ನಾವು ಮಳೆಯಲಿ ತೋಯ್ದದ್ದು


ಒಮ್ಮೆ ನಾನು ನನ್ನ ಗೆಳತಿ
ಸುಮ್ಮನೆ ಕುಳಿತು ಹರಟುತ್ತಿದ್ದೆವು
ಎಲ್ಲಿಂದಲೋ ಬಂದ ತರಗೆಲೆಗಳು
ನಮ್ಮ ತಲೆಯ ಮೇಲೆ ಹಾಗೆ
ತುಪು-ತುಪುನೆ ಉದುರಿದವು,
ಇಬ್ಬರೂ ಕಣ್ಮುಚ್ಚಿದೆವು,
ಮತ್ತೆ ಮಿಂಚು ಗುಡುಗು
ಹೆದರಿ ನನ್ನೆದೆಯ ಮೇಲೆ
ಹಾಗೆ ಅವುಚಿಕೊಂಡಳು,
ಮಳೆ ಬರಬಹುದೆಂದು
ಅಂದುಕೊಳ್ಳುವಷ್ಟರಲ್ಲಿ,
ಹನಿಗಳು ನಮ್ಮ ತೋಯಿಸಿದವು,
ಅವಳು ಮಳೆರಾಯನ
ಬಯ್ದುಕೊಂಡಳು,
ತುಂತುರು ಮಳೆ,
ಬೆಚ್ಚನೆಯ ಅಪ್ಪುಗೆ ಇನ್ನೇನು ಬೇಕು
ನನಗೆ, ಇಲ್ಲಿಂದಲೆ ಸಲಾಮು ಮಳೆರಾಯನಿಗೆ
ಹಾಕಿದೆ.......

Comments

  1. ಪ್ರವರ
    ಮಳೆರಾಯ ಇಷ್ಟೆಲ್ಲಾ ಸಹಾಯ ಮಾಡ್ದಾ ಅಂತಂದ್ರೆ ಸಲಾಮು ಹೊಡೆಯಲೇ ಬೇಕು ಬಿಡಿ.. ಚೆನ್ನಾಗಿದೆ ಸಾಲುಗಳು.

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