ಬೆಳಕ ಆಯುವ ಫಕೀರನೂ...


ಎಲ್ಲೆಲ್ಲಿಂದಲೋ
ಕತ್ತಲ ಹಿಂಜಿ ಹೆಕ್ಕಿ
ಬೆಳಕನ್ನು ಆಯ್ದು ಜೋಡಿಸಿಟ್ಟುಕೊಂಡು
ಕಣ್ಣು ಸವೆಸಿಕೊಂಡಿದ್ದೇನೆ,

ಹಾಗೆಂದು
ನಾನೇನು ಕುರುಡನಲ್ಲ
ಚಿತ್ರ ಆಕ್ರಮಣಕಾರಿಯಾಗಿ
ಪರದೆಯ ಮೇಲೆ
ಮೂಡುತ್ತದೆ
ನನಗಷ್ಟೆ ಗೋಚರಿಸುವಂತೆ
ನಾನಷ್ಟೆ ತಡವರಿಸಿ
ನೋಡುವಂತೆ

ಹಣೆ ಬೆವರ
ಒಳಗಿಂದ
ಪ್ರತಿಫಲಿಸುವಾಗ
ಕೋಲ್ಮಿಂಚು ಗೋಡೆ ಬಣ್ಣಕ್ಕೆ
ಅಂಟಿಕೊಂಡಿತು,

ನನ್ನ ಪಾಡಿಗೆ ನಾನೆ ಸೂಜಿ
ಪೋಣಿಸಿಕೊಂಡು ಹೊಲಿದುಕೊಂಡಿದ್ದು
ಬೆಳಕಿನಂಗಿಯ,
ಮೈಗೇರಿಸಿಕೊಂಡು
ದಾರಿಯಲ್ಲಿ ನಡೆಯುತಿದ್ದರೆ
ಕಾಣದಂತೆ ಅಂಡು ಬಡಿದುಕೊಂಡು
ನಕ್ಕರು,

ಕತ್ತಲಲ್ಲಿ ಕರಗಿ
ಹೋಗಿದ್ದ ಅವರ್ಯಾರು
ನನಗೆ ಕಾಣಿಸಲಿಲ್ಲ
ಮುಂದಿದ್ದ ದಾರಿಯ ಹೊರತು,
ಬೇಕಿದ್ದವರು ಹೆಜ್ಜೆ ಎಣಿಸಿಕೊಂಡು
ಬರಲಿ,
ಗೆರೆಯ ಕೊನೆಗೆ
ಅಪರಿಮಿತ ಜಾಗವಿದೆ ಅಂಗಿಯೊಳಗೆ
ಎಳೆದುಕೊಳ್ಳುತ್ತೇನೆ ಕೈಯ ಚಾಚಿ.
-ಪ್ರವರ










Comments

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