Posts

Showing posts from May, 2013

ಒಂದು ರೋಡಿನ ಕಥೆಯಿದು

ಮಟ ಮಟ ಮದ್ಯಾನ್ಹ , ಟಾರು ರೋಡಿಗೇನು ಬಿಸಿಲ ಝಳ ಅಂಟೀತೆ ? ಅದೆಷ್ಟಾದರೂ ಬರೆ ಇಟ್ಟುಕೋ , ತೃಪ್ತಿಯಾಗುವಷ್ಟು ಸುಟ್ಟುಕೋ ಎಂದು ಬಟ್ಟೆ ಕಳಚಿ ಮಲಗಿದೆ , ಹೈ ಹೀಲ್ಡ್ಸ್ ಚಪ್ಪಲಿ , ಬೂಟು ಹಾಕಿದವರ ತುಳಿತ ಬೇರೆ , ಕ್ಯಾಕರಿಸಿ ಉಗಿದವರು ಅದೆಷ್ಟು ಜನರೋ ಏನೋ , ಈ ಶಹರದ ಏಳ್ಗೆ ಕಂಡವರಲ್ಲಿ ಉಳಿದದ್ದು ಮಾತ್ರ ಈ ಟಾರು ರೋಡು , ಮಿಕ್ಕವರು ಜಪ್ಪಯ್ಯ ಎಂದರೂ ಏಳುತ್ತಿಲ್ಲ . ಬಿಡಿ ಈಗಲಾದರೂ ಒಳ್ಳೆಯ ನಿದ್ದೆ ಹೊಟ್ಟೆಡುಮ್ಮ ರಾಜನೂ ರಾಣಿಯರೂ ಅವರೊಂದಿಗಿನ ಮಾಣಿಗಳು , ಕುದುರೆ ಸಾರೋಟುಗಳು , ಮುಕ್ಕಾದ ಕೋಟೆಗಳು ಬಣ್ಣ ಮಾಸಿದ ಅರಮನೆ ನೋಡಿ ನೋಡಿ ತಿಕ್ಕಲು ತಿರುಗಿ ಹೋಗಿದೆ , ಯುದ್ದವಾದಾಗ ಕೊನೆಗೆ ಇದೇ ಜಾಗದಲ್ಲಿ ರಕ್ತ ಮೆತ್ತಿಕೊಂಡ ನೆನಪು , ನೆನೆಸಿಕೊಂಡರೆ ಕೆಮ್ಮು ಅಡರುತ್ತದೆ , ಮೊಂಡುಗತ್ತಿಗಳಿನ್ನೂ ಮ್ಯೂಸಿಯಂನಲ್ಲಿವೆ ಐದು ರೂಪಾಯಿಯ ಟಿಕೇಟ್!!! ನೋಡಿಕೊಂಡು ಬನ್ನಿ , ಆಗ ಇದೊಂದು ಕಚ್ಚಾ ರಸ್ತೆ ಹೆಸರನ್ನು ಯಾರೂ ಉಲ್ಲೇಖಿಸಲೇ ಇಲ್ಲ ಇತಿಹಾಸಗಳಲ್ಲಿ , ಬಿಡಿ ಹಾಳಾಗಿ ಹೋಗಲಿ , ಅದೆಷ್ಟೋ ವರ್ಷಗಳ ಮಾತು , ಗುಲ್-ಮೊಹರ್ ಮರದ ಸಾಲುಗಳಡಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಪ್ರೇಮಿಗಳಿಗೆ ಈ ರಸ್ತೆ ಸ್ವರ್ಗ , ಮಾಗಿಯ ಚಳಿ ಶುರುವಾಗಿ ಹೂಗಳುದುರುತಿದ್ದರೆ ಥೇಟ್ ಮದುವಣಗಿತ್ತಿಯ ಲುಕ್ಕು , ಅದೊಂದು ಕಾಲ ಬಿಡಿ ಇಂದು ವಯಸ್ಸಾಗಿದೆ ವಾಕಿಂ

