ಮೌನ


ಕೆರೆ ದಂಡೆಗೆ ತಳ ಹಚ್ಚಿ ಕೂತೆ
ಯಾಕೋ ಮೌನ ಎಂದೆನಿಸುತಿತ್ತು
ಸಾಲು ಸಾಲು ಅಲೆಗಳು ಹತ್ತಿರತ್ತಿರವಾಗುತ್ತಾ
ಏನನ್ನೋ ಹೇಳುತಿದ್ದವು,
ಕೈಬೀಸಿ ಕರೆದಂತೆ ಭಾಸವಾಗುತಿತ್ತು,

ನನ್ನುಸುರಿನ ಸದ್ದು ಕಿವಿಯ ಮುಟ್ಟುವಂತೆ
ಕೇಳುವಷ್ಟು ನಿಶ್ಯಬ್ದ,
ತಣ್ಣಗಿನ ಗಾಳಿಗಮಲು ಸದ್ದಿಲ್ಲದೆ
ಲೋಕಸಂಚಾರಿಯಂತೆ ತಿರುಗುತಿತ್ತು.

ನೀಲಿ ಬಾನು ಕಪ್ಪಿಕ್ಕುತಿತ್ತು
ಆ ನೀರವ ಮೌನಕ್ಕೆ,
ಮೋಡ ಮೋಡ ಕೂಡಿದಷ್ಟು
ಮೌನಕ್ಕೆ ವಧುವಿನ ಮೆರಗು
ಬಾನಿಗೊಚ್ಚಿದ ಸೆರಗು

ಮೀನುಗಳ ಪಿಸುಮಾತು ಕೇಳಿಸುವಷ್ಟು,
ಅಲೆಗಳು ಪದೇ ಪದೇ ದಂಡೆಗಿಕ್ಕುತಿದ್ದ
ಮುತ್ತಿನಿ ಸದ್ದು ಕೇಳುವಷ್ಟು ಮೌನ
ಆವರಿಸಿದೆ....ಹಿತವಾಗಿದೆ....

Comments

  1. ಏಕೀ ಮೌನವೋ ನಾ ಅರಿಯೆನು :O
    ಕವಿತೆ ಬರವಣಿಗೆ ಶೈಲಿ ಇಷ್ಟ ಆಯಿತು.

    ReplyDelete
  2. ಮೌನಕ್ಕೆ ಕಾರಣ ಇಲ್ಲ ಅನ್ಸುತ್ತೆ,,,,,,, ಧನ್ಯವಾದಗಳು ಅಶ್ವಿನಿಯವರೆ,,,,....

    ReplyDelete
  3. ತುಂಬಾ ಚೆನ್ನಾಗಿದೆ... ಮೌನ ಮನೆ ಮಾಡಿದೆ.

    ReplyDelete
  4. ಇಷ್ಟೊಂದು ಮೌನವೇ ?
    ಚೆನ್ನಾಗಿದೆ ಸಾಲುಗಳು !!!

    ReplyDelete
  5. ತುಂಬಾ ಅಂದ್ರೆ ತುಂಬಾ ಕಣ್ರಿ..... ಗಿರೀಶ್ ಬರ್ತಿರ್ರಿ ಹಿಂಗೆ....

    ReplyDelete
  6. ಹಾಗೆಯೇ ಮೌನ ಮುಗುಳ್ನಗು ಸೂಸಿತ್ತು ಅಕ್ಷರಗಳಲ್ಲಿ..
    ಕವನವಾಗಿತ್ತು ಚೆ೦ದದ ಸಾಲುಗಳಲ್ಲಿ..!

    ReplyDelete
  7. ವಾವ್ಹ..... ಪ್ರಾಸ ಪ್ರತಿಕ್ರಿಯೆಗೆ ಧನ್ಯವಾದಗಳು.... ಮನಮುಕ್ತ.....

    ReplyDelete
  8. ಮೌನಕ್ಕೆ ಇರುವಷ್ಟು ಅರ್ಥ ಮಾತಿಗಿಲ್ಲ. ಬರಹದ ರೀತಿ ಚೆನ್ನಾಗಿದೆ... ಬರೀತಾ ಇರಿ. ನಾವು ಓದುತ್ತಿರುತ್ತೇವೆ..

    ReplyDelete
  9. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಶಾಲ್ಮಲಿಯವರೆ, ಮಾತಿಗಿಂತ ಮೌನದ ಪರಿಣಾಮವೇ ಹೆಚ್ಚು.... ವಂದನೆಗಳು....

    ReplyDelete
  10. ಸಾಗರದಾಚೆಯಿಂದ ಇಣುಕಿದ್ದಕ್ಕೆ ಧನ್ಯವಾದಗಳು....

    ReplyDelete
  11. ತುಂಬು ಗರ್ಭದ ಮೌನ, ತಟ್ಟಿದೆ ಎನ್ನಯ ಮನ..

    ಕೆಲವೊಮ್ಮೆ ಮೌನದ ಮಾತುಗಳು ಮಾತ್ರ ಮನಸಿಗೆ ಕೇಳಿಸುವುದು.. ಬಹಳನೆ ಚನ್ನಾಗಿ ಬರೆದಿದ್ದೀರ ಪ್ರವರ.. ಖುಷಿಯಾಯಿತು.. ತಡವಾಗಿ ನೋಡಿದೆ ನಿಮ್ಮ ಈ ಕವಿತೆಯನ್ನ..

    ReplyDelete
  12. @spicy sweet: ನಿಮ್ಮ ಅನಿಸಿಕೆ ಮಾತುಗಳ ಪ್ರೋತ್ಸಾಹ ಮತ್ತಷ್ಟು ಬರೆಯಲು ಹುರುಪೀಯುತ್ತಿದೆ..... ಧನ್ಯವಾದಗಳು,,,,

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ಬುದ್ದ

ಕಾಲೇಜು ಗೇಟಿನಲ್ಲಿ!!!!!- ಕಾಲೇಜಿನ ಮೊದಲ ದಿನ

ರೆಕ್ಕೆ ಸುಟ್ಟ ಚಿಟ್ಟೆ