ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, February 20, 2013

ಕತ್ತಲುಂಡವು ಮಂದಿರ

ನೀಲಿಯಾಗಸದಲ್ಲಿ ಯಾರೋ
ನಿನ್ನ ನೆನೆಯುತ ಕೂತರು
ತೇಲಿ ಬಂದ ಮೋಡವೆಲ್ಲವ
ಮಡಿಸಿ ಬದಿಯಲಿ ಬಿಟ್ಟರು

ದಟ್ಟ ಹೆರಳಡಿಯಲ್ಲಿ ರಾತ್ರಿಯ
ಕನಸು ಕಾಣುತ ಚಂದಿರ
ಬೆಳದಿಂಗಳನ್ನು ಮರೆತೆಬಿಟ್ಟನು
ಕತ್ತಲುಂಡವು ಮಂದಿರ

ಧ್ಯಾನಗ್ರಸ್ಥ ರಾತ್ರಿಯೆಲ್ಲಾ
ನಿನ್ನ ನೆನಪ ಮುಲುಕಾಟವು
ಮೌನಿ ದೀಪಕೆ ಎಣ್ಣೆಯುಣಿಸಿ
ಜೀವ ತೆತ್ತಿತು ಬತ್ತಿಯು

ನಿನ್ನ ತೇಲಿಸಲೆಂದು ಅಲೆಯು
ಬಾಹುಗಳನು ಚಾಚುತಿಹುದು
ನೊರೆಯು ಉಕ್ಕಿ ಮರಳ ದಡಕೆ
ಸೌಖ್ಯ ಪತ್ರವ ಹಂಚುತಿಹುದು
-ಪ್ರವರ

No comments:

Post a Comment

ಅನ್ಸಿದ್ ಬರೀರಿ