ಇರುವೆ ಮುತ್ತಿಕೊಂಡ ಕೇರಿಹಾವು

ನನ್ನ ಜನಗಳಿಗೆ ಬಿಸಿಲು ತಾಕುವುದೇ ಇಲ್ಲ; ಎಂಟು ಲಕ್ಷ ಕಿಲೋಮೀಟರುಗಳ ದಾಟಿ ಬಂದ ಸೂರ್ಯನ ಬಾಹುಗಳಿಗೆ ಅವಿರತ ಸೋಲು; ಕಪ್ಪು ಚಮುಡದ ಹೊದಿಕೆಯ ಮೇಲಡರಿದ್ದ ಬೆವರನ್ನು ಸೀಳಿ ತಾಕುವುದೆಂದರೆ ಅಸಾಧ್ಯದ ಮಾತು, ವೇದೊಪನಿಷತ್ತುಗಳ ಅಂಡುಗಳ ಮೇಲೆ ಬರೆ ಇಡುತಿದ್ದರೆ, ಜನಿವಾರಗಳ ಹೋಮ, ಹಣೆ-ಎದೆಗಳ ಮೇಲೆ ಒಂದೇ ಒಂದು ಹನಿ ಬೆವರು ಕೀಳುವುದಿಲ್ಲ, ಬೆಂಕಿಗೆ ತುಪ್ಪ ಬೀಳುತಿದ್ದಂತೆ ಧಗ ಧಗ, ಗುಹೆಯಂತ ಗರ್ಭಗುಡಿಯೊಳ ನೀರವ ಮೌನದ ನಡುವೆ ದೇವರಿಗೆ ಕಣ್ಣು ಕಾಣುವುದಿಲ್ಲ, ಬೆಳಕು ತೂರಲೆಂದು ಅಂಗುಲದಷ್ಟು ತೂತು ಕೊರೆದಿದ್ದಾರೆ, ಒಣಗಿದ ಹೂವು, ನೈವೇಧ್ಯಕ್ಕಿಟಿದ್ದ ಹಿಡಿ ಅನ್ನ ಬೇಲಿ ದಾಟದಂತೆ ಬೆಳೆದ ಬಳ್ಳಿಯಲ್ಲಿ ಅದೇ ತಾನೆ ಅರಳಿದ ಶಂಕುಹೂವು, ಇರುವೆ ಮುತ್ತಿಕೊಂಡ ಕೇರಿಹಾವು, ಊರಹಾದಿಯಗುಂಟ ನಗ್ನ ತಮಟೆಯ ಸದ್ದು, ಗುಲಗಂಜಿ ತೂಕದ ಗೌಡಿಕೆಯ ಕುರ್ಚಿ, ಕುಣಿಕಿ ಚೀಲದಲ್ಲಿದ್ದ ಮೊಬೈಲಿಗೆ ಎರಡು ಕಡ್ಡಿ ಸಿಗ್ನಲ್ಲು ಸಿಕ್ಕಿತಾದರೂ, ಮೊಲೆಹಾಲು ಉಣುತಿದ್ದ ಹಸುಗೂಸ ಗುಡಿಸಲಿಗೆ ಬೆಳಕು ಮಾತ್ರ ಅಲೆಯಲಿಲ್ಲ, ಚಿಮೆಣ್ಣಿ ಬುಡ್ಡಿಯೊಳಗಿಂದ ಮಿಣುಕಾಡುವ ಬೆಂಕಿ ತಣ್ಣಗಿನ ಕ್ರೌರ್ಯ, ಜೋತು ಬಿದ್ದ ಜೋಪಡಿಗೆ ತೂಕಡಿಕೆಯ ಸಾವು. -ಪ್ರವರ ಕೊಟ್ಟೂರು

