Posts

Showing posts from November, 2010

ಅವಳಿಲ್ಲದಿದ್ದರೂ

Image
(ಸಂಜೆ ಹೊತ್ತು ಹೊರಗಡೆ ಬೇಜಾರಿನಿಂದ ಕೂತಿದ್ದೆ, ನೋಡು ನೋಡುತಿದ್ದಂತೆ ಮಳೆರಾಯ ಆಗಮಿಸಿದ... ಮೈಯೆಲ್ಲ ನೀರು ಚಳಿಯಗುತಿತ್ತು ಆಗ ನನಗನ್ನಿಸಿದ್ದು) ಮತ್ತೆ ಮತ್ತೆ ನೆನೆಯುವಾಸೆ ಸುರಿಯೊ ತುಂತುರು ಮಳೆಯಲಿ ಅವಳ ನೆನಪಲಿ ಮಿಂದು ಬಂದ ಮನಸು ಕೊಂಚ ನೆನೆಯಲಿ ಹನಿ ಹನಿಗಳಲ್ಲೂ ಅವಳ ಮಾತು ಕೇಳುತಿಹವು ಕಿವಿಗಳು ಗೆಜ್ಜೆ ಸದ್ದನು ಬೀರುತಿಹವು ಎಲೆಯ ಮೇಲೆ ಬಿದ್ದ ಹನಿಗಳು ನನ್ನ ದೇಹವು ತೋಯುತಿರಲು ಅವಳ ಅಪ್ಪುಗೆ ಬಯಸಿದೆ ಕೆನ್ನೆ ಮೇಲಿಹ ತಂಪು ಹನಿಗಳು ಅವಳು ಇತ್ತ ಮುತ್ತಿನಂತಿದೆ ಅವಳಿಲ್ಲ ಜೊತೆಯಲ್ಲಿ ಆದರೂ ಜೊತೆ ಇರುವಂತಿದೆ ಸುತ್ತಲೂ ಘಾಡ ಮೌನವಿದ್ದರೂ ಅವಳು ಮಾತನಾಡಿದಂತಿದೆ

ಪಿಸುಮಾತು

Image
ಜಿನುಗುಡುವ ಮಳೆಯಲ್ಲಿ ಪಿಸುಗುಡುತಿದ್ದಾರೆ ಪ್ರೇಮಿಗಳು ತಮ್ಮ ಮಾತು ತಮಗೂ ಕೇಳದಂತೆ. ಅವಳು ತನ್ನೊಡನೆ ತಂದಿದ್ದ ಕೊಡೆಯು ಮುದುರಿಕೊಂಡು ಕೂತಿದೆ ಅವರ ಪಕ್ಕದಲ್ಲಿ ಅವರಂತೆ ನೆನೆದುಕೊಂಡು ಮಳೆಯಲ್ಲಿ ನಡುಗುತ್ತಿದೆ. ಮಳೆ ಹನಿಗಳೆಲ್ಲವು ಜಾರುವಾಟವಾಡುತಿವೆ ಅವಳ ತಲೆಗೂದಲುಗಳ ಮೇಲೆ ಯಾವುದರ ಪರಿವೇ ಇಲ್ಲ ತನ್ನಿನಿಯನ ಭುಜಕೆ ತಲೆಯಾನಿಸಿ ಪಿಸುಗುಡುತ್ತಿದ್ದಾಳೆ ಹಾಗೆ ತನ್ನ ಮಾತು ತನಗೂ ಕೇಳಿಸದಂತೆ

