ಕತ್ತಲಿಗೆ ನಿಮ್ಮನು ಒಮ್ಮೆ ಒಡ್ಡಿ ನೋಡಿ

ಮೌನಕ್ಕೂ
ವಿರಹ ಹೆಚ್ಚಾಗುತ್ತದೆಯಂತೆ
ನನಗೇನು ಗೊತ್ತು
ಒಬ್ಬಂಟಿಯಾಗಿ ಕತ್ತಲ
ಜೊತೆ ಮಾತನಾಡುವಾಗ
ಅನುಭವಿಸಿದ್ದು,

ಕನಸುಗಳದ್ದು ಇದೇ ತೆವಲು
ಮುನಿಸಿಕೊಂಡು ಕೈತಪ್ಪಿ
ಹೋಗುತ್ತವೆ,
ಸತ್ತವನ ಎದೆಯಿಂದ
ಜೀವ ಹಾರಿ
ಹೂವು ಬಿದ್ದಂತೆ,
ಶಾಶ್ವತ ಧ್ಯಾನಕ್ಕೆ
ಅಡಿ ಇಡುತ್ತದೆ ದೇಹ,
ಜೀವ ಇನ್ನೊಬ್ಬನ ಬಾಯ ಸರಕಾಗುತ್ತದೆ!

ನಾವೇನು ಕೊಳೆಯುವುದಿಲ್ಲ
ಮಣ್ಣಿನಾಂತರ್ಯದಲಿ ಲೀನವಾಗುತ್ತೇವೆ,
ಕತ್ತಲಲ್ಲಿ ಬೆಳಕು ಇಂಚಿಂಚಾಗಿ
ಕರಗಿದಂತೆ,
ನಾನಷ್ಟೇ ಅಲ್ಲ
ಜೀವವಿದ್ದದ್ದೂ ಇಲ್ಲದ್ದೂ ಎಲ್ಲವೂ.

ಬೆಳಕಲ್ಲಿ ಮಾತಿತ್ತು,
ಕತ್ತಲಿಗೆ ಮೌನವಿತ್ತು,
ಸಂಜೆ ಒಬ್ಬರಿಗೊಬ್ಬರು ಬೇಕೆಂಬ
ಚಡಪಡಿಕೆ ವಿರಹವಲ್ಲದೇ ಮತ್ತೇನು.

ಅನುಭವ ಸಿಗಬೇಕಾದಲ್ಲಿ
ಗಾಡ ಕತ್ತಲಿಗೊಮ್ಮೆ ನಿಮ್ಮನ್ನು ಒಡ್ಡಿ ನೋಡಿ.
-ಪ್ರವರ

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