Posts

Showing posts from March, 2010

ಒಂದು ಪ್ರೇಮ-ಪತ್ರದ ಕಥೆ(ವ್ಯಥೆ)

Image
ಪ್ರೇಮ ಪತ್ರಗಳ ಬರೆದು ಕೊಡಲು ನನ್ನ ಬಯಲ ಬಿಸಿಲಿಗೆ ಹೇಳಿದ್ದೆ.... ನನ್ನ ಹಣೇ ಬರಹವೋ ಏನೋ???? ಬಿಸಿಲು, ಮೋಡಕ್ಕೆ ಹೇಳಿತ್ತು.... ಆ ಪ್ರೇಮ ಪತ್ರವ ಕೊಟ್ಟು ಹೇಳಿದೆ ಮನದನ್ನೆ ನಿನ್ನೆ ಪ್ರೀತಿಸುವೇ ಎಂದು, ಕೊನೆತನಕ ನಿನ್ನ ಜೊತೆ ಇರುವೆನೆಂದು, ಅವಳು ನನ್ನೆಡೆಗೆ ಕಪ್ಪು ಕಾಡಿಗೆಯ ಕಂಗಳ ತಿರುಗಿಸಿ ಒಮ್ಮೆ ನೋಡಿ, ಪತ್ರ ಹರಿದು ಹಾಕಿ ಹೇಳಿದಳು ನನ್ನ ಮರೆತುಬಿಡಿ, ನನಗೋ ಮರೆವು ಜಾಸ್ತಿ ಮರೆತೆ..... ಮತ್ತೆ ನಸು ನಗುತ್ತ ಕುಳಿತೆ......

ನೀ ಕಂಡ ಕ್ಷಣದಿಂದ

Image
ನಿನ್ನ ಕಂಡಾಗಿನಿಂದ ಮನಸು ಮಂಕಾಗಿ ಹೋಗಿಹುದು ಸುಂಕ ಕೊಡಲೊಲ್ಲದು ಕನಸುಗಳಿಗೆ ಕಣ್ಣಂಚಿನ ಮುನಿಸುಗಳಿಗೆ ನಾನು ಮಾತ್ರವಲ್ಲ ನನ್ನ ನೆರಳೂ ನಿನ್ನನೇ ಬೇಡುತಿಹುದು ಅದಕಾಗಿ ಕಪ್ಪಗಿದ್ದ ನನ್ನ ನೆರಳು ಬಣ್ಣ ಪಡೆದುಕೊಂಡಿಹುದು ನಾ ಬರೆಯುತಿಹ ಕವನಗಳು ನನ್ನ ಮಾತೇ ಕೇಳದಂತಾಗಿವೆ ಎಲ್ಲವೂ ನಿನ್ನ ನೆನಪಲ್ಲೇ ಕಾಲ ಕಳೆಯುವಂತಾಗಿವೆ

Blogger Buzz: Blogger integrates with Amazon Associates

Blogger Buzz: Blogger integrates with Amazon Associates

ಸ್ನೇಹದ ನೆನಪುಗಳು

Image
ಕಟ್ಟ ಕಡೆಯ ಕನಸಿನಲ್ಲಿ ಕಾಡಿದಿರಿ ನನ್ನನೇ ಪ್ರೀತಿ-ಸ್ನೇಹವೆಂದು ಕಲುಕಿದಿರಿ ಮನಸನೇ ವರುಷಗಳು ಕಳೆದು ಕಳೆದು ಮರಳಿ ಮತ್ತೆ ಮತ್ತೆ ಬರುತಿವೆ ನಾನು ದೂರ ಹೋಗಿ ನಿಂತರೂನು ಬಳಿಗೆ ನನ್ನ ಕರೆದಿವೆ ನಿಮ್ಮ ನೆನಪು ಹಸಿರು ನನ್ನ ಮನದ ಮರದಲಿ ನಿಮ್ಮ ಮುಖದ ಚಿತ್ರಗಳೇ ನನ್ನ ಕಣ್ಣ ಪಟದಲೇ ಅಳುವ ಆಸೆ, ನಿಮ್ಮ ಸ್ನೇಹ ನೆನೆದುಕೊಂಡು ಮನದಲಿ ತೊಳೆದುಕೊಳ್ಳಲಾರೆ ನೆನಪುಗಳ ಅತ್ತು ಈ ಕಣ್ಣಲಿ ನಿಮ್ಮ ಕೈಯ ಬರಹಗಳ ಬರೆದುಬಿಡಿ ಹೃದಯದಿ ಓದಿಕೊಂಡು ಹರುಷ ಪಡುವೆ ಖಾಲಿ ಪುಟದ ಮಧ್ಯದಿ

