ಪ್ರೀತಿಯ ಮಾಯೆಯೊಳಗೆ......

ಪ್ರೀತಿಸುವವರು ಕೆಲವೊಬ್ಬರು
ಹುಚ್ಚರಾಗುತ್ತಾರೆ,
ಹುಚ್ಚು ಪ್ರೇಮಿಗಳಾಗುತ್ತಾರೆ,
ಹುಡುಗಿ ಕೈ ಕೊಟ್ಟರೆ ಬಾಟಲಿ
ಹಿಡಿದು ದೇವ ದಾಸರಾಗುತ್ತಾರೆ....
ಕೆಲವೊಂದು ಸಾರಿ
ಹುಡುಗಿಯ ಮಡಿಲಲ್ಲಿ ಮಲಗಿ
ಮಗುವಾಗುತ್ತಾರೆ,
ಮಾಯವಾಗುತ್ತಾರೆ,
ಜಗತ್ತೇ ಕಾಣದ ಕುರುಡರಾಗುತ್ತಾರೆ....
ಪ್ರೀತಿಸಿದ ಹುಡುಗಿ ಕನಸಾದರೆ
ಹುಡುಗರು ಕವಿಗಳಾಗುತ್ತಾರೆ
ಪ್ರೀತಿ ಕವನವಾಗುತ್ತದೆ....
ಪ್ರೀತಿಯೆಂಬ ಮಾಯೆಯೊಳಗೆ
ಸಿಕ್ಕವರು ತಿರುವು ಪಡೆಯುತ್ತಾರೆ
ಆ ತಿರುವು ಅವರ ಪ್ರೀತಿಯನ್ನವಲಂಬಿಸಿದೆ
ಪ್ರೀತಿ ಹುಡುಗಿಯನ್ನವಲಂಬಿಸಿದೆ.......
Comments
Post a Comment
ಅನ್ಸಿದ್ ಬರೀರಿ