ವಸುಂಧರೆ


ಹಸಿರು ಸೀರೆ ರವಿಕೆಯ ಉಟ್ಟು,
ಆಗೊಮ್ಮೆ ಈಗೊಮ್ಮೆ ಹಣೆಗೆ
ಕೆಂಪು ಬೊಟ್ಟನಿಟ್ಟು,
ಮುಡಿಯ ತುಂಬೆಲ್ಲ ಘಮ ಬೀರೊ
ಹೂವಮುಟ್ಟು,
ಸುರಿಯುತಿರೊ ಸೋನೆ ಮಳೆಗೆ
ಮೈಯೊಡ್ಡಿ ನಿಂತಿಹಳು ಈಕೆ,
ಹನಿಗಳಾಲಿಂಗನಕೆ ನೆನೆದಷ್ಟು
ಹಸನಾಕೆ,
ಹಕ್ಕಿಪಕ್ಕಿಗಳ ಕಲರವಕೆ
ಮತ್ತಷ್ಟು ಮೆರಗು,
ಹರಿವ ತೊರೆಗಳಿಗೆ
ಸಾಗುತಿಹ ದಾರಿಗಾಗದೆ ಬೆರಗು,

ಗಿಡ ಹಸಿರು, ಮರ ಹಸಿರು
ನೆಲವೆಲ್ಲ ಹಸಿರು,
ಅಷ್ಟೇಕೆ ಕಲ್ಲು ಬಂಡೆಗಳೆ ಹಸಿರು,
ಇಷ್ಟೆಲ್ಲಕೆ ಕಾರಣಳು
ಭುವಿಗೊಡತಿ, ಜಗಕೊಡತಿ
ಈ ಭೂಮಾತೆಯು ತಾನೆ

ಇವಳು ವಸುಂಧರೆಯು
ಸಿಟ್ಟು ಬಂದರೆ ಬರ,
ಅಳು ಬಂದರೆ ನೆರೆ,
ಇವಳ ನಗುಮೊಗದಿಂದ
ನಾವೆಲ್ಲ ಸೌಖ್ಯ.

Comments

  1. ಸೀರೆ ಉಟ್ಟು, ರವಿಕೆ ತೊಟ್ಟು ಇರಬಹುದಿತ್ತೇನೋ ಪ್ರವರ.. ಯಾಕೆ ಅಂದ್ರೆ ರವಿಕೆನ ತೊಡೋದು, ಸೀರೆ ಉಡೋದು..
    ಅದೊಂದು ಬಿಟ್ಟು, ಬಹಳ ಚನ್ನಾಗಿ ಮೂಡಿ ಬಂದಿದೆ ಕವನ..

    ReplyDelete
  2. ಕವನದ೦ಗೆ ಚಿತ್ರವು ಚನ್ನಾಗಿದೆ .

    ReplyDelete
  3. ಕವನಗಳೆಲ್ಲಾ ಚೆನ್ನಾಗಿವೆ.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ರೆಕ್ಕೆ ಸುಟ್ಟ ಚಿಟ್ಟೆ