ತುಟಿ ಮೇಲಿನ ಎಂಜಲು ಆವಿಯಾಗುತ್ತಲೇ ಇಲ್ಲ

ಮೊದಲ ಮಳೆಯಂತೆ ಪ್ರತಿ ದಿನವೂ ಎದೆಯೊಳಗೆ ಇಳಿಯುತ್ತಲೇ ಹೋಗುತ್ತಿಯಲ್ಲ ಹುಡುಗಿ, ನಿನ್ನನ್ನು ಆಸೆ ಎನ್ನಬೇಕೊ ನನ್ನ ತೀರದ ಬಾಯಾರಿಕೆ ಎನ್ನಬೇಕೊ, ನಿನ್ನ ಹಸಿ ನಿಟ್ಟುಸಿರು ಎದೆಗೂದಲುಗಳ ಮೇಲೆ ಇಬ್ಬನಿಯಂತೆ ಅಮರಿಕೊಂಡಿದೆ, ತಣ್ಣಗಿನ ಅನುಭವವನ್ನು ಅದ್ಯಾವ ಬಿಸಿಲು ಕಸಿದುಕೊಂಡೀತು, ಕಸಿದುಕೊಂಡರೂ ದಕ್ಕುವುದಿಲ್ಲ ಬಿಡು ಹಣೆ ಬೆವರು ಸಣ್ಣಗಿನ ಸುಳಿಗಾಳಿಯೊಡನೆ ತುಟಿಗೆ ತುಟಿಯೊತ್ತುತ್ತಲೇ ಕಂಪನ, ಗೆರೆಗಳ ನಡುವೆ ನುಲಿದಾಡುತ್ತಾ ಸಾಗಿದ್ದೇ ಸಾಗಿದ್ದು, ವಾಸನೆಯ ಜಾಡು ಹಿಡಿದು ಹೊರಟಿರಬೇಕು! ತುಟಿ ಮೇಲಿನ ಎಂಜಲು ಆವಿಯಾಗುತ್ತಲೇ ಇಲ್ಲ, ನಾಲಿಗೆ ಚಪ್ಪರಿಸಿದ ಸದ್ದು; ಧೀರ್ಘ ಚುಂಬದಲ್ಲಿ ಉಸಿರೇ ಮರೆತೇ ಹೋಯ್ತು, ಅಂತ್ಯದಲ್ಲಿ ನೆನಪು. ಕಣ್ಣುಗಳಿಗೆ ಬಿಡದ ಜಾಗರಣೆ, ನೋಟಕ್ಕೆ ನೋಟ ಸೇರು ಸವಾಸೇರು, ಒಂದಕ್ಕೊಂದು ತಬ್ಬಿದಂತೆ ಕತ್ತಲಿಗೋ ನೂಕುನುಗ್ಗಲು -ಪ್ರವರ ಕೊಟ್ಟೂರು

