ಬುದ್ದ
ನಡೆದ ಹಾದಿಯಗುಂಟ ಕಲ್ಲು ಮುಳ್ಳುಗಳದೇ ಕಾರುಬಾರು ಸುರಿಯುತಿಹ ರಕುತದ ಪರಿವೇ ಇಲ್ಲದೇ ಹಾಗೇ ನಡೆಯುತ್ತಿದ್ದಾನೆ, ನೋವಾಗಿ ಮುಖವ ಕಿವುಚಲಿಲ್ಲ ಹಸನ್ಮುಖಿಯಾಗಿ ಸುಮ್ಮನೇ ಚಲಿಸುತಿದ್ದಾನೆ, ಗಾಳಿ ಗಮಲಿನಂತೆ. ಎಲ್ಲೆಗಳನೆಲ್ಲಾ ಮೀರಿ ಎಲ್ಲಿಂದೆಲ್ಲಿಗೋ ಚಲಿಸುತಿದ್ದಾನೆ ನದಿಯಂತೆ, ಜಗದ ಕ್ರೂರತನದ ಕಾವಿಗೆ ಕರಗಿ ಹರಿಯುತಿದ್ದಾನೆ, ಬರೀ ಕತ್ತಲೆಯೇ ತುಂಬಿ ಜೀ ಗುಡುವಾಗ ಮೇಣವಾಗಿ ಬೆಳಕಿತ್ತು ಜಿನುಗುತಿದ್ದಾನೆ, ನಾನು ನಾನೆಂಬ ಅಹಂಗಳೇ ತಾಂಡವವಾಡುವಾಗ ಅವುಗಳ ಮುಖವಾಡ ಬಣ್ಣದ ಬಟ್ಟೆಗಳನೆಲ್ಲ್ಲಾಕಳಚಿ ನಗ್ನವಾಗಿಸಿದ್ದಾನೆ, ಕ್ರೌರ್ಯತನದ ಕಸವ ಗುಡಿಸೊ ಕೆಲಸದಲ್ಲಿ ಮಗ್ನನಾಗಿದ್ದಾನೆ, ಇನ್ನೂ ನಮ್ಮೊಳಗೆ ಸಣ್ಣಗಿನ ದೀಪದಂತಿದಾನೆ ಹುಡುಕಬೇಕಷ್ಟೇ ನಾವು ನಮ್ಮೊಳಗೆ ಆತನನ್ನು, ನಮ್ಮ ಮನಸಂತಿದ್ದಾನೆ
neenobba sensitive barahagaara kano.....
ReplyDeletewhat to say other than wonderfull
guruji thanx.... odidyala ade khushi.....
Deletejeevavannu saavige lanchavaagi needi sattamele yentha sukha needitu ninage ee masanada daari????......nice poem
Deleteಜೀವನದಿಂದ ಮುಕ್ತಿ ಹೊಂದಬೇಕಾದರೆ ಜೀವ ಸಾವಿಗೆ ಕೊಡಬೇಕಾದ ಲಂಚ ಅನ್ನೋದು ನನ್ನ ಅನಿಸಿಕೆ..... :
ReplyDeleteಭವದ ಬಂದರುಗಳ ಕೊನೆಯ ಕಂಡವನು ನೀನು ,,
ReplyDeleteಕೊನೆಯ ಕನಸಿನಲಿ ಕವನ ಗೀಚಿದವ ನೀನು ,..
ಇರದಿರಲಿ ವ್ಯರಾಗ್ಯ ಭಾವ,.
ಇರುವ ಭಾಗ್ಯವ ನೆನೆದು, ಭವದ ಭವಿಷ್ಯಕೆ,.
ತೃಪ್ತಿಯ ತಪೋವನಕೆ,. ಅಡಿಯಿಡುವ ಬಾರಾ,..
ವ್ಹಾವ್ ಅದ್ಬುತ ಸಾಲುಗಳು ಸರ್......... ಡಿ.ವಿ.ಜಿ ಯವರ ಸಾಲುಗಳು ಅಂದಗಟ್ಟಿವೆ...... ಧನ್ಯವಾದಗಳು......
Delete