ತುಟಿ ಮೇಲಿನ ಎಂಜಲು ಆವಿಯಾಗುತ್ತಲೇ ಇಲ್ಲ


ಮೊದಲ ಮಳೆಯಂತೆ
ಪ್ರತಿ ದಿನವೂ
ಎದೆಯೊಳಗೆ ಇಳಿಯುತ್ತಲೇ ಹೋಗುತ್ತಿಯಲ್ಲ
ಹುಡುಗಿ,
ನಿನ್ನನ್ನು ಆಸೆ ಎನ್ನಬೇಕೊ
ನನ್ನ ತೀರದ ಬಾಯಾರಿಕೆ ಎನ್ನಬೇಕೊ,

ನಿನ್ನ ಹಸಿ ನಿಟ್ಟುಸಿರು
ಎದೆಗೂದಲುಗಳ ಮೇಲೆ
ಇಬ್ಬನಿಯಂತೆ ಅಮರಿಕೊಂಡಿದೆ,
ತಣ್ಣಗಿನ ಅನುಭವವನ್ನು
ಅದ್ಯಾವ ಬಿಸಿಲು
ಕಸಿದುಕೊಂಡೀತು,
ಕಸಿದುಕೊಂಡರೂ ದಕ್ಕುವುದಿಲ್ಲ ಬಿಡು

ಹಣೆ ಬೆವರು
ಸಣ್ಣಗಿನ ಸುಳಿಗಾಳಿಯೊಡನೆ
ತುಟಿಗೆ ತುಟಿಯೊತ್ತುತ್ತಲೇ
ಕಂಪನ,
ಗೆರೆಗಳ ನಡುವೆ
ನುಲಿದಾಡುತ್ತಾ ಸಾಗಿದ್ದೇ ಸಾಗಿದ್ದು,
ವಾಸನೆಯ ಜಾಡು ಹಿಡಿದು
ಹೊರಟಿರಬೇಕು!

ತುಟಿ ಮೇಲಿನ ಎಂಜಲು
ಆವಿಯಾಗುತ್ತಲೇ ಇಲ್ಲ,
ನಾಲಿಗೆ ಚಪ್ಪರಿಸಿದ ಸದ್ದು;
ಧೀರ್ಘ ಚುಂಬದಲ್ಲಿ
ಉಸಿರೇ ಮರೆತೇ ಹೋಯ್ತು,
ಅಂತ್ಯದಲ್ಲಿ ನೆನಪು.

ಕಣ್ಣುಗಳಿಗೆ ಬಿಡದ
ಜಾಗರಣೆ,
ನೋಟಕ್ಕೆ ನೋಟ
ಸೇರು ಸವಾಸೇರು,
ಒಂದಕ್ಕೊಂದು ತಬ್ಬಿದಂತೆ
ಕತ್ತಲಿಗೋ ನೂಕುನುಗ್ಗಲು

-ಪ್ರವರ ಕೊಟ್ಟೂರು

Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