ಬುದ್ದ
ನಡೆದ ಹಾದಿಯಗುಂಟ
ಕಲ್ಲು ಮುಳ್ಳುಗಳದೇ ಕಾರುಬಾರು
ಸುರಿಯುತಿಹ ರಕುತದ
ಪರಿವೇ ಇಲ್ಲದೇ ಹಾಗೇ
ನಡೆಯುತ್ತಿದ್ದಾನೆ,
ನೋವಾಗಿ ಮುಖವ ಕಿವುಚಲಿಲ್ಲ
ಹಸನ್ಮುಖಿಯಾಗಿ ಸುಮ್ಮನೇ
ಚಲಿಸುತಿದ್ದಾನೆ,
ಗಾಳಿ ಗಮಲಿನಂತೆ.
ಎಲ್ಲೆಗಳನೆಲ್ಲಾ ಮೀರಿ
ಎಲ್ಲಿಂದೆಲ್ಲಿಗೋ ಚಲಿಸುತಿದ್ದಾನೆ
ನದಿಯಂತೆ,
ಜಗದ ಕ್ರೂರತನದ ಕಾವಿಗೆ
ಕರಗಿ ಹರಿಯುತಿದ್ದಾನೆ,
ಬರೀ ಕತ್ತಲೆಯೇ ತುಂಬಿ
ಜೀ ಗುಡುವಾಗ ಮೇಣವಾಗಿ
ಬೆಳಕಿತ್ತು ಜಿನುಗುತಿದ್ದಾನೆ,
ನಾನು ನಾನೆಂಬ ಅಹಂಗಳೇ
ತಾಂಡವವಾಡುವಾಗ
ಅವುಗಳ ಮುಖವಾಡ
ಬಣ್ಣದ ಬಟ್ಟೆಗಳನೆಲ್ಲ್ಲಾಕಳಚಿ
ನಗ್ನವಾಗಿಸಿದ್ದಾನೆ,
ಕ್ರೌರ್ಯತನದ ಕಸವ
ಗುಡಿಸೊ ಕೆಲಸದಲ್ಲಿ
ಮಗ್ನನಾಗಿದ್ದಾನೆ,
ಇನ್ನೂ ನಮ್ಮೊಳಗೆ ಸಣ್ಣಗಿನ
ದೀಪದಂತಿದಾನೆ
ಹುಡುಕಬೇಕಷ್ಟೇ ನಾವು
ನಮ್ಮೊಳಗೆ ಆತನನ್ನು,
ನಮ್ಮ ಮನಸಂತಿದ್ದಾನೆ
'ಹುಡುಕಬೇಕಷ್ಟೇ ನಾವು
ReplyDeleteನಮ್ಮೊಳಗೆ ಆತನನ್ನು '
ಅರ್ಥವತ್ತಾದ ಸಾಲುಗಳ ಸು೦ದರ ಕವನ. ಅಭಿನ೦ದನೆಗಳು.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ReplyDeleteಚೆನ್ನಾಗಿದೆ.. ಕೊನೆಯ ಸಾಲುಗಳು ತು೦ಬಾ ಇಷ್ಟವಾದವು.
ReplyDelete@manamuktha: thanks......
ReplyDeleteಸುಂದರ ಸಾಲುಗಳು. ಬಹಳ ಇಷ್ಟವಾಯಿತು.
ReplyDelete@ashwini:ಧನ್ಯವಾದಗಳು... ಮತ್ತೆ ಬಯಲ ಹುಡಿಗೆ ಬರ್ತಿರಿ.....
ReplyDeleteತುಂಬಾ....ತುಂಬಾ ಚೆನ್ನಾಗಿದೆ....
ReplyDeleteಶಾಲ್ಮಲಿ: ತುಂಬಾ ಧನ್ಯವಾದಗಳು
ReplyDelete>>ಹುಡುಕಬೇಕಷ್ಟೇ ನಾವು
ReplyDeleteನಮ್ಮೊಳಗೆ ಆತನನ್ನು
ಬುದ್ದನ ಬಗ್ಗೆ ಉತ್ತಮ ಕವನ..