ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, July 16, 2012

ಮೋಸದ ನಗು


ಆಕೆಯದು
ಎಂದೂ ಮಾಸದ ನಗು,
ಅದಕೆ ಹೃದಯ ಕಳೆದುಕೊಂಡು
ಊನರಾದವರೆಷ್ಟೋ,
ಮಾತು ಕಳೆದುಕೊಂಡು
ಮೌನವಾದವರೆಷ್ಟೋ,
ಅದು,
ಮಾಸದ ನಗುವಲ್ಲ ಮೋಸದ ನಗು

ನಾನು ಮಾತ್ರ
ಒಲ್ಲದ ಕಲ್ಲಾಗಿದ್ದೇನೆ,
ಯಾರ ಸೊಲ್ಲಿಗೂ
ಝಲ್ಲೆನ್ನದ ಮನಸಿನವನಾಗಿದ್ದೇನೆ
ಅದು ಮಾಸದ ನಗುವಲ್ಲ
ವಿಷ ಸೂಸುವ ನಗು,
ಆರದ ಗಾಯವನಿಕ್ಕಿ
ಮಜ ನೋಡುತಿಹ ಮೋಸದ ನಗು

ಕಪ್ಪಿಕ್ಕಿದ ಮೋಡ
ಮಳೆ ಸುರಿಸದೇ
ಭುವಿಯ ಬಿಕ್ಕಳಿಸ ಬಿಡುವಂತೆ,
ಚೂರಿ ಇಕ್ಕಿ
ಜೀವ ಕಕ್ಕಿಸಿದ ನಗು.
ಸಾಯುತಿದ್ದವರ
ಕೆಕ್ಕರಿಸಿಕೊಂಡು
ನೋಡುತಿದ್ದ ಮೋಸದಾ ನಗು
-ಪ್ರವರ

1 comment:

  1. mosada naguvina bagegina nimma kavana chennaagi moodibandide.aa naguvina chitradalli mosada chaaye eddu kaanuttide.su.....per

    ReplyDelete

ಅನ್ಸಿದ್ ಬರೀರಿ