್ನಲ್ಲೇ ಜೋಪಾನವಾಗಿದೆ, ನಿನ್ನ ಮುಂಗುರಳ ನೇವರಿಸಿದ ನನ್ನ ಬೇರಳುಗಳು ಹಾಗೆ ಖುಷಿಯಾಗಿವೆ................... ನಿನ್ನ ನೆನಪುಗಳಲ್ಲೆ ಕಾಲ ಕಳೆಯುತಲಿರುವೆ, ನಿನ್ನ ದಾರಿಯಲಿ ಹಚ್ಚಿಟ್ಟ ಮೇಣದ ಬತ್ತಿ ಕರಗುವ ಮುನ್ನ ಬಾ ಗೆಳತಿ.... ಇಂತಿ ನಿನ್ನವ ಪ್ರವರ

ಬಾನುವಾರದ ಸಂಜೆಯಲಿ....

Image
ಬಾನುವಾರದ ಸಂಜೆಯಲಿ ನಾನು ನನ್ನವಳು ಹಾಗೆ ಹೆಜ್ಜೆ ಹಾಕುತ್ತಾ ಹೊರಟಿದ್ದೆವು ಎಲ್ಲಿಗೆಂದು ನನಗೂ ಗೊತ್ತಿಲ್ಲಾ! ಅಲ್ಲೊಂದು ಇಲ್ಲೊಂದು ಹಕ್ಕಿಗಳ ಪಿಚಿ-ಪಿಚಿ ಸದ್ದು ಬಿಟ್ಟರೆ ನಮ್ಮ ಉಸಿರಾಟದ ಸದ್ದು ಆಗಾಗ ಜೋರಾಗುತಲಿದ್ದ ಎದೆ ಬಡಿತದ ಸದ್ದು..... ಏಕೋ ಮೌನವೇ ನಮ್ಮಿಬ್ಬರನು ದೂರ ನಡೆಸುತಲಿತ್ತು ಅವಳು ಕೈ ಕಟ್ಟಿ ನೆಲವನ್ನೇ ನೋಡುತ್ತಾ ನಡೆಯುತ್ತಿದ್ದರೆ, ನಾನು ಅಕ್ಕ ಪಕ್ಕದ ಮರಗಳ ಎಲೆಗಳ ಹಿಡಿಯಲೆತ್ನಿಸುತಿದ್ದೆ... ತಣ್ಣನೆಯ ಗಾಳಿ ನಮ್ಮೊಡನೆ ಸಂಚರಿಸುತಿತ್ತು... ನನ್ನವಳು ಮುಡಿಯಲ್ಲಿ ಮುಡಿದಿದ್ದ ಹೂವಿನ ಪರಿಮಳವ ಹಿಡಿಯಲು ಹೊಂಚು ಹಾಕಿತ್ತೋ ಏನೊ... ಹಿಂತಿರುಗಿ ನೋಡಿದೆ ನಾವು ನಡೆದ ಹಾದಿ ನಮ್ಮನ್ನೇ ಎದುರು ನೋಡುತಲಿತ್ತು.....

ನಗು ತುಟಿಗೆ, ಸಿಟ್ಟು ಮೂಗಿಗೆ

Image
ಎಷ್ಟೋ ಸಾರಿ ಅವಳೊಂದಿಗೆ ಜಗಳವಾಡುತ್ತೇನೆ ಅದೂ ಕಾರಣವಿಲ್ಲದೆ ಮುನಿಸುಗುಟ್ಟಿದ ಮುಖದಲ್ಲಿ ನಗುವುಳ್ಳ ಸಿಟ್ಟು ನಗು ತುಟಿಯ ತುದಿಗಾದರೆ, ಸಿಟ್ಟು ಮೂಗಿನ ತುದಿದೆ, ಎಷ್ಟೋ ಸಾರಿ ಮೂಗಿನ ತುದಿಯನ್ನು ಬೆರಳಿಂದ ಕೊಡವಿದ್ದೇನೆ, ಆದರೂ ಸಿಟ್ಟು ಹಾಗೆ ಅಂಟಿಕೊಂಡಿದೆ, ಕೊಟ್ಟ ಹೂವಿನ ದಳಗಳ ಕಿತ್ತೊಸೆದು ಸಿಡುಕುವಳು.... ಗಂಟೆಗಟ್ಟಲೆ ಮೌನ, ನಾನೆಷ್ಟೇ ಮಾತನಾಡಿಸಿದರೂ ಮೌನದ ಪ್ರತಿಭಟನೆ ಚಿನ್ನ-ರನ್ನವೆಂದರೂ ಉಪಯೋಗವಿಲ್ಲ, ಹಾಡಿದರೆ ಕಿವಿ ಮುಚ್ಚಿಕೊಂಡು ದೂರ ಹೋಗುವಳು ಕೊನೆಗೆ ಗಟ್ಟಿಯಾಗಿ ಅಪ್ಪಿ ಮುತ್ತಿಟ್ಟರೆ, ನನ್ನ ಜೋರಾಗಿ ದೂಡಿ ನಕ್ಕು ಬಿಡುವಳು ಹಾಗೆ ನಾ ನನ್ನ ಮರೆಯುವಂತೆ....

