ಯೋಧ

ಮೊನ್ನೆಯಷ್ಟೆ ಮದುವೆಯಗಿದ್ದ ಆಗಲೇ ಗಡಿಯಲ್ಲಿ ಕಾವಲಿಗೆ ಕರೆಬಂದಿದೆ ದೇಶ ಸೇವೆಗೆ ಹೋಗಲೇಬೇಕು ಹೆಂಡತಿಯ ಕೆನ್ನೆಯ ಮೇಲಿನ ಅರಿಸಿಣದ ರಂಗಿನ್ನು ಅಳಿಸಿಲ್ಲ ಮಧು ಮಂಚದ ಮೇಲಿರುವ ಹೂವಿನ್ನು ಬಾಡಿಲ್ಲ ಇಬ್ಬರ ಮನದಲ್ಲೂ ದುಗುಡ ಬಟ್ಟೆ-ಬರೆಗಳೆಲ್ಲಾ ಬ್ಯಾಗಿನಲಿ ತುಂಬಿ ದೇವರಿಗೆ ಕೈ ಮುಗಿದು ಹೊರದುತಿಹನು ಹೆಂಡತಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಮನದಲ್ಲಿ ಭಯ ತುಂಬಿಕೊಂಡು ಕೈ ಬೀಸುತಿಹಳು.... ಅವನು ಓಡಿ ಬಂದವನೇ ಕವಳನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಕ್ಕಿದ ಮತ್ತೆ ಬರುವೆನೆಂದು..... ಒಳ ನುಸುಳುತಿಹ ಉಗ್ರರನು ತಡೆಯಲು ಜೀವದಾಸೆಯ ತ್ಯಜಿಸಿ ದೇವರನು ಮನದೊಳಗೆ ನೆನೆಸಿ ಬಂದೂಕನು ಹಿಡಿದು ಹೊರಟೇ ಹೊರಟ.... ಗುಂಡಿನ ಮೇಲೆ ಉಗ್ರರ ಹೆಸರು ಬರೆದಿರುವಂತೆ ಅವರೆಲ್ಲರ ಎದೆಗಳ ಸೀಳುತ ಭೋರ್ಗರೆದವು... ರೌದ್ರತೆ ಆಕಾಶದೆತ್ತರಕೆದ್ದಿತ್ತು ಶಾಂತಿ ನೆಲ ಕಚ್ಚಿತ್ತು ಸ್ವಲ್ಪ ಹೊತ್ತಿನಲ್ಲೇ ಎಲ್ಲಿಂದಲೋ ಬಂದ ಗುಂಡು ಎಡ ಎದೆಯ ಹೊಕ್ಕಿತ್ತು ದೇಹ ನೆಲವನರಸಿತ್ತು "ಮೇರಾ ಭಾರತ್ ಮಹಾನ್" ಎಂಬ ದ್ವನಿ ಹೊರಡಿಸಿತು ಬಾಯಿ ಕಣ್ ಗಳಲಿ ತನಗಾಗಿ ಕಾಯುತಿಹ ಹೆಂಡತಿಯ ಚಿತ್ರವಷ್ಟೇ ಜೀವ ದೇಹವ ಬಿಟ್ಟಾಗಲೂ ಮನಸು ತುಡಿಯುತಲೇ ಇತ್ತು........