ಬಾಳು ಪಯಣಿಸುತ್ತಿದೆ


ಬಾಳು ಪಯಣಿಸುತ್ತಿದೆ
ದೂರದೆಡೆಗೆ, ಕೈಗೆಟುಕಲಾರದ
ಕನಸೆಂಬ ಕುಟುಕಿನೆಡೆಗೆ,
ನಾನು ನನ್ನದೆಂಬ ಅಹಂ ಇದೆ
ಕೋಪವಿದೆ, ಬದುಕ ಬಿಡೆನೆಂಬ
ಕ್ರೂರತನವಿದೆ, ಸುಳ್ಳೆಂಬ
ನಾಲಿಗೆಯಿದೆ.....
ಆದರೂ ಬಾಳು ಪಯಣಿಸುತ್ತಿದೆ!!
ಸತ್ಯವೆಲ್ಲ ಘೋರಿಯೊಳಗೆ
ಮಣ್ಣೋದ್ದು ಮಲಗಿರಲು
ಕಪಟ ಮೋಸಗಳೆಲ್ಲ
ರೆಕ್ಕೆ ಬಂದು ಸ್ವಚ್ಚಂದದಿ ಹಾರಾಡುತಿವೆ,
ಅವುಗಳನೇ ಪಾರಿಜಾತಗಳೆಂದು
ಹೆಗಲೇರಿಸಿಕೊಂಡಿದ್ದೇವೆ....
ಆದರೂ ಬಾಳು ಪಯಣಿಸುತ್ತಿದೆ!!!
ಮಹಾನ್ ಪುರುಷರೆಲ್ಲ ಸತ್ಯಕ್ಕೆ
ಜೈಯೆಂದು ಕುಣಿಗೆ ಕೊರಳೊಡ್ಡಿ
ಪ್ರಾಣವನೆ ಬಿಡುವಾಗ ಕೇಕೆ ಹಾಕಿ
ನೋಡಿ ನಗುತ್ತಿದ್ದಾರೆ,
ಇವರೆಲ್ಲ ನಮ್ಮ ಸುತ್ತ ಇದ್ದಾರೆ
ಆದರೂ ಬಾಳು ಪಯಣಿಸುತ್ತಿದೆ!!!
ಕಾರಿರುಳ ರಾತ್ರಿ ಬೆಳಕಿಲ್ಲ
ಬರೀ ಭಯ, ಮನಸಲ್ಲಿ ಅಳುಕು...
ದೂರದಲ್ಲೆಲ್ಲೊ ಮಿಣ ಮಿಣನೆ
ಹೊಳೆಯುತಿಹ ಚುಕ್ಕಿಯಿದೆ,
ಸಾಗುತಿಹ ಬಾಳು ಸರಿ
ಹೋದಿತೆಂಬ ಭರವಸೆಯಿದೆ....

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