ಮಸಣ ದಾರಿ





ಮಸಣ ದಾರಿಗೆ
ಹೂವು ಹಾಸಿದೆ
ನವಿರು ಗಾಳಿಯು
ಬೀಸಿದೆ
ಶ್ವೇತ ಹೊದಿಕೆ
ಮಣ್ಣ ಕುಡಿಕೆ
ನಗುತ ವಿದಾಯವ
ಹೇಳಿದೆ

ಜಗದ ನಂಟು
ಮುಗಿದುದುಂಟು
ಇನ್ನೇಕೆ ಇಲ್ಲದ
ಮುಜುಗರ
ಅಳುವ ದಿನಗಳು
ಮುಗಿದವಲ್ಲ,
ನಿನ್ನ ಸಾವೇ
ಸಡಗರ

ಅಳುವರ್ಯಾರೋ
ನಗುವರ್ಯಾರೋ
ಇದೆಲ್ಲವು ನಾಟಕ
ಮಂಚವು,
ಬಂದ ಕೆಲಸವು
ಮುಗಿಯಿತಿನ್ನು
ಜೀವ ಸಾವಿಗೆ
ಲಂಚವು

Comments

  1. neenobba sensitive barahagaara kano.....
    what to say other than wonderfull

    ReplyDelete
    Replies
    1. jeevavannu saavige lanchavaagi needi sattamele yentha sukha needitu ninage ee masanada daari????......nice poem

      Delete
  2. ಜೀವನದಿಂದ ಮುಕ್ತಿ ಹೊಂದಬೇಕಾದರೆ ಜೀವ ಸಾವಿಗೆ ಕೊಡಬೇಕಾದ ಲಂಚ ಅನ್ನೋದು ನನ್ನ ಅನಿಸಿಕೆ..... :

    ReplyDelete
  3. ಭವದ ಬಂದರುಗಳ ಕೊನೆಯ ಕಂಡವನು ನೀನು ,,
    ಕೊನೆಯ ಕನಸಿನಲಿ ಕವನ ಗೀಚಿದವ ನೀನು ,..
    ಇರದಿರಲಿ ವ್ಯರಾಗ್ಯ ಭಾವ,.
    ಇರುವ ಭಾಗ್ಯವ ನೆನೆದು, ಭವದ ಭವಿಷ್ಯಕೆ,.
    ತೃಪ್ತಿಯ ತಪೋವನಕೆ,. ಅಡಿಯಿಡುವ ಬಾರಾ,..

    ReplyDelete
    Replies
    1. ವ್ಹಾವ್ ಅದ್ಬುತ ಸಾಲುಗಳು ಸರ್......... ಡಿ.ವಿ.ಜಿ ಯವರ ಸಾಲುಗಳು ಅಂದಗಟ್ಟಿವೆ...... ಧನ್ಯವಾದಗಳು......

      Delete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