ಘೋರಿ ಕಟ್ಟುವ ಬನ್ನಿ

Image
ಘೋರಿ ಕಟ್ಟುವ ಬನ್ನಿ ನಾ ಮೇಲು ತಾ ಮೇಲೆಂದು ಹೊಡೆದಾಡಿ ಸಾಯುತಿಹ ಧರ್ಮಗಳಿಗೆ ಘೋರಿ ಕಟ್ಟುವ ಬನ್ನಿ........ ತಿನ್ನಲನ್ನವಿಲ್ಲ ಇರಲು ಮನೆಯಿಲ್ಲ ಮೈ ಮುಚ್ಚಲು ಬಟ್ಟೆಯಿಲ್ಲದಿದ್ದರೂ ದೇವರ ಗುಡಿಗಳಿಗೇನು ಬರವಿಲ್ಲ ಪ್ರೀತಿ-ಸ್ನೇಹಗಳಿಲ್ಲ ಭಾಂದವ್ಯವಿಲ್ಲ ಆದರೆ ಹೊಡೆದಾಡಿ ಸಾಯುವ ಜನರಿಗೇನು ಕಮ್ಮಿಯಿಲ್ಲ ಯಾರಿಗೆ ಬೇಕಾಗಿದೆ ಅಂಧಕಾರದ ಧರ್ಮ ಇದು ಮನುಕುಲದ ನಡುವೆ ವಿಷ ಬೀಜ ಬಿತ್ತುವ ಮರ್ಮ.... ನಾ ಹಿಂದುವಲ್ಲ ನಾ ಮುಸಲ್ಮಾನನಲ್ಲ ನಾ ಕ್ರೈಸ್ತನೂ ಅಲ್ಲ ನಾ ಜೈನನೂ ಅಲ್ಲ ನಾ ಭಾರತೀಯ ಧರ್ಮ ಗೋಡೆಯ ಕುಟ್ಟಿ ಕೆಡವುವ ನಿಜ ಭಾರತೀಯ

ಪರೀಕ್ಷೆಯೇ

Image
ಸಾಕು ಸಾಕಾಗಿದೆ ಹೋಗು ನನಗೆ ಜೀವನ... ಯಾಕೆಂದು ಕೇಳುವುದಾದರೆ ಪರೀಕ್ಷೆಯೇ ಕಾರಣ... ಓದುತ್ತಾ ಕುಳಿತರೆ ತೂಕಡಿಕೆ ಬರುವುದು ತೂಕಡಿಕೆ ಎಂದು ಮಲಗಿದರೆ ಹೆದರಿಕೆ ಯಾಗುವುದು ಕ್ರಿಕೆಟ್ ಆಡೋನವೆಂದರೆ ಪರೀಕ್ಷೆ ಗುಮ್ಮನ ಚಿಂತೆ ಸಾಕಾಗಿ ಹೋಗಿದೆ ಸ್ವಾಮಿ ತಲೆಯಲ್ಲಿ ಪ್ರಶ್ನೆಗಳ ಸಂತೆ ಪ್ರಶ್ನೆ ಪತ್ರಿಕೆಯಂದು ಕೊಡುವರು ಬರಿ ಪ್ರಶ್ನೆಗಳೇ ? ಮೋಸ ಗೆಳೆಯರೇ ಉತ್ತರ ಪತ್ರಿಕೆಯಲ್ಲಿ ಉತ್ತರಗಳಿಲ್ಲ

