Posts

Showing posts from May, 2012

ಮಣ್ಣೊಳಗಿನ ಬೀಜ

ಹಸಿ ಮಣ್ಣೊಳಗಿದ್ದ ಬೀಜ ನಗುತ್ತಾ ಮೊಳಕೆಯೊಡೆಯುತ್ತಿದೆ, ಯಾರದೋ ಕೂಗಿಗೆ ಓಗೊಟ್ಟಂತೆ, ಆಕಾಶದೆತ್ತರೆಕೆ ಬೆಳೆದಿದ್ದ ಹೆಮ್ಮರವ ಅಣಕಿಸುವಂತೆ ಚಿಗುರ ನಾಲಿಗೆಯ ಚಾಚಿ ಮಣ್ಣಾಗಿದ್ದ ಬೀಜಕ್ಕೆ ಮತ್ತೆ ಹುಟ್ಟುವ ಬಯಕೆ ಅದಕೇ ಈ ಜನ್ಮ, ಸಾವಿಲ್ಲ ಬದುಕಬೇಕೆಂಬ ತನ್ನದೆಯ ಛಲಕೆ....

ಮಹಾಯಾನ

Image
ಬದುಕೆಂಬುದು ಒಂದು ಅಲೆದಾಟ ನೆರಳಿನ ನೆಲೆ ಹುಡುಕುವ ಮಹಾಯಾನ ಪ್ರತಿ ನಿತ್ಯ ಹೊಸತು ನೆನಪಾಗಿ ನೆಪದಂತೆ ಉಳಿಯಬೇಕು ಹಳಸಿದ ಹಳತು ಸೂರ್ಯ ಮುಳುಗಿದನೆಂದು ಕಣ್ಣೀರು ಹಾಕದಿರು ಹಣತೆಯಿದೆ ಚೂರು ಬೆಳಕೀಯಲು. ಬರಿ ಬೆಳಕೆ ಬಾಳಲ್ಲ ಕತ್ತಲೆಯು ಜೊತೆಗಿರಲಿ ನಿದ್ದೆಯೊಳಗೆದ್ದು ಓಡಾಡಲು ಹೊಟ್ಟೆ ಹಸಿವಿನ ತಂತಿ ಮೀಟುತಿದೆ ನೋಡಿಲ್ಲಿ, ಅಂಗುಲದ ಜಾಗಕ್ಕೆ ಜಗ ಸಾಲದು, ಕೊಂಚ ನಗು ನಕ್ಕು ಬಿಡು ಅಳುವೆಲ್ಲ ತೊಳೆವಂತೆ, ಬದುಕ ಸೊಡರೆಲ್ಲ ನುಣುವಾಗದು

ಬಯಲ ಹುಡಿ(ಗಿ)

Image
ಸುಡುತಿದ್ದ ಸೂರ್ಯನೆಡೆಗೆ ಮೈಯೊಡ್ಡಿ ನಿಂತಿದ್ದಳು ಇದ್ದ ತುಂಡು ಹಸಿರು ಬಟ್ಟೆಯನ್ನೂ ನಾಲ್ಕು ಜನ ಸೇರಿ ಕಿತ್ತೆಸೆದಿದ್ದರು ಮೈಮೇಲೆ ಹಾರಿ ಪರಚಿದವರೆಷ್ಟೋ ಹಲ್ಕಿರಿದು ನಕ್ಕು ನಾಲಿಗೆ ಚಪ್ಪರಿಸಿದವರೆಷ್ಟೋ!!!! ಕೂಗಿಕೊಂಡರೂ ಕೇಳುವವರಿಲ್ಲ ಕಣ್ಣಿದ್ದೂ ಕುರುಡಾದವರೆಲ್ಲ.... ಜೊಲ್ಲು ಸುರಿಸುತ ನಿಂತಿದ್ದರೇ ಹೊರತು ಕೈ ಹಿಡಿಯುವವರಿರಲಿಲ್ಲ ಸುರಿಯುತಿದ್ದ ಕಣ್ಣೀರು ಆವಿಯಾಗುತಿತ್ತು ಬಿಸಿಲಿಗೆ ಆಕೆ ಹೆಣ್ಣು ಇನ್ನೇನು ಮಾಡಿಯಾಳು ಮುಖ ಮಾಡಿ ನಿಂತಳು ಮುಗಿಲಿಗೆ.... ಸಾಯುತಿದ್ದಾಳೆ ಆಕೆ ಬಿಸಿಲಿಗೆ ಬೇಯುತಿದ್ದಾಳೆ (ನನ್ನ ಬಳ್ಳಾರಿ, ಗಣಿ ಧಣಿಗಳೆಂಬ ಕ್ರೂರಿಗಳ ಕೈಗೆ ಸಿಕ್ಕು ಅತ್ಯಾಚಾರವಾಗಿ ನಲುಗಿಗೆ, ರೆಡ್ಡಿ ಚಡ್ಡಿಗಳೆಂಬ ರಾಕ್ಷಸರ ಕೈಯಲ್ಲಿ ಮರುಭೂಮಿಯಾಗಿದೆ, ಅಲ್ಲಿನ ಜನಗಳ ನಾಲಿಗೆ ಬಿದ್ದು ಹೋಗಿ ಮಾತಿಲ್ಲದಂತಾಗಿದೆ.... ಆಕೆಯ ಕೂಗಿನ ದನಿ ಈ ಕವನ )

ಶಾಯರಿ(SHAAYARI)

~~~~~~~~~~~ ಸಾಗರದ್ ದಂಡ್ಯಾಗಿನ್ ಕಪ್ಪೀ ಚಿಪ್ಪು ಬರೋ ಮಳೀಗಾ ಕಾಯ್ಲಿಕತ್ಯಾದ,!! ಇನ್ನಾದರೂ ಯಾಕ್ ಬರುವಲ್ಲೀ ಹುಡುಗಿ ನಿನ್ ಬರ್ಲಿಲ್ಲಾಂತ ಈ ಜೀವ ಸಾಯ್ಲಿಕತ್ಯಾದ!! ~~~~~~~~~~~ ಜೋರ್ ನಗಬ್ಯಾಡ್ ಹುಡುಗಿ ನನ್ ತೋಟದಾಗಿನ್ ಹೂ ನಾಚ್ಕೊತವ,!! ನೀ ಹಂಗಾ ನಕ್ಕೀ ಅಂದ್ರ ಓಡಿ ಬಂದು ನಿನ್ನ ಚೆಂದದ್ ನಗೂನ ಬಾಚ್ಕೊತವ!! ~~~~~~~~~~~ ಬಾಟ್ಲಾಗಿನ್ ಶರಾಬಿನ ನಶೀ ಏರಿದ್ರೂ ಒಂದು ರಾತ್ರ್ಯಾಗ ಇಳೀತದ!! ನಿನ್ನ ತುಟ್ಯಾಗಿನ್ ನಶೀ ಹಂಗಲ್ಲಾ ಓಮ್ಮೆ ಏರಿದ್ರ ಸ್ವರ್ಗಕ್ಕಾ ಎಳೀತದ!!                               -ಪ್ರವರ