ನಾವು ಮಳೆಯಲಿ ತೋಯ್ದದ್ದು

Image
ಒಮ್ಮೆ ನಾನು ನನ್ನ ಗೆಳತಿ ಸುಮ್ಮನೆ ಕುಳಿತು ಹರಟುತ್ತಿದ್ದೆವು ಎಲ್ಲಿಂದಲೋ ಬಂದ ತರಗೆಲೆಗಳು ನಮ್ಮ ತಲೆಯ ಮೇಲೆ ಹಾಗೆ ತುಪು-ತುಪುನೆ ಉದುರಿದವು, ಇಬ್ಬರೂ ಕಣ್ಮುಚ್ಚಿದೆವು, ಮತ್ತೆ ಮಿಂಚು ಗುಡುಗು ಹೆದರಿ ನನ್ನೆದೆಯ ಮೇಲೆ ಹಾಗೆ ಅವುಚಿಕೊಂಡಳು, ಮಳೆ ಬರಬಹುದೆಂದು ಅಂದುಕೊಳ್ಳುವಷ್ಟರಲ್ಲಿ, ಹನಿಗಳು ನಮ್ಮ ತೋಯಿಸಿದವು, ಅವಳು ಮಳೆರಾಯನ ಬಯ್ದುಕೊಂಡಳು, ತುಂತುರು ಮಳೆ, ಬೆಚ್ಚನೆಯ ಅಪ್ಪುಗೆ ಇನ್ನೇನು ಬೇಕು ನನಗೆ, ಇಲ್ಲಿಂದಲೆ ಸಲಾಮು ಮಳೆರಾಯನಿಗೆ ಹಾಕಿದೆ.......

ಸಿಡುಕುತಿದ್ದಾನೆ ಕಾಲ

Image
ಉರುಳುತಿಹವು ದಿನಗಳು ಒಂದರ ಹಿಂದೊಂದರಂತೆ ಹಳೆಯ ತಲೆಗಳೆಲ್ಲಾ ಭೂಮಿಯೊಡಲ ಸೇರುತಿಹವು, ಹೊಸತುಗಳೆಲ್ಲಾ ಒಡಲಿಂದ ಸೇರುತಿಹವು ತಮ್ಮ ತಾಯಿ ಮಡಿಲಿಗೆ ಅಳುತ್ತಾ. ಮರದ ಬೇರುಗಳೆಲ್ಲಾ ಆಳ ಸೇರುತಿಹವು ಯಾರೀಗೂ ಕಾಣದಂತೆ, ರೆಂಬೆ ಕೊಂಬೆಗಳೆಲ್ಲಾ ಒಂದಿಷ್ಟು ದಿನ ಹಸಿರಾಗಿ, ಇನ್ನೋಂದಿಷ್ಟು ದಿನ ಒಣಗಿ ಈಗ-ಈಗೀಗ ಸೊರಗುತಿವೆ ಕಾಲನ ಓಟಕ್ಕೆ ಮರುಗಿ. ಮೋಡಗಳ ಹೊಡೆದಾಟಕ್ಕೆ ಉದುರಿದ ಮಳೆ ಹನಿಗಳು ಓಡೋಡಿ ಬಂದು ತಬ್ಬುತಿವೆ ಸುಂದರಿ ವಸುಂಧರಿಯ ಜಾಗತೀಕರಣದ ಹೋಡೆತಕ್ಕೆ ಬದಲಾಗುತ್ತಿದ್ದಾನೆ ಕಾಲ ತನ್ನ ನಿಜ ಸ್ವರೂಪ ತೋರಿಸಲಿದ್ದಾನೆ,

ಹುಬ್ಬು ಕಾಮನಬಿಲ್ಲು

Image
ತುಂಬು ಮಲ್ಲಿಗೆಯ ನಗೆಯು ಕೆಂದುಟಿಯ ಮೇಲೆ ಒತ್ತಾಗಿ ಕಣ್ಸೆಳೆವ ಕಾಮನ ಬಿಲ್ಲಿನ ಹುಬ್ಬಿಗೆ ಕಾಡಿಗೆಯ ಕಪ್ಪು ಸಂಪಿಗೆ ಹೂವಿನ ಅಂದವನ್ನೇ ಕದ್ದು ತನ್ನೊಳಗಡಗಿಸಿಕೊಂಡಿಹ ಮೂಗು ಅದಕ್ಕೊಂದು ಚಿನ್ನದ ನತ್ತು, ಗುಲಾಬಿಯ ನುಣುಪಿನ ಕೆನ್ನೆ ಇಂಥಹ ನನ್ನ ಮನದರಸಿಯ ಮೊಗಕ್ಕೆ ಅಂದದ ನಗು.......