Posts

Showing posts from January, 2012

ಹೀಗೊಂದು ಸಾಂತ್ವಾನ

Image
ಅತ್ತೂ ಅತ್ತೂ ಕಣ್ಣೀರೆಲ್ಲಾ ಬತ್ತಿ ಮರಳುಗಾಡಾಗಿದೆ ಕಣ್ಣು ಆಕೆ ಮಾಡಿದ ಗಾಯ ಎದೆಯಲ್ಲಿ ಅಂಗೈ ಅಗಲದ ಹುಣ್ಣು ಇಷ್ಟು ದಿನ ಜೊತೆಗಿದ್ದು ಹೆಜ್ಜೆ ಮೇಲೆಜ್ಜೆಯನಿಕ್ಕಿ ಕಾಲು ಸೋಲುವವರೆಗೂ ಕೈ ಹಿಡಿದು ನಡೆದಿದ್ದಳು ಹೃದಯದೊಳಗಿನ ಪ್ರೀತಿಯ ತನುವೆಲ್ಲ ಧಾರೆಯೆರೆದು ತಾಯಂತೆ ಪೋಷಿಸಿದ್ದಳು, ನೋವು ಉಮ್ಮಳಿಸಿ ಬರುವಾಗ ನನ್ನ ಬಿಗಿದಪ್ಪಿ ಬೆಚ್ಚಗಿನ ಸಾಂತ್ವಾನ ಹೇಳುತಿದ್ದಳು ಮಳೆಯಲ್ಲಿ ಕೊಡೆ ಇಲ್ಲದೆ ನೆನೆದು ಮೈಮೇಲಿನ  ಬಟ್ಟೆ ಒದ್ದೆಯಾಗಿ  ಸಣ್ಣಗೆ ನಡುಗುವಾಗ ತುಟಿಗೆ ತುಟಿ ಒತ್ತಿ ಕಿಡಿ ಹೊತ್ತಿಸಿ ಆಕೆ ಹೋಗುವಾಗ ಹಿಂತಿರುಗಿ ಕಣ್ಣಂಚಲ್ಲೇ ಪೋಲಿ ನಗು ನಗುವಾಗ ಹಾ! ಆಕೆಗೆ ಆಕೆಯೇ ಸಾಟಿ ಈಗಾಕೆ ನನಗೆ ಜೊತೆಯಿಲ್ಲ ಜೊತೆಯಿಹ ನೆನಪುಗಳಿಗಾ ಕಸುವಿಲ್ಲ..... ಬತ್ತಿರುವ ಕಣ್ಣು, ಎದೆ ಮೇಲಿಹ ಹುಣ್ಣು ಎರಡಷ್ಟೇ..... ಇನ್ನಾರಲೂ ಮನಸಿಲ್ಲ

ಬೆಂಕಿಯಾರಿಸೊ ಪರಿ

Image
ನನ್ನೆದೆಯೊಳಗೆ ಮೆ ಲ್ಲಗೆ ಮೊಳಕೆಯೊಡೆಯುತ್ತಿದ್ದ ಪ್ರೀತಿಯ ಬೆಂಕಿ ದೇಹವನಾವರಿಸುತ್ತಿದೆಯಲ್ಲಾ !!! ಹೃದಯದ ಯಾವುದೋ ಮೂಲೆಯಲ್ಲಿ ಕಿಡಿಯಾಗಿ ಹೊಕ್ಕಿ , ರಕುತದೊಳಗೆಲ್ಲ ನುಗ್ಗಿ ಕೆಂಪುತನವನ್ನೆಲ್ಲಾ ಸರ ಸರನೇ ಮುಕ್ಕುತ್ತಿದೆಯಲ್ಲಾ !!! ಆಕೆ ಕೇಶ ಕಪ್ಪಿನ ರಾತ್ರಿಯಲಿ ಗಳಿಸಿದ್ದ ಕನಸುಗಳೆಲ್ಲಾ ಧಗ ಧಗನೆ ಉರಿದು ಚೀರಾಡುತ್ತಿವೆಯಲ್ಲಾ !!! ಆ ಬಿಸಿಯ ಬೇಗೆಗೆ ತುಟಿಗಳೊಣಗಿ ಹಪಹಪಿಸುತ್ತಿವೆಯಲ್ಲಾ !!! ಆಕೆಯ ಚೆಂಗುಲಾಬಿಯ ರಂಗ ಕದ್ದು ನಳ ನಳಿಸುತ್ತಿಹ ಅಧರಗಳ ಸ್ಪರ್ಷಿಸದ ಹೊರತು ಬೆಂಕಿಯಾರುವ ಯಾವುದೇ ಸುಳುಹಿಲ್ಲ !!!!

