Posts

Showing posts from June, 2011

ನಾನು ಮತ್ತು ಸಂಜೆ

Image
ಸಂಜೆ ಹೊತ್ತು, ಕತ್ತಲಾಗದೇ ಬೆಳಕ ಚೂರು ಪಾರು ಹಾಗೇ ಉಳಿದಿತ್ತು. ಸುತ್ತಲೆಲ್ಲೂ ಸದ್ದಿನ ಗುರುತಿಲ್ಲ, ಮೌನವೇ ಕಾಡಿತ್ತು. ನಾನಿದ್ದೇನೆ, ನನ್ನ ಜೊತೆ ಅಳಿದುಳಿದ ಅವಳ ನೆನಪುಗಳು ಸಂಜೆಗೆಂಪಿಗೆ ಕಾವೇರಿ ಕೇಕೆ ಹಾಕಿ ನಗುತ್ತಿದ್ದ ಕನಸುಗಳು ಮೇಲಿದುರುತ್ತಿದ್ದ ಎಲೆಗಳೆಲ್ಲ ತಲೆ ಸವರಿ ಸಮಾಧಾನ ಹೇಳುತಿದ್ದರೆ ಜವುಳು ಮಣ್ಣು ನನ್ನೊಡಲ ಸೇರೆಂದು ಕಾಲೆಳೆಯುತಿತ್ತು ನಿನಗೆ ಸಾವೇ ಸರಿಯೆಂದು ತಿಳಿ ಹೇಳುತಿತ್ತು ಅತ್ತ ಓಡಲೂ ಆಗದೆ, ಇತ್ತ ನಿಲ್ಲಲೂ ಆಗದೇ ಇನ್ನೂ ಅಲ್ಲೇ ಇದ್ದೇನೆ ಜೀವ ಹೊಸತಿನ ಗುರುತೋ ಹಳತು ಜೀವದ ಸಾವೋ ಇನ್ನೂ ಉತ್ತರ ಸಿಗದೇ ಅಲ್ಲೇ ಅವಳಿಗಾಗಿ ಕಾಯುತಿದ್ದೇನೆ

’ಲವ್ ಯು ಅಪ್ಪ’

Image
ಸಂಜೆ ನಾಲ್ಕರ ಗಡಿ ದಾಟಿತ್ತು, ಲಗೇಜನ್ನೆಲ್ಲಾ ಹೊತ್ತು ಸಿಟಿ ಬಸ್ಸು ಹತ್ತಿ ಕಿಟಕಿ ಪಕ್ಕ ಕುಳಿತೆ, ಬಿಸಿಲು ಇನ್ನು ಚುರುಗುಟ್ಟಿಸುತಿತ್ತು. ಸ್ವಲ್ಪ ದೂರ ಬಸ್ಸು ಸಾಗುತ್ತಿದ್ದಂತೆ ಮೋಡ-ಮೋಡಗಳೆಲ್ಲ ಕೂಡಿ ಬಸುರಿಯಾದ ಆಕಾಶ ಚಿಟ-ಪಟ ಎಂದು ಹನಿಯುದುರಿಸತೊಡಗಿತು. ಟ್ರ್ಯಾಫಿಕ್ಕಿನಲ್ಲಿ ಸುಸ್ತಾಗಿ ನಿಂತ ಬಸ್ಸು, ಕುಯ್ಯೋ ಮರ್ರೋ ಎಂದು ಹಾರನ್ ಹಾಕುತಿದ್ದ ಗಾಡಿಗಳು, ಹಾಗೆ ತೂಕಡಿಕೆಯಿಂದೆದ್ದ ನಾನು ಪಕ್ಕಕ್ಕೆ ಕಣ್ಣು ಹಾಯಿಸಿದೆ.... ಬೈಕಿನಲ್ಲಿ ಮಗು ರೇನ್ ಕೋಟ್ ಹಾಕಿ ಅಪ್ಪನನ್ನು ಗಟ್ಟಿಯಾಗಿ ತಬ್ಬಿ ನಿದ್ದೆಗೆ ಜಾರಿತ್ತು, ಅದನ್ನೇ ನೋಡುತ್ತಾ, ಏನೋ ನೆನಪಾಗಿ ಕಣ್ಣು ಹಸಿಯಾಗ ಹತ್ತಿತು...... ಸುಮಾರು ಹನ್ನೆರಡನೇ ವಯಸ್ಸು, ಗೋಲಿ ಆಡಲು ಹೋಗಿ ಸಂಜೆ ಮನೆ ಸೇರಿದ್ದೆ. ಮುಂಜಾನೆಯಿಂದ ನನ್ನೇ ಹುಡುಕಿದ್ದ ಅಪ್ಪನಿಗೆ ಸಿಟ್ಟು ಬಂದು ಕಪಾಳಕ್ಕೆ ಬಾರಿಸಿದರು, ಅಳುತ್ತಾ ರೂಮು ಸೇರಿ ಸುಮ್ಮನೇ ಮಲಗಿದೆ. ಅಮ್ಮ ಊಟ ಮಾಡಿಸಲು ಚಿನ್ನ ರನ್ನ ಎಂದು ಒತ್ತಾಯಿಸಿದರೂ ಮೌನ ಕೋಪಿಯಾಗಿ ಸುಮ್ಮನೇ ಹೊದ್ದು ಹಾಗೆ ಮಲಗಿದ್ದೆ, ಅಪ್ಪ ಬಂದವರೆ ಎದೆಗವಚಿಕೊಂಡು ಅಡುಗೆ ಮನೆಗೆ ಕರೆದುಕೊಂಡು ಹೋಗಿ ತುತ್ತು ಮಾಡಿ ಬಲೂ ಪ್ರೀತಿಯಿಂದ ತಿನ್ನಿಸಿದರು, ಒಮ್ಮೆಲೇ ಜೋರಾಗಿ ಅಳು ಬಂದು ಅಪ್ಪನ್ನ ತಬ್ಬಿಕೊಂಡು ಅತ್ತುಬಿಟ್ಟೆ. ಸಮಾಧಾನ ಮಾಡುತ್ತಾ ಹಣೆಗೆ ಕೊಟ್ಟ ಮುದ್ದು ಇನ್ನೂ ನೆನಪಿದೆ. ಅಮ್ಮನದು ಒಂದು ತರಹದ