ಹೀಗೊಂದು ಸಾಂತ್ವಾನ

ಅತ್ತೂ ಅತ್ತೂ ಕಣ್ಣೀರೆಲ್ಲಾ
ಬತ್ತಿ ಮರಳುಗಾಡಾಗಿದೆ ಕಣ್ಣು
ಆಕೆ ಮಾಡಿದ ಗಾಯ ಎದೆಯಲ್ಲಿ
ಅಂಗೈ ಅಗಲದ ಹುಣ್ಣು

ಇಷ್ಟು ದಿನ ಜೊತೆಗಿದ್ದು
ಹೆಜ್ಜೆ ಮೇಲೆಜ್ಜೆಯನಿಕ್ಕಿ
ಕಾಲು ಸೋಲುವವರೆಗೂ
ಕೈ ಹಿಡಿದು ನಡೆದಿದ್ದಳು
ಹೃದಯದೊಳಗಿನ ಪ್ರೀತಿಯ
ತನುವೆಲ್ಲ ಧಾರೆಯೆರೆದು
ತಾಯಂತೆ ಪೋಷಿಸಿದ್ದಳು,
ನೋವು ಉಮ್ಮಳಿಸಿ ಬರುವಾಗ
ನನ್ನ ಬಿಗಿದಪ್ಪಿ ಬೆಚ್ಚಗಿನ
ಸಾಂತ್ವಾನ ಹೇಳುತಿದ್ದಳು

ಮಳೆಯಲ್ಲಿ ಕೊಡೆ ಇಲ್ಲದೆ
ನೆನೆದು ಮೈಮೇಲಿನ 
ಬಟ್ಟೆ ಒದ್ದೆಯಾಗಿ 
ಸಣ್ಣಗೆ ನಡುಗುವಾಗ
ತುಟಿಗೆ ತುಟಿ ಒತ್ತಿ
ಕಿಡಿ ಹೊತ್ತಿಸಿ ಆಕೆ
ಹೋಗುವಾಗ ಹಿಂತಿರುಗಿ
ಕಣ್ಣಂಚಲ್ಲೇ ಪೋಲಿ ನಗು ನಗುವಾಗ
ಹಾ! ಆಕೆಗೆ ಆಕೆಯೇ ಸಾಟಿ

ಈಗಾಕೆ ನನಗೆ ಜೊತೆಯಿಲ್ಲ
ಜೊತೆಯಿಹ ನೆನಪುಗಳಿಗಾ
ಕಸುವಿಲ್ಲ.....
ಬತ್ತಿರುವ ಕಣ್ಣು, ಎದೆ ಮೇಲಿಹ ಹುಣ್ಣು
ಎರಡಷ್ಟೇ.....
ಇನ್ನಾರಲೂ ಮನಸಿಲ್ಲ


Comments

  1. Awesome Pravara...! Touching.... :(

    ReplyDelete
  2. ಪ್ರೀತಿ ಎನ್ನೋ ಮಾಯೆಯಿಂದ ಆಗೋ ಗಾಯವೇ ಅಂತದ್ದು.. ಕಾಣಲೋಲ್ಲ.. ಪರಿತಪಿಸದೆ ಬಿಡಲೊಲ್ಲ...
    ಇನ್ನರಲೂ ಮನಸ್ಸಿಲ್ಲ ಅನ್ನೋ ಕೊನೆ ಸಾಲು ಹಾಗೆ ಮನ ತಾಕುತ್ತದೆ..
    ಇಂತಿಷ್ಟೇ ಸಾಂತ್ವನವಾಗಬಾರದು... ಮನ್ನಸ್ಸಿಲ್ಲದ ಮನಸ್ಸನ್ನು ಎಬ್ಬಿಸಿ ಸಾಧನೆಯೆಡೆಗೆ ಮುಖ ಮಾಡಿಸಬೇಕು... ಮತ್ತೊಂದು ದಿನ ಅವಳೇ ತಿರುಗಿ ನೋಡುವಂತೆ..

    ಚೆನ್ನಾಗಿದೆ ಪ್ರವರ....ಚಂದದ ಕವನ...

    ReplyDelete
    Replies
    1. ;)nimma vimarshe innenanno bareyuvante kenakuttade... dhanyavaadagalu....

      Delete
  3. ಮಾಯಾ ಮೃಗವನ್ನು ಪ್ರೀತಿಗೆ ಪ್ರೇಮಿಯನು ಮರೀಚಿಕೆಗೆ ಹೋಲಿಸಲಾಗಿದೆ ಹಿಂದೆಲ್ಲಾ.. ನಿಮ್ಮ ಪ್ರೇಮಿ ಬಿಟ್ಟ ಗಾಯಗಳನ್ನು ನೋಡಿ ನೆನೆಪಿಸಿಕೊಳ್ಳುವ ಪರಿಯ ಕವನ ಇಷ್ಟ್ ಆಯ್ತು, ಪ್ರವರ.

    ReplyDelete
  4. adu marichikeyu howdu, yaamaridare maayalarada gaayavoo howdu sir..... nimma comment nu nodi khushi aytu....

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