ಹಸಿವೆಂಬ ಕ್ರೂರಿ

Image
ನಾನು ಸದ್ಯ MCA ಮಾಡುತ್ತಾ ಹಾಸ್ಟೇಲಿನಲ್ಲಿದ್ದೇನೆ. ಸಂಜೆ ಗೆಳೆಯನ ಜೊತೆ ಕೆಲವು ಸಾಮಾನುಗಳನ್ನು ತರಲಿಕ್ಕೆ ಅಂತಾ ಹೊರಗಡೆ ಹೊಗಿದ್ದೆ. ಹಾಸ್ಟೇಲಿಗೆ ವಾಪಾಸ್ ಆಗಬೇಕಾದ್ರೆ ಹಿಂದಿ ಮಾತನಾಡುವ ಹುಡುಗ ಬಂದು "ಭೈಯ ಆಪ್ಕೊ ಹಿಂದಿ ಆತಾಹೆ ಕ್ಯಾ" ಎಂದ ಅದಕ್ಕೆ ಹಾ! ಎಂದೆ.... ಅವನು ಹಿಂದುಗಡೆ ತಾಯಿ ಅಳುತ್ತಿರೊ ಮಗುವನ್ನು ತೋರಿಸಿ "ಭೈಯ್ಯ ಸುಭಾ ಸೇ ಹಮ್ ಬುಕೆ ಹೈ(ಬೆಳಗ್ಗೆಯಿಂದ ಉಪವಾಸವಿದ್ದೀವಿ), ಕುಚ್ ತೊ ಖಾನೆ ಕೇ ಲಿಯೆ ಬೇಜಿಯೆ(ತಿನ್ನೋಕೇನಾದ್ರು ಕೊಡಿಸಿ) " ಅಂತಾ ಕೇಳಿದ, ಒಂದು ಕ್ಷಣ ಮನಸ್ಸು ತಲ್ಲಣವಾಯ್ತು.... ಜೊತೆಗಿದ್ದ ಗೆಳೆಯ "ಲೇ ಇವೆಲ್ಲಾ ಬೆಂಗಳೂರಲ್ಲಿ ಇದ್ದದ್ದೇ ಬಾ.." ಎಂದು ಕೈ ಹಿಡಿದುಕೊಂಡು ಎಳೆದುಕೊಂಡು ಹೋದ.... ರೂಮಿಗೆ ಬಂದೆ, ಊಟಕ್ಕೆ ಸೀಟಿ ಹಾಕಿದರು, ತಟ್ಟೆ ತೊಳೆದು ಊಟಕ್ಕೆ ಕೂತೆ ಅನ್ನ ಗಂಟಲಲ್ಲಿ ಇಳಿಯುವುದಕ್ಕೆ ಇಳಿಯುವುದಕ್ಕೆ ಹೆಣಗಾಡುತಿತ್ತು. ಅಲ್ಪ ಸ್ವಲ್ಪ ಊಟ ಮಾಡಿ ಕೈ ತೊಳೆದುಕೊಳ್ಳೋಕೆ ಹೋದೆ ಅಲ್ಲಿ ಡ್ರಮ್ಮಿನಲ್ಲಿ ಹೆಚ್ಚಾಗಿ ಸುರಿದ ಅನ್ನ ಕಂಡೆ. ರೂಮಿಗೆ ಹೋಗಿ ಮಂಕು ಹಿಡಿದವನಂತೆ ಕೂತೆ ಒಂದು ಕಡೆ ಹಸಿದ ಹೊಟ್ಟೆಗೆ ಅನ್ನವಿಲ್ಲದೆ ಬೇಡುವ ಜನ ಒಂದು ಕಡೆಯಾದರೆ, ಅನ್ನ ಹೆಚ್ಚಾಯಿತೆಂದು ಸುರಿಯವ ಜನರೊಂದು ಕಡೆ. ಕಡೇ ಪಕ್ಷ ಆ ಹುಡುಗನಿಗೆ ಒಂದು ಬಿಸ್ಕತ್ತು ಪ್ಯಾಕೇಟು ಕೊಡಿಸಲಾಗಲಿಲ್ಲಾ ಅನ್ನೋ ಪಾಪ ಪ್ರಜ್ನೆ ಕಾಡತೊಡಗಿತ್ತು, "ಅನ್ನದಾನಕ್ಕಿಂತ ಇನ್ನು ದಾನವ