ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Monday, March 18, 2013

ನೀಲಿ ಹಾಯ್ಕುಗಳು

ನಾನು ಗಾಢವಾಗಿ
ನಿನ್ನೊಳು ಧ್ಯಾನಿಸಬೇಕು
ಕಳೆದು ಹೋಗುವ ಹಾಗೆ

ನಿನ್ನ ಸೆರಗೊಳಗೆ
ಬೆಳಕೂ ಕತ್ತಲಾಗುವಾಗ
ನಾನ್ಯಾವ ಲೆಕ್ಕ!

ನಾವಿಬ್ಬರು ಬೆವೆತು
ರಾತ್ರಿಗೆ ಬಿಸಿಯೇರಿಸೋಣ
ನಾಳೆ ಕತ್ತಲು ಮತ್ತೆ ನೆನೆಯುವಂತೆ

ಅರ್ರೆರ್ರೆ, ನಿನ್ನ ಚುಂಬಿಸುವ
ಭರದಲ್ಲಿ ಉಸಿರಾಡುವುದನ್ನೇ
ಮರೆತಿದ್ದೇನಲ್ಲ

ನೀನಿರುವವರೆಗೆ
ರಾತ್ರಿಗಳೆಂದೂ
ಕರಗಲೇಬಾರದು

ಹುಣ್ಣಿಮೆಯ ಬೆಳದಿಂಗಳ ಹೀರಿ
ನೀಲಿಯೇರುತ್ತದೆ ಮೈ
ಕನಸುಗಳ ಜೊತೆಗೆ
-ಪ್ರವರ

1 comment:

ಅನ್ಸಿದ್ ಬರೀರಿ