ಧರ್ಮವೆಂಬ ಸಮರ

Image
ಧರ್ಮ ಧರ್ಮದಿ ಸಮರ ನಡೆದು ಮುಗುದ ಜನಗಳ ಜೀವ ಕಳೆದು ಮಾನವೀಯತೆ ಇಲ್ಲವೆಂದು ತಿಳಿದು ಬೇಸರವಾಗಿದೆ ನನ್ನ ಜಾತಿ ನನ್ನ ಮತವು ಎಂಬ ಸ್ವಾರ್ಥದಿ ಮಾನವ ನಮ್ಮ್ ನಾಡು ನಮ್ಮ ದೇಶ ಎಂಬುದನ್ನೇ ಮರೆತಿಹ ಬಾಂಬು ಗನ್ನುಗಳನ್ನು ಹಿಡಿದು ಧರ್ಮ ರಕ್ಷಿಸುವೆಂದು ಹೊರಟು ಶಾಂತಿಯನ್ನೇ ಕೊಂಡು ಬಂದು ನಾನೇ ಧೀರ ಎನುತಿಹ ತನ್ನ ತಾಯಿಯ ಹೊಟ್ಟೆಯನ್ನು ಕ್ರೂರ ತನದಿ ಅಗೆದು-ಬಗೆದು ಕರುಳ ಹಿಂದಿ ನೋವ ಕೊಟ್ಟು ದುಷ್ಟ ನಗುವ ನಗುತಿಹ ಯಾವುದಯ್ಯ ನಿನ್ನ ಕುಲವು ಯಾವುದಯ್ಯ ನಿನ್ನ ಮತವು ಭಾರತಾಂಬೆಯು ನಮ್ಮ ತಾಯಿಯು ನಾವು ಅವಳ ಮಕ್ಕಳು............

ಮುಂಬೈ ಧಾಳಿಯ ನೆನಪು

Image
ಸಂಜೆ ಕವಿದಿತ್ತು ಸುತ್ತಲೂ ರವಿಯು ತನ್ನ ಕೆಲಸ ಮುಗಿಸಿ ಇನ್ನೇನು ಹೊರದುತಲಿದ್ದ ಅಲ್ಲಲ್ಲಿ ತಾರೆಗಳಾಗಲೇ ಇಣುಕುತ್ತಿದ್ದವು ದುಡಿದು ದಣಿದ ಜನಗಳಿಗೆ ಸುಮ್ಮನೆ ಮನೆಯ ಸೇರುವ ತವಕ ಹೆಂಡತಿ ಮಕ್ಕಳ ನೋಡುವ ತನಕ ಪಟಾಕಿ ಸದ್ದಿನಂತೆ ಕೇಳಿತ್ತು ಸಣ್ಣಗೆ ಬರುಬರುತ್ತಾ ಜೋರಾದ ಸದ್ದು ಭಯವಿತ್ತಿತು ಜನಗಳಿಗೆ ಎಲ್ಲಿಂದಲೂ ಬಂದ ಗುಂಡುಗಳು ಹೊಕ್ಕವು ಸಿಕ್ಕಸಿಕ್ಕವರ ಎದೆಗಳ ಅದೇ ನೆಂದು ನೋಡುವ ಹೊತ್ತಿಗೆ ಹಾರಿದವು ಪ್ರಾಣ ಪಕ್ಷಿ ಗಳು ಚೀರಿದವು ಕೂಗಡಿದವು ಏನೂ ಕೇಳಲಿಲ್ಲ ಗುಂಡಿನ ಸದ್ದಿನ ಬಾಂಬಿನ ಸದ್ದಿನ ಹೊರತು ಹೊಕ್ಕಿದರು ಸಿಕ್ಕ ಕಟ್ಟಡಗಳ ಕಂಡಕಂಡವರ ಹೆದರಿಸಿದರು ಮೂದಲಿಸಿದರು , ಹೊಡೆದರು ಸಾಕಾಗಲಿಲ್ಲವೆಂದು ನರ ನಾಡಿಗಳ ಕತ್ತರಿಸಿ ರಕುತದ ಕೊಡಿ ಹರಸಿದರು ಖುಷಿ ಪಟ್ಟರು. ಕೆಲವರ ಕಟ್ಟು ಕತ್ತರಿಸಿದರು ಕೆಲವರ ಕೈ ಕಾಲುಗಳ ಕತ್ತರಿಸಿದರು ನೋವಿಂದ ಎಷ್ಟೇ ಕೂಗಾಡಿದರು ಕರುಣೆ ತೋರದೇ ಹೋದರು ಭಯದ ಕಾರ್ಮೋಡವ ಬಿತ್ತಿದರು ಆಟವೆಂಬಂತೆ ಅಲ್ಲಲ್ಲಿ ಗ್ರೆನೇಡ್ ಗಳ ಎಸೆದು ಜೀವ ಹೋಗುವ ಆಟ ನೋಡುತ್ತಿದ್ದರು ದುಷ್ಟತನವ ತೋರುತ್ತಿದ್ದರು ಇವರೇನು ಮನುಷ್ಯರ ???? ಅಲ್ಲ ..... ಮನುಷ್ಯ ರೂಪದ ರಾಕ್ಷಸರು ಧರ್ಮನ್ದತೆ ಇಂದ ಕಣ್ಣು ಕಾಣದಿಹ ಕುರುಡ ರಾಕ್ಷಸರು........

