ರಾತ್ರಿ ಬರೆಸಿದವರ್ಯಾರು?

ರಾತ್ರಿಯಲ್ಲಿ ಒಮ್ಮಿಂದೊಮ್ಮೆ
ಎದ್ದು ಕೂರಿಸಿ ನನ್ನೊಳಗಿಂದ ಯಾರೋ
ಬರೆಸುತ್ತಾರೆ,
ನನ್ನದೇನು ಕರ್ಮ ಯಾರದೋ ತೀಟೆಗೆ
ನಾನು ಬರೆಯಬೇಕು
ಅದೂ ಅಸ್ಪಷ್ಟವಾದ ತೊದಲಕ್ಷರದಲ್ಲಿ,

ಅವಳೋ ಅವರೋ ಎಂದು ತಲೆ ಕೆದರುವ
ಹೊತ್ತಿಗೆ ಮತ್ತದೇ ಝೋಂಪಿನಲ್ಲಿ
ಬರೆಯ ಕೂರುತ್ತೇನೆ,
ರೋಮಗಳು ಬೆವರಿಳಿದು
ಉಪ್ಪಡರಿದರೂ ಸಹಿತ
ಅದೇ ನಿದ್ದೆಮೂಟೆಯ ಕಣ್ಣಿನಲ್ಲಿ,

ಇಲ್ಲಿ ನನ್ನ ಬಿಟ್ಟರೆ
ಕತ್ತಲು ಹಿಡಿ ಬೆಳಕು
ಹಾಗೆ ಒಂದಿಷ್ಟು ನೀಚ ಕನಸುಗಳು,
ಉದುರು ಮರಳಿನಂತಿವೆ

ಇನ್ಯಾರ ದೂರಬೇಕು
ಕನಸುಗಳನ್ನಾ???
ಅಥವಾ
ಕೈಗೆ ಸಿಗಲಾರದಿದರಲ್ಲಿ ಕುಳಿತು
ಬರೆಸಿದವರನ್ನಾ???
-ಪ್ರವರ

Comments

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ರೆಕ್ಕೆ ಸುಟ್ಟ ಚಿಟ್ಟೆ