ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, February 23, 2013

ಸವೆತ

ಅತ್ತ ಸಾಗರವಂತೆ
ಆಪ್ತದಲೆಗಳಂತೆ,
ನಿರ್ಲಿಪ್ತ ಬಂಡೆಗಲ್ಲುಗಳಂತೆ

ಇಲ್ಲೇ ಬರೆದಿದ್ದೆ
ಈ ಮರಳ ಮೇಲೆ
ಅಳಿಸಿ ಹಾಕಿದ್ದಾರೆ
ಬರೆದದ್ದು ನನಗಿನ್ನೂ ನೆನಪಿದೆ

ನೂರುಗಾವುದ ದೂರ
ನಡೆದರೂ
ಮುಗಿಯಲೊಲ್ಲದ ದಿಕ್ಕು,

ನಿನ್ನನೇಕೆ ಹಿಂಬಾಲಿಸುತಿದ್ದೇನೆ?
ಆಸೆ ತೀರದ ಆತ್ಮದಂತೆ,
ಬೆರಳಿನ್ನೂ ಸವೆದಿಲ್ಲ
ಮತ್ತೆ ಮತ್ತೆ ಬರೆಯುತ್ತೇನೆ!
ಅಳಿಸಿ ಅಳಿಸಿ ನಿನ್ನ ಕೈ ಸವೆಯುವಂತೆ.

No comments:

Post a Comment

ಅನ್ಸಿದ್ ಬರೀರಿ