ಲಚುಮಿಯೆಂಬ ಪ್ರೇತವೂ, ಬದುಕಲೆಂಬ ಪ್ರೀತಿಯೂ

                        "ಬೆಳಗ್ಗೆಯಿಂದ ಏನು ಬರೆಯಲಾಗುತ್ತಿಲ್ಲ ಸಾಕಾಗಿ ಹೋಗಿದೆ, ತಲೆ ಚಿಟ್ಟು ಹಿಡಿಸುವ ಗಲಾಟೆ ಬೇರೆ, ಎರೆಡು ಪ್ಯಾಕ್ ಸಿಗರೇಟ್ ಖಾಲಿಯಾದರೂ ಹೂ ಹೂ... ಅದೇ ಕಿಟಕಿ ಅದೇ ಬೀದಿ ಅದೇ ಚಿತ್ರಗಳು ಅದೇ ಮಾಸಲು ಜನ ಏನೂ ತೋಚುತ್ತಿಲ್ಲ ಬರೆಯಲು, ಥೂ ಎಲ್ಲಾದರೂ ಜನರಿಲ್ಲದ ಜಾಗಕ್ಕೆ ಹೋಗಿ ಪ್ರಯತ್ನಿಸಿದರೆ ಬರೆಯಬಹುದೇನೋ" ಎಂದು ಗೊಣಗುತ್ತಲೇ ಲುಂಗಿ ಕಿತ್ತು ಬಿಸಾಡಿ ಪ್ಯಾಂಟು ಏರಿಸಿಕೊಂಡ ಅಂಗಿ ಸುಕ್ಕು ಸುಕ್ಕಾಗಿದ್ದರೂ ಅದನ್ನೇ ಏರಿಸಿಕೊಂಡ,  ಒಂದಷ್ಟು ಹಾಳೆಗಳ, ಪೆನ್ನು, ರೈಟಿಂಗ್ ಪ್ಯಾಡನ್ನು, ಹೆಂಡತಿಯಂಥ ಸಿಗರೇಟು ಪ್ಯಾಕನ್ನ ಜೋಳಿಗೆಯಂಥ ಬ್ಯಾಂಗಿಗೆ ತುರುಕಿಕೊಂಡು, ಬಿಸಿಲಲ್ಲಿ ಒಣಗುತ್ತಾ ನಿಂತಿದ್ದ ಚೇತಕ್ ಬಜಾಜನ್ನು ನಾಲ್ಕು ಕಿಕ್ಕು ಕೊಟ್ಟ ಒಂದು ತರಹದ ಸೌಂಡು ಮಾಡುತ್ತಾ ತುರಾಮುಟ್ಟಿಯಷ್ಟು ಹೊಗೆಯುಗುಳುತ್ತಾ ಸವಾರಿಗೆ ರೆಡಿಯಾಯ್ತು, ಸ್ವಲ್ಪ ಮುಂದಕ್ಕೆ ಚಲಿಸುತ್ತಲೇ ಯಾವಕಡೆ ಹೋಗಬೇಕೆಂದು ಊರಿನ ನಾಲ್ಕೂ ದಿಕ್ಕುಗಳನ್ನು ನೆನೆದು ಕೂಲಂಕುಶವಾಗಿ ಮನಸ್ಸಿಗೆ ತಂದುಕೊಂಡು "ಗೌಡರ ತೋಟಕ್ಕೆ ಹೋದರೆ ಹೇಗೆ ಛೇ ಛೇ ಬೇಡ ಗೌಡರ ಪೋಲಿ ಆಟಗಳನ್ನು ಹಾಳು ಮಾಡುವುದು ಬೇಡ, ಜೋಳದಕೂಡ್ಲಿಗಿ ರಸ್ತೆಯಲ್ಲಿರುವ ಆಲದ ಮರದಡಿಯಲ್ಲಿರುವ ಮಲಿಯಮ್ಮ ದೇವಸ್ಥಾನಕ್ಕೆ ಹೋಗಿ ಕೂತರೆ ಹೇಗೆ ಥೂ ಅಲ್ಲೂ ಪೂಜಾರಿ ಸುಂಕಪ್ಪನ ಕಾಟ, ಸುಟ್ಟಕೋಡಿಹಳ್ಳಿಯ ದಾರಿ ಖಾಲಿ ಖಾಲಿ ಎನ್ನಿಸಿ ಅದೇ ಸರಿ ಅನ್ನಿಸಿ ಖರಾಬಾದ ಸೌಂಡು ಮಾಡುತ್

