ನನ್ನ ನೆರಳೂ ಅಲ್ಲೆಲ್ಲೋ ಸತ್ತು ಬಿದ್ದಿದೆ,

ನನ್ನೊಡನೆ ಬರುತ್ತಿದ್ದ
ನನ್ನ ನೆರಳೂ ಅಲ್ಲೆಲ್ಲೋ ಸತ್ತು ಬಿದ್ದಿದೆ,
ಪ್ರೀತಿ ಎಂಬೊ ವಿಷಪ್ರಾಶನವಾಗಿರಬೇಕು,
ಕಪ್ಪಿದ್ದ ನನ್ನ ನೆರಳು ವಿಷಕೆ ನೀಲಿಯಾಗಿದೆ......
ಕೊಲೆಗಾತಿ ಇನ್ನೂ ನನ್ನ ಹೃದಯದಲ್ಲೇ
ಬಚ್ಚಿಟ್ಟುಕೊಂಡಿದ್ದಾಳೆ,
ನಗುತ್ತಿದ್ದಾಳೆ ಹಲ್ಲು ಕಿರಿದು!!
ಅವಳೇ ಮುತ್ತಿಟ್ಟ ಕೆನ್ನೆಯ ಮೇಲೆ
ಕಣ್ಣೀರು ಜಾರುವಾಟವಾಡುತ್ತಿದೆ!!
ಅವಳ ನೆನಪಲ್ಲೇ ಹುಟ್ಟು ಪಡೆದಿದ್ದ
ಕವನಗಳ ಅಕ್ಷ್ರರಗಳು ಸತ್ತು
ಉದುರುತ್ತಿವೆ......
ಅವಳೆ ನೆಟ್ಟು ಬೆಳೆಸಿದ್ದ ಕನಸುಗಳು
ಕಮರುತ್ತಿವೆ......
ಹೂಂ... ಪ್ರೀತಿಯೆಂಬುದೇ ಹಾಗೆ..........
ReplyDeleteಎಷ್ಟು ಹೆಚ್ಚು ಪ್ರೀತಿಸುತ್ತೇವೆಯೋ ಅಷ್ಟು ಹರಿತವಾಗುತ್ತಾ ಹೋಗುತ್ತದೆ.
ಸ್ವಲ್ಪ ತಪ್ಪಿ ನಿಸುಕಾಡಿದರೂ ಸಾಕು....
ಇರಿದು ಗಾಯ ಮಾಡಿಬಿಡುತ್ತದೆ...
ಸಾಯೋವಷ್ಟು ನೋವು ಕೊಡುತ್ತದೆ.
chennagide kavite.....even ur blog looks nice:)
ReplyDeleteಅವಳೇ ಮುತ್ತಿಟ್ಟ ಕೆನ್ನೆಯ ಮೇಲೆ
ಕಣ್ಣೀರು ಜಾರುವಾಟವಾಡುತ್ತಿದೆ!!...rr line tumbaa ishtavaayitu.....
Nice one....Chennagide..
ReplyDeleteNice One:)
ReplyDelete