ಪ್ರೇಮಿಯ ಶಾಯರಿಗಳು

Image
1.ನಿನ್ನ ಜೋಡಿ ನಡೀಬೇಕು ಅಂತ ಭಾಳ ಆಸಿ ನನಗ ಏನ್ ಮಾಡ್ಲಿ ಜೋಡಿ ನಡಿಬೇಕಾದ್ರ ಕರಂಟ್ ಶಾಕ್ ಹೊಡ್ದಾತಂತ ಹೆದರ್ಕಿ ಐತಿ ಮನದಾಗ 2.ದಿನಕೊಮ್ಮೆ ಕಂಡ್ರ ಸಾಕು ಮನಸು ಹಂಗ ಹಾರಾಡ್ ತೈತಿ ಅಕಸ್ಮಾತ್ ನೀನ್ ನನ್ನ ಮಾತಾಡ್ಸಿದ್ರೆ ಏನ್ ಗತಿ ಜೀವ ಹಂಗ ಸತ್ ಹೋಗ್ತೈತಿ 3.ಕೆರಿ ದಡದಾಗ ಕುಂತು ನಿನ ದಾರಿ ಕಾಯಕತ್ತಿದ್ದೆ ಕೆರಿ ನೀರಾಗಿನ್ ಅಲೀಗುಳು ಆಕಿ ಹೆಂಗೈದಳ ಅಂತ ಕೇಳಿದವು ನಾನು ಜಾವಾಬ್ ಹೇಳಾಕತ್ತಿದ್ದೆ 4.ನಿನ್ನ ಕೆಂಪ್ ತುಟಿ ನೋಡಿದಾಗ್ಲೆಲ್ಲಾ ಗುಲಾಬಿ ಹೂವ ನೆನಪಾಗ್ತೈತಿ ದುಂಬಿ ಬಂದು ಅದರ್ ಮ್ಯಾಲೆ ಕುಂತಾಗ ನಿನ್ನ ತುಟಿಗೆ ನೋವಾತೇನ ಅನಸ್ತೈತಿ

ತಾಯಿ

Image
ಒಡಲೊಳಗೆ ಅವಿತು ನಾನು ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ ಕೈ ಕಾಲುಗಳಾಡಿಸಿ ಒದ್ದಾಡುತಿದ್ದೆ ಅಮ್ಮನಿಗೆ ನೋವ ಕೊಡುತಿದ್ದೆ ಆದರೂ ಅಮ್ಮ ಬಯ್ಯುತ್ತಿರಲಿಲ್ಲ. ಎಷ್ಟೇ ನೋವಾದರೂ ನಗುತಿದ್ದಳು, ಒಳಗೆ ಮೆಲ್ಲಗೆ ಆಕಳಿಸುತಿದ್ದೆ ಹಾಗೆ ಸಾಕಾಗಿ ಮಲಗಿಬಿಡುತಿದ್ದೆ ಅಮ್ಮ ಜೋಗುಳ ಹಾಡುತಿದ್ದಳು ಕಣ್ಮುಚ್ಚಿ ಹಾಗೆ..... ಅಲ್ಲೇ ಅಳುತಿದ್ದೆ ಅಮ್ಮ ಸಂತೈಸುತಿದ್ದಳು ಕಥೆಯ ಹೇಳಿ.... ಯಾವ ದೇವರು ಹೇಳಿ ಇವಳಂತೆ, ಕಷ್ಟ-ನೋವು ಗಳೆಲ್ಲವ ಸಹಿಸಿ ಸಲಹುವ ದೇವರು ತಾಯಿ