ನಮ್ಮ ಭಾರತದಲ್ಲಿ ಹೆಣ್ಣು ಸೆಕ್ಸ್ ಟಾಯ್ ಆಗಿ ಹೋಗಿದ್ದಾಳೆ

ಇಂಡಿಯಾದ ಜನಗಳೇ ಎದೆಯನ್ನು ಕಲ್ಲು ಮಾಡಿಕೊಳ್ಳಿ, ಭಾರತವನ್ನು ತೋರಿಸಲಿದ್ದೇನೆ ಅಸಲಿ, ಭಾರತವನ್ನು ತೋರಿಸಲಿದ್ದೇನೆ. ಹೆಣ್ಣು ಹುಟ್ಟಿದರೆ ಮನೆಯಲ್ಲಿ ಸೂತಕ ಕಟ್ಟಿಕೊಳ್ಳುತ್ತದೆಯಂತೆ ಮೂಲೆ ಮೂಲೆಯಲ್ಲಿನ ಗಾಢ ಜೇಡದಂತೆ, ಹಸಿ ಬಾಣಂತಿಯ ಮೂತಿಗೆ ನಾಲ್ಕು ತಿವಿಯದೆಲೆ ಸೂತಕ ಕಳೆಯುವುದಿಲ್ಲ, ಹೆಣ್ಣು ಮಗು ಬೆಳೆದು ಋತುಮತಿಯಾಗುವಂತಿಲ್ಲ, "ಎಲ್ಲಿಗೇ ಹೋಗಿ ಸಾಯುತ್ತಿ, ಮನೆಯಲ್ಲೇ ಇರು, ದೇವರು ನಮಗೊಳ್ಳೆ ಶನಿ ಗಂಟು ಹಾಕಿದ" ಕನ್ನಡಿಯಲ್ಲಿ ನೋಡಿಕೊಳ್ಳುವಂತಿಲ್ಲ ಮತ್ತದೇ ಬೈಗಳು, ಕತ್ತಲ ಕೋಣೆಯಲ್ಲಿಯೇ ಗೃಹಬಂಧನ, ಜೋರಾಗಿ ಅಳುವಂತಿಲ್ಲ ರಕ್ತಸ್ರಾವಕ್ಕೆ ತಿಂಗಳಿನ ಮೂರ್ನಾಲ್ಕುದಿನ ಅಸ್ಪೃಶ್ಯಳು, ಆಕೆ ಮುಟ್ಟಿದರೆ ಮೈಲಿಗೆಯಾಗುತ್ತದೆಯಂತೆ, ದೇವರ ಮನೆಯನ್ನೋಮ್ಮೆ ಹೊಕ್ಕಿ ನೋಡಿ ಹೂವಿನಾಲಂಕಾರದ ಹೆಣ್ಣು ದೇವರುಗಳೇ ಕಾಣಿಸುತ್ತವೆ ಧೂಪದ ನಡುವೆ. ಇನ್ನೂ ಏನೋ ಹೇಳಲು ಮರೆತೆ ಇಂಡಿಯಾದ ಜನಗಳೇ ಕಲ್ಲೆದೆ ಕರಗಿದರೂ ಕರಗಬಹುದು ಇತ್ತ ಅಳುಕದೇ ಕೇಳಿ ನಮ್ಮ ಭಾರತದಲ್ಲಿ ಹೆಣ್ಣು ಸೆಕ್ಸ್ ಟಾಯ್ ಥರ ಆಗಿ ಹೋಗಿದ್ದಾಳೆ, ರೇಪು ಮಾಡಿದವರು ಮೂರೆ ದಿನಗಳಲ್ಲಿ ರೊಕ್ಕ ಕೊಟ್ಟು ಹೊರ ಬರಬಹುದು, ಅವಳ ಸಾವುಗಳನ್ನು ಯಾರೂ ಲೆಕ್ಕಹಾಕುವುದಿಲ್ಲ, ಯಾಕೆ ಎನ್ನುತ್ತೀರ? ಶತ ಶತಮಾನಗಳಿಂದಲೂ ನಮ್ಮ ಅಸಲಿ ಭಾರತ ಇರುವುದು ಹೀಗೆ ಅಲ್ಲವೆ, ಬೇಕಾದರೆ ನ್ಯೂಸುಗಳಲ್ಲಿ ಲೈವು ನೋಡಬಹುದು, ನಮ್ಮ ಜನಗಳು ತುಂಬಾ ಒಳ್ಳೆಯವರು ಸುಮ್ಮನೇ ನೋಡುತ್ತಾರೆ, ಯಾಕೆಂದರೆ ಆ ಹುಡ