Posts

Showing posts from April, 2010

ನನ್ನಪ್ಪ

Image
ನಾನು ಹುಟ್ಟಿದೊಡನೆ ಮೊದಲು ಖುಷಿಯ ಪಟ್ಟವನು ನನ್ನಪ್ಪ..... ಅಮ್ಮನಿಗಿಂತ ಮೊದಲು ಮುತ್ತು ಕೊಟ್ಟವ, ನನಗೆ ನಡಿಗೆಯ ಕಲಿಸಲು ಮೊದಲ ಗುರುವಾದಾತ... ನನ್ನ ರಾಜನ ಮಾಡುವ ಸಲುವಾಗಿ ತಾನು ಆನೆಯಾದಾತ, ನನ್ನ ಜೀವದಾತ...... ಗುಂಗುರು ಕೂದಲುಗಳು ಕಣ್ಣುಗಳ ಸೋಕಿ ರೆಪ್ಪೆಗಳು ಮುಚ್ಚುವಾಗ ಉಫ್ ಎಂದು ಉರುವಿ ತಂಗಾಳಿಯ ಬೀಸಿದಾತ.... ಅಮ್ಮ ಅಡುಗೆ ಮಾಡುವಾಗ ತನ್ನ ಕಾಲ್ಗಳ ಮೇಲೆ ನನ್ನ ಕಾಲ್ಗಳನಿರಿಸಿ ಆಟವಾಡಿಸಿದಾತ... ಅಮ್ಮ ಮೊದಲ ಗುರುವಾದರೆ ಅಪ್ಪ ಮೊದಲ ಸ್ನೇಹಿತ....

ನನ್ನ ಪ್ರೇಮದ ಪರಿಯ ನೀನರಿಯೆ ಕನಕಾಂಗಿ...

Image
ಚಂದ್ರನ ಬೆಳದಿಂಗಳೇ ಅವಳ ಮೈಯ ಬಣ್ಣವಾಗಿತ್ತೋ ಏನೋ!!!! ಮೊಗದ ಮೇಲಿನ ನಗುವು ಹೂವನ್ನೂ ನಾಚಿಸುವಷ್ಟು ಸುಂದರವಾಗಿತ್ತು, ಆಹ್ಹಾ! ಆ ಕಂಗಳಲ್ಲಿ ನಕ್ಷತ್ರಗಳ ಸಮೂಹವೇ ಇತ್ತೇನೋ, ಯಾರೇ ಅವಳ ನೋಡಿದರೂ ಪ್ರೇಮದ ಬಂದೀಖಾನೆಗೆ ಬೀಳದೇ ಇರರು, ಅಷ್ಟು ಸೌಂದರ್ಯವತಿ ನನ್ನ ಮನದರಸಿ...... ಅವಳು ಎದುರುಗಡೆ ಬಂದೊಡನೆ ನನ್ನ ಕಣ್ ರೆಪ್ಪೆಗಳು ಮುಚ್ಚಲು ಒಲ್ಲೆ ಎನ್ನುತಿದ್ದವು, ಹೃದಯ ಬಡಿತದ ಸದ್ದು ಪಕ್ಕದವರಿಗೂ ಕೇಳುವಷ್ಟು ಜೋರಾಗುತಿತ್ತು, ಮನದ ಮುಗಿಲಿನಲ್ಲಿ ಬಣ್ಣ-ಬಣ್ಣದ ಕನಸುಗಳು ಹಗಲು ಹೊತ್ತಿನಲ್ಲೇ ಬೀಳತೊಡಗಿದವು..... ಮನಸ್ಸು, ಹೃದಗಳೆರಡು ಅವಳ ಸೌಂದರ್ಯಕೆ ತಲೆ ಬಾಗಿ ಪ್ರೇಮಲೋಕದಲ್ಲಿ ವಿಹರಿಸತೊಡಗಿದವು. ಅವಳ ಹಿಂದೆ ಹೋಗಿ ಮಾತನಾಡಿಸಲು ಪ್ರಯತ್ನ ಪಟ್ಟೆ, ಧರ್ಯ ಕೊಂಚ ಕಮ್ಮಿ ಎನಿಸಿತು. ಹತ್ತಿರದವರೆಗೂ ಹೋಗಿ ಇನ್ನೇನು ಮಾತನಾಡಿಸ ಬೇಕು ಎನ್ನುವ ಹೊತ್ತಿಗೆ, ಉಸಿರು ಹಿಡಿದಂತಾಗಿ ಸುಮ್ಮನೆ ಹಿಂತಿರುಗಿ ಬಂದೆ.ಅವಳ ಹಿಂದೆ ಅಲೆಯುವಾಗ ಬಿರು ಬಿಸಿಲು ತಂಪೆರೆಯುತಿತ್ತು. ಕೊನೆಗೊಂದು ದಿವಸ ಮನಸ್ಸಿನ ಆಸೆಯನ್ನೆಲ್ಲಾ ಹೇಳಿಬಿಡೋಣವೆಂದು ಮೊಂಡು ಧೈರ್ಯ ಮಾಡಿ ಹೇಳಿದೆ....."ಹಾಯ್! ಹೇಗಿದಿರಿ.... ನಾನು ಪ್ರವರ ಅಂತ, ಡಿಗ್ರಿ ಮುಗಿತಿದೆ, ನೀವು ತುಂಬಾ ಇಷ್ಟ ಆಗಿದಿರ, pressure ಇಲ್ಲ. time ತಗೊಂಡ್ ಹೇಳಿ,,, next meet ನಲ್ಲಿ ತಿಳಿಸಿ, ಬರ್ತಿನಿ"... ಅವಳು ಸುಮ್ಮನೆ ಮುಗುಳು ನಗುತ್ತಾ ನನ್ನ ಮಾತುಗಳನ್ನ ಕೇಳು

ಕಳುಹಿಸಿಕೊಡುವೆ ಕವನಗಳಾಗಿ

Image
ನನ್ನೊಳಗಿನ ಕನಸುಗಳು ರೆಕ್ಕೆ ಬಿಚ್ಚಿ ಹಾರಲಾರವು, ಕಳುಹಿಸಿಕೊಡುವೆ ಕವನಗಳಾಗಿ ಮತ್ತೆ ಮರಳಿ ಬರಲಾರವು ಕಣ್ಣೊಳಗಿನ ಮುನಿಸುಗಳು ಬರಲಾರವು ಹೊರಗೆ ಹಾಗೆ ಕಣ್ಣಹನಿಗಳಾಗಿ ಕಳುಹಿಸಿಕೊಡುವೆ ಆವಿಯಾಗಿ ಬರಲಾರವು ಧರೆಗೆ ನೆನಪುಗಳಾಗಿ ಇವೆ ಕೆಲವು ಚಿತ್ರಗಳು ಎದೆಯೊಳಗೆ ಹರಿಯುತಿವೆ ಇನ್ನೂ ಕೆಲವು ಸರಾಗವಾಗಿ ರಕುತದೊಳಗೆ ಹೃದಯದ ಬಡಿತದಲ್ಲಿ ಕೆಲವು ಸದ್ದು ಮಾಡುತ್ತಿವೆ ಸುಮ್ಮನೆ ನೋವು-ನೆನಪುಗಳೆಂದರೆ ಹೀಗೆಯೇ ಏನೋ ಕಾಡುವವು ನಮ್ಮನೆ