ಪಿಸುಮಾತು


ಜಿನುಗುಡುವ ಮಳೆಯಲ್ಲಿ
ಪಿಸುಗುಡುತಿದ್ದಾರೆ ಪ್ರೇಮಿಗಳು
ತಮ್ಮ ಮಾತು ತಮಗೂ ಕೇಳದಂತೆ.

ಅವಳು ತನ್ನೊಡನೆ ತಂದಿದ್ದ
ಕೊಡೆಯು ಮುದುರಿಕೊಂಡು
ಕೂತಿದೆ ಅವರ ಪಕ್ಕದಲ್ಲಿ
ಅವರಂತೆ ನೆನೆದುಕೊಂಡು
ಮಳೆಯಲ್ಲಿ ನಡುಗುತ್ತಿದೆ.

ಮಳೆ ಹನಿಗಳೆಲ್ಲವು
ಜಾರುವಾಟವಾಡುತಿವೆ
ಅವಳ ತಲೆಗೂದಲುಗಳ ಮೇಲೆ
ಯಾವುದರ ಪರಿವೇ ಇಲ್ಲ
ತನ್ನಿನಿಯನ ಭುಜಕೆ ತಲೆಯಾನಿಸಿ
ಪಿಸುಗುಡುತ್ತಿದ್ದಾಳೆ ಹಾಗೆ
ತನ್ನ ಮಾತು ತನಗೂ ಕೇಳಿಸದಂತೆ

Comments

  1. ಕೊಟ್ಟೂರು.. ಒಳ್ಳೇ ಕವನ ಕೊಟ್ಟೋರು ಅಂತ ಆಗ್ಲೀ :) ಚೆನ್ನಾಗಿದೆ

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