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

Image
( ಕಾಲೇಜು ನನ್ನ ಜೀವನದಲ್ಲಿ ಹತ್ತಾರು ಬದಲಾವಣೆಗಳನ್ನ ಹಾಗು ಹೀಗೆ ಬದುಕಬೇಕೆಂಬ , ಪ್ರೀತಿ ಎಂದರೆ ಹೀಗೆ , ಸ್ನೇಹಿತರೆಂದರೆ ಹೀಗೆಂಬ ಪಾಠಗಳ ಹೇಳಿಕೊಟ್ಟು ಗುರು , ನನ್ನ ಮನಸಲ್ಲಿ ಪ್ರೀತಿ - ಪ್ರೇಮಗಳ ಪದಗಳ ಹುಡುಕಾಟ ನಡೆಸಿದ ನೆನಪುಗಳನ್ನು ಹಾಗೂ ಆ ನೆನಪುಗಳ ಬೀಜಗಳ ಬಿತ್ತಿದವರ ಪಾತ್ರ ಎಲ್ಲವನ್ನು ನಿಮ್ಮೆದುರಿಗಿಡುವ ಕಸರತ್ತು ಅಷ್ಟೆ ಹಾಗೂ ........ ) ಸ್ಕೂಲಿನಲ್ಲಿ ಮಕ್ಕಳು ಮಕ್ಕಳೆಂದೇ ನಮಗೆ ಮಕ್ಕಳ ಪಟ್ಟ ಕಟ್ಟಿದ್ದರು , ಕಾಲೇಜಿಗೆ ಸೇರಿಕೊಂಡು ದೊಡ್ಡವರಾಗಬೇಕೆಂದು ಪ್ರತಿಘ್ನೆ ಮಾಡಿದ್ದೆವು . ಕಾಲೇಜಿಗೆ ವಿಜ್ನಾನ ವಿಷಯದಲ್ಲಿ ಪ್ರವೇಶ ಪಡೆದಾದ ಮೇಲೆ ಕ್ಲಾಸಿಗೆ ಹೋಗುವ ಅ ಸುದಿನ ಬಂದಿತ್ತು . ಅಮ್ಮ ಯುದ್ಧಕ್ಕೆ ಹೊರಟುನಿಂತ ಸೈನಿಕನಿಗೆ ಆಶಿರ್ವದಿಸುವಂತೆ ಮುಖಕ್ಕೆ ಮಂಗಳಾರತಿ ಎತ್ತಿ ಹೊಸ ಪೆನ್ನನ್ನು ಜೇಬಿನಲ್ಲಿಟ್ಟು ಹೋಗಿಬಾ ಎಂದು , ಕಾಲೇಜಿನಲ್ಲಿ ಯಾರ ಜೊತೆಗೂ ಜಗಳವಾಡಬಾರದೆಂದು ಹೇಳಿ ಗೇಟಿನವರೆಗೂ ಬಂದು ಒಮ್ಮೆ ದೃಷ್ಟಿ ತೆಗೆದು ಹಾಕಿದರು , ಅಪ್ಪ ಐವತ್ತು ರೂಪಾಯಿ ಜೇಬಿನಲ್ಲಿ ತುರುಕಿ ಚೆನ್ನಗಿ ಓದು ಎಂದು ಹೇಳಿದರಾದರೂ ನನ್ನ ಓದಿನ ಸಲುವಾಗಿ ಅವರ ಮನಸಲ್ಲಿ ಕೊಂಚ ದುಗುಡವಿತ್ತು . ನಾನು ಹೊಸಬಟ್ಟೆಗಳ ತೊಟ್ಟು ಕೊಂಚ ಖುಷಿ ಕೊಂಚ ಭಯದಿಂದ ಹೊರಟು ನಿಂತೆ . ದಾರಿಯುದ್ದಕ್ಕೂ ಏನೇನೋ ಯೋಚನೆಗಳು