ಬಿನ್ನಾಣಗಿತ್ತಿ


ಹೂ ನಗಿಯ ನಲ್ಲೆ
ಬೀರುತ್ತ ನಗಿಯ
ದಾರ್ಯಾಗ ಯಾಕ
ನಿಂತಿ,
ರೇಶಿಮಿಯ ಲಂಗ
ಗಿಳಿ ಹಸಿರ ದಾವಣಿ
ರವಿಕೆ ಎಲ್ಲಿ
ಮರೆತಿ,


ಮೈಯ್ಯಾಗ ರಂಗು
ತುಂಬ್ಯಾನ ಚಂದ್ರ
ತನ್ನೆಲ್ಲ ಬೆಳಕ
ಕಲೆಸಿ
ಅಂಕು ಡೊಂಕುಗಳ
ತಿದ್ದಿ ತೀಡ್ಯಾನ
ತನ್ನೆಲ್ಲ ಕಸುಬ
ಬಳಸಿ

ಹಾಗಲದ ಬಳ್ಳಿ
ನಾಚ್ಯಾವ ನಿನ್ನ
ಬಳುಕ್ಯಾಡೊ ಸೊಂಟ
ನೋಡಿ,
ಹೊಕ್ಕಳದ ಕೆಳಗೆ
ಜಾರೈತಿ ಡಾಬು,
ತುಂಬ ನುಣುಪು
ತೀಡಿ.

ಕೆಂದುಟಿಯ ಮ್ಯಾಲ
ಸವರೈತಿ ಜೇನು
ಸವಿಯಾಕ ಬಿಡೆಲೆ
ಹುಡುಗಿ,
ಏರುಸುರು ಬಿಡುತ
ನಿಂತೀನಿ ನಾನು
ಕಾಯುತ್ತ ನಿನ್ನ
ಕೆಣಕಿ
-ಪ್ರವರ

Comments

  1. ಒಹ್ ಒಹ್... ಯಾರಪ್ಪ ಅದು ಬಿನ್ನಾಣಗಿತ್ತಿ.... ಕಲ್ಪನೆ ಚೆನ್ನಾಗಿದೆ....

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ಫಸ್ಟ್ ಬೆಂಚ್ ಸುಂದ್ರಿ

ನದಿಯ ತಟದಲ್ಲೊಂದು ಬೋಳು ಮರ