ಮಣ್ಣು-ಮೌನ

ಎದೆಯೊಳಗೆ ತುಸು
ಮೌನ,
ಬಡಿದುಕೊಳ್ಳುತಿದ್ದ
ಹೃದಯಕೂ,

ತಂಬೂರಿಯ
ತಂತಿ ನಡುಗುತ್ತಿದೆ
ಯಾರಾದರು
ಮೀಟಿಯಾರೆಂದು,
ಕಣ್ಣ ಮಿಟುಕಿಸುವರಿಲ್ಲ
ಇನ್ನೆಲ್ಲಿ
ಮೀಟುವವರು..

ಕಿವಿಸತ್ತವನಿಗೂ
ಕೇಳಿಸುವಷ್ಟು
ಜೋರಾಗಿ ಕಿರುಚಬೇಕೆಂಬ
ಬಯಕೆ,
ಸುಮ್ಮನಾಗಿದೆ
ಒಡಲು
ಯಾರದೋ ಬೆಚ್ಚಗಿನ
ಭಯಕೆ.

ಸ್ವಾರ್ಥವಿದೆ
ಮೌನಕೆ
ಹಿಡಿ ಮರುಕವಿದೆ,
ಎಲ್ಲವನು
ಬಿಟ್ಟವರಿಗೆ ಮಾತು
ಸರಕಾಗಿದೆ.
 ಸತ್ತವರ ನೆರಳಂತೆ
ಮಣ್ಣಾಗಿದೆ

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