"ಮೊದಲ ಮಳೆಗೆ"

ಚಿಟ-ಪಟ ಎಂದು ಸುರಿಯುತ್ತಿರೋ ಮಳೆಯಲ್ಲಿ
ನೆನೆಯುವಾಗಲೆಲ್ಲ ಅವಳೇ ನೆನಪಾಗುತ್ತಾಳೆ,
ಮುಂಜಾನೆಯಿಂದ ಬೆವರಿಳಿಸೋ ಬಿಸಿಲು
ಮಾಯವಾಗಿ ತಂಪಾಗಿದೆ ಧರಣಿ,
ಮರದೆಲೆಯ ಮೇಲಿಂದ ಬಿದ್ದ ನೀರಿನ ಹನಿ
ನನ್ನವಳ ನೆನಪಾಗಿಸಿತ್ತು, ಬಿದ್ದದರ ಸದ್ದು
ಕಿವಿಯ ಇಂಪಾಗಿಸಿತ್ತು,
ಮೊದಲ ಮಳೆಗೆ ಮೈಯೆಲ್ಲಾ ಒದ್ದೆ, ಮನಸೆಲ್ಲ ಮುದ್ದೆ,
ಅವಳ ನೆನಪಿಗೆ ಮಾಯವಾಗಿತ್ತು ಪ್ರೀತಿಯ ನಿದ್ದೆ....
ಮಳೆ ನಿಂತು ಗಂಟೆಯಾಗಿದೆ, ಅದರ ಗುಂಗಲ್ಲೇ
ಅಲ್ಲೇ ನಿಂತಿದ್ದೇನೆ,
ತಣ್ಣಗೆ ಬೀಸುತ್ತಿದ್ದ ಗಾಳಿ, ನಿಂತ ನೀರು, ನಾನೊಬ್ಬನೇ
ಓ ಮರೆತಿದ್ದೆ ಅವಳ ನೆನಪು.... ಮತ್ಯಾರು ಇಲ್ಲ....
ವಾಹ್..!!
ReplyDeleteಅವಳ ನೆನಪೇ ಹಾಗಲ್ಲವೆ..? :)
ಚೆಂದದ ಸಾಲುಗಳು.
Itteechege male hani kandre saaku hudgir nenpu bandbidutte kanree..
ReplyDeleteಪ್ರವರ್......
ReplyDeleteಚನ್ನಾಗಿದೆ........ ಇಷ್ಟವಾಯ್ತು
hey its very nice....modala maLe yaavaglu chanda.....naanU kuda modala male bagge ondu kavite bardidini nodi.....:)
ReplyDeleteakaalika male shuru aagide..haage nenapugalu..chennagide..
ReplyDelete