ರಾತ್ರಿ ಹಬ್ಬಕ್ಕೆ ಮೈಥುನವಿಲ್ಲದಿದ್ದರೆ ಹೇಗೆ?
- Get link
- X
- Other Apps
ರಾತ್ರೋ ರಾತ್ರಿ ಹಬ್ಬ; ರಂಗಿಲ್ಲ, ತೇರುಗಳ ಹಂಗಿಲ್ಲ
ಜನಜಂಗುಳಿಯ ಗುಂಗಿಲ್ಲ; ಅದು ಕತ್ತಲ ದಿಬ್ಬ
ದಿಟವಾಗಿಯೂ ಅದು ಕತ್ತಲ ಹಬ್ಬ,
ದಾರಿಗುಂಟ ಗಿಜಿಗುಡುವ ತರಹೇವಾರಿ ಮುಖಗಳಿಲ್ಲ
ಇದ್ದರೂ ಕಾಣುವುದಿಲ್ಲವೆನ್ನುವುದೇ ಸಮಾಧಾನ;
ಖುಷಿ ಪಡುವ ಕಣ್ಣುಗಳು ಕುರುಡಾಗಿದ್ದಕ್ಕೆ.
ಕೇಳುವ ಮನಸ್ಸಿದ್ದರೆ ಗೋಡೆ ಹಿಂದಿನ ಪಿಸುಮಾತುಗಳ
ಹಾಗೆ ಕೇಳಿಸಿಕೊ; ರೋಮಗಳು ನಿಮುರಿಕೊಂಡಾವು
ಬೆವರು ಅದರಗುಂಟ ಜಾರಲು ಶುರುವಿಡುತ್ತವೆ
ಮೈ ಒದ್ದೆಯಾಗಲು ಹೆಚ್ಚು ಹೊತ್ತೇನು ಹಿಡಿಯುವುದಿಲ್ಲ
ಬಿಸಿ ರರುತದ ಒಳ ಹರಿವು ಜೋರಿದ್ದರೆ ಮತ್ತೇನು ಕೇಳುವುದು,
ಕತ್ತಲೊಳಗೆ ನಮಗೆ ನಾವೇ ಕಾಣದಿದ್ದಾಗ
ಯಾರು ನೋಡಿಯಾರು ಮೆತ್ತಗೆ ಹೆಜ್ಜೆಯಿಡು;
ಒದ್ದೆ ಅಂಗಿಯೊಳಗೆ ಗಾಳಿ ಹರಿದಾಡಲಿ ಕೇರೆ ಹಾವಿನಂತೆ
ನಿರಾಳದ ಉಸಿರೀಗ ಬಿಡಬಹುದು; ಒಮ್ಮೆ ನಿಚ್ವಾಸ ಇನ್ನೊಮ್ಮೆ ಉಚ್ವಾಸ.
ನೆಲಕ್ಕೆ ಕಾಲು ಸವರುತ್ತಾ ನಡೆಯುವಾಗ;
ಬೆರಳಿಗಟೆಯುವ ಬಂಡೆಗಲ್ಲ ಮೇಲೆ ಅಂಗಾತ ಮೈ ಹರಡು;
ಚುಕ್ಕಿ ಚಂದ್ರಮರ ಮುಖಗಳ ಮುಚ್ಚಿದ್ದು ಮೋಡದ ಸೆರಗು
ಒಳಗೊಳಗೆ ನಡೆದದ್ದು ಕಾಣಲೂ ಇಲ್ಲ ; ಕೇಳಿಸಲೂ ಇಲ್ಲ
ಇದು ಬಿಕನಾಸಿ ರಾತ್ರಿ ಹಬ್ಬವಲ್ಲವೆ? ಮೈಥುನವಿಲ್ಲದಿದ್ದರೆ ಹೇಗೆ
ಸಡಗರಕ್ಕೆ ಸ್ಖಲ್ಲನವಾಗದಿದ್ದರೆ ಹೇಗೆ!!!
-ಪ್ರವರ
ಚುಕ್ಕಿ ಚಂದ್ರಮರ ಮುಖಗಳ ಮುಚ್ಚಿದ್ದು ಮೋಡದ ಸೆರಗು
ReplyDeleteಒಳಗೊಳಗೆ ನಡೆದದ್ದು ಕಾಣಲೂ ಇಲ್ಲ ; ಕೇಳಿಸಲೂ ಇಲ್ಲ
ಮೋಡ ಕರಗಿ ಮಳೆ ಬಂದು ನಿರಾಳವಾದ ಮೇಲೇ ಗೊತ್ತು....
ಚುಕ್ಕಿ ಚಂದ್ರಮರ ಮುಖ ಬೆಳ್ಳಂಬೆಳ್ಳನೆ ಬೆಳಗಿದ್ದು....
ಅಲ್ಲವೇ ಪ್ರವರ ಕವಿಯವರೇ....?
ಒಳ್ಳೆಯ ಕವನ...