ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, October 24, 2010

ಗುಬ್ಬಿ ಮತ್ತು ಹೆಮ್ಮರ


ನೂರಾರು ವರುಷಗಳಿಂದ
ಬದುಕಿದ್ದ ಹೆಮ್ಮರವೊಂದು
ಬಿಕ್ಕಿಸಿ ಬಿಕ್ಕಿಸಿ ಅಳುತ್ತಿತ್ತು,
ಕೊಂಬೆ ಮೇಲೆ ಕೂತಿದ್ದ
ಗುಬ್ಬಿ ಅಳುವ ಕಾರಣ ಕೇಳಿತು....
ಮಂತ್ರಿ ಹೊಸಮನೆಗೆ
ಹೊಸ ಕಿಡಕಿ ಬಾಗಿಲುಗಳು
ಬೇಕಂತೆ ಅದಕೆ ನನ್ನ
ಬುಡದಿಂದ ಕತ್ತರಿಸುವರಂತೆ.....
ಅದಕೆ ಗುಬ್ಬಿ ಸಮಾಧಾನಪಡಿಸಲು
ಎಲ್ಲರೂ ಒಂದಲ್ಲಾ ಒಂದು ದಿನ
ಸಾಯಲೇ ಬೇಕು ತಾನೆ ಎನ್ನಲು,
ಮರ ಗೊಣ್ಣೆ ಒರೆಸಿಕೊಳ್ಳುತ್ತಾ
ಅಳುತ್ತಿರುವುದು ನಾ ಸಾಯುತ್ತೇನೆಂದಲ್ಲ!
ಇಷ್ಟು ದಿನ ನನ್ನ ತಬ್ಬಿಕೊಂಡು
ಮಲಗುತ್ತಿದ್ದ ಲತೆ ಒಂಟಿಯಾಗುವಳೆಂದು!
ಈಗ ಅಳುವ ಸರದಿ ಗುಬ್ಬಿಯದು....

2 comments:

  1. ಪ್ರವರ, ಹಾಂ ಕೊಟ್ಟೂರು ಅಂದ್ರೆ ಏನೋ ಒಂದು ಆತ್ಮೀಯತೆ ನನಗೆ, ನನ್ನ ಮೂವರು ಮಿತ್ರರ ಊರು, ಮೀನುಗಾರಿಕೆ ಪದವೀಧರರು ಇವರು, ಇವರಲ್ಲಿ ನನ್ನ ಅತಿ ಅತ್ಮೀಯ ಮಿತ್ರ ಪ್ರೋ. ಎಸ್.ಎಮ್ ಶಿವಪ್ರಕಾಶ್ ನನ್ನ ಕವನ ಸಂಕಲನ ಬಿಡುಗಡೆಗೂ ಬಮ್ದಿದ್ದ... ಪ್ರವರ ನಿಮ್ಮ ಗುಬ್ಬಿ ಕಥೆ ವ್ಯಥೆ..ಸರಳ ಸುಂದರ.,,

    ReplyDelete
  2. ಪ್ರವರ ಅವರೇ...ಕೆಲವೇ ಸಾಲುಗಳಲ್ಲಿ ಮರದ ವ್ಯಥೆಯನ್ನು ಸುಂದರವಾಗಿ ಹೇಳಿದ್ದೀರಿ.. ನನ್ನ ಚಿತ್ತಾರದ ಮನೆಗೊಮ್ಮೆ ಬನ್ನಿ... ಧನ್ಯವಾದಗಳು...

    ReplyDelete

ಅನ್ಸಿದ್ ಬರೀರಿ