ಯುದ್ಧ


ಬಂದೂಕುಗಳೆಲ್ಲಾ ಸತ್ತು
ಬಿದ್ದಿದ್ದವು
ರಕ್ತ ಸಿಕ್ತವಾದ ಹೆಣಗಳ
ನಡುವೆ

ಗೆದ್ದವರ ಕೇಕೆ ಸೋತು
ಅಳುತಿತ್ತು
ಸತ್ತವರ ಎದೆಯೊಳಗಿನ ಕೂಗು
ನೂರ್ಮಡಿಸುತಿತ್ತು

ರಣ ಹದ್ದುಗಳೆಲ್ಲಾ ಹಾರಾಡುತ್ತಿವೆ
ಅಲ್ಲೇನಿದೆ ತಿನ್ನಲು,
ಜೀವವಿಲ್ಲದ ಮೂಳೆ ಮಾಂಸ
ಹೆಪ್ಪುಗಟ್ಟಿದ್ದ ಕೆಂಪು ರಗುತ.
ರಕುತ ಮಜ್ಜನಗೈದ ಗುಂಡು

ಕೊಲ್ಲುವಾಟವ ನೋಡಿ
ತಿರುವಿದ ಹುರಿ ಮೀಸೆಗಳ ಮೇಲೆ
ಬಿಳಿ ಸೀರೆ ರವಿಕೆಗಳ
ಹಿಡಿ ಮಣ್ಣ ಶಾಪ,

Comments

  1. ಒಂದು ಸುಂದರ ಹಾಗೂ ಸಂವೇದನಶೀಲ ಕವಿತೆ.ರಣ ಹದ್ದುಗಳೆಲ್ಲಾ ಹಾರಾಡುತ್ತಿವೆ
    ಅಲ್ಲೇನಿದೆ ತಿನ್ನಲು,...ಈ ಸಾಲುಗಳು ನಡುಕ ಹುಟ್ಟಿಸುವವು.ಎಚ್ಚರ ಮತ್ತು ಜಾಗೃತಿ ಮೂಡಿಸುವ ಹೃದಯ ತಟ್ಟುವ ಕವಿತೆ.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