ರಕುತ ಹರಿಸುವ ಬನ್ನಿ
ನಮ್ಮೊಡಲ ಬಗೆ ಬಗೆದು
ರಕುತ ಹೀರುತಿದ್ದಾರೆ,
ಚೂರು ಚೂರಾಗಿ ತುಂಡರಿಸಿ
ಬೀದಿಗಿಟ್ಟು ಮಾರುತಿದ್ದಾರೆ.
ಮಾತನಾಡಲಾರದಂತೆ ನಾಲಿಗೆ
ಕತ್ತರಿಸಿ ಒಗೆದಿದ್ದಾರೆ,
ವಿರುದ್ಧ ಧ್ವನಿ ಎತ್ತದಂತೆ
ಮೌನವಾಗಿಸಿದ್ದಾರೆ
ಇಷ್ಟೆಲ್ಲ ಆದರೂ ಸುಮ್ಮನೇ
ಇದ್ದೇವೆ ಮೂಕ ಪಶುಗಳಂತೆ
ಕಟೆ ಕಟೆದು ಚೂರಾದ
ಬಂಡೆ ಕಲ್ಲುಗಳಂತೆ
ಬೆರಳುಗಳನೆಲ್ಲ ಕೂಡಿಸಿ
ಮುಷ್ಠಿಯಾಗುವ ಬನ್ನಿ
ಸಾವೇ ಹೆದರಬೇಕು ನಮಗೆ
ವ್ಯಾಘ್ರವಾಗುವ ಬನ್ನಿ
ಹಣದ ಮದದಿಂದ ಮೆರೆದವರ
ಉದರಕೆ ಕೈ ಹಾಕಿ
ಕದಲದೇ ನಿಂತು ಕರುಳ ಕಿತ್ತು
ಮೋಡಗಳೇ ಚದುರುವಂತೆ ಕೇಕೆ ಹಾಕಿ
ನಮ್ಮವರ ಘೋರಿಗಳ ಮೇಲೆ
ಮಹಲುಗಳ ಕಟ್ಟಿ ಮೆರೆದಿದ್ದಾರೆ,
ಕಂದಮ್ಮಗಳೆದೆಯ ಬಗೆದು
ಕ್ರೌರ್ಯವೆಸದ್ದಾರೆ
ಕತ್ತರಿಸ ಬನ್ನಿ, ಕೊಚ್ಚಿಹಾಕುವ ಬನ್ನಿ
ಕಾರ್ಮುಗಿಲ ಕಪ್ಪು ತೊರೆದು
ಕೆಂಪು ರಕುತವಾಗಬೇಕು
ನೀಲಸಾಗರ ಕರಗಿ ಘೋರ ಕೆಂಪಾಗಬೇಕು
ಪ್ರವರ-ರವರೆ, ಚಿತ್ರಗಳು ಮನವನ್ನು ಕಲಕುತ್ತವೆ.. ಕವಿತೆ ಉತ್ತೇಜನಕಾರಿಯಾಗಿದೆ.. ಅಬ್ಬ! ಮೊದಲನೇ ಚಿತ್ರವಂತೂ ಭಯಾನಕ!
ReplyDelete@spicy sweet:ಚಿತ್ರ ಭಯಾನಕ ಅನ್ನೊದ್ಕಿಂತ, ಸಮಯ ಭಯಾನಕವಾಗಿದೆ..... ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು....
ReplyDeleteItz Nice poem!!!photos,lines and situation are good matching...
ReplyDeleteಸತ್ಯ ಮತ್ತು ಆಕ್ರೋಶವನ್ನೆ ಒ೦ದು ತಲೆ ಮಾರು ಮರೆಯುತ್ತಿರುವ ಗಳಿಗೆಯಲ್ಲಿ ನಿಮ್ಮ ಕಾವ್ಯದ ಪ್ರತಿ ಪದ ಅದ್ಬುತ .
ReplyDeleteಧನ್ಯವಾದಗಳು ಗಿರೀಶ್, ಪ್ರಸಾದ್.... ಹೀಗೆ ಬರುತ್ತಿರಿ.....
ReplyDeleteಬರಹ ತುಂಬಾ ಪರಿಣಾಮಕಾರಿಯಾಗಿದೆ.. ಆದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬುದೇ ಸದ್ಯದ ಸಮಸ್ಯೆ.
ReplyDeleteನಾವೆಲ್ಲಾ ಇದ್ದೀವಲ್ಲ...... ಗಂಟೆ ಕಟ್ಟಲು ನಾವೇ ಇಲಿಗಳಾಗಬೇಕಷ್ಟೆ....
ReplyDelete