ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Wednesday, February 20, 2013

ಫಸ್ಟ್ ಬೆಂಚ್ ಸುಂದ್ರಿ


ಮೊದಲ ಬೆಂಚಲಿ ನಗದೆ ಕುಳಿತ
ಚೆಂದಗೆನ್ನೆಯ ಹುಡುಗಿಯೆ
ಚೂರು ನಗದ ಕೆಂಪು ತುಟಿಗೆ
ಯಾವ ಪಾಪವು ಅಡರಿದೆ

ಹೆರಳ ತುಂಬ ಮಲ್ಲೆ ಹೂಗಳು
ಘಮವ ಸುಮ್ಮನೆ ಬೀರಿವೆ
ಹಿಂದೆ ಕೂತ ಹೈಕಳೆಲ್ಲ
ಹೊಳ್ಳೆ ಅರಳಿಸಿ ಹೀರಿವೆ.

ಅಷ್ಟು ಗದ್ದಲ ನಡುವೆ ನಿನ್ನ
ಗೆಜ್ಜೆ ಸದ್ದು ಕೇಳಿದೆ,
ಎಲ್ಲ ಕಿವಿಗಳು ನಿನ್ನ ಕಡೆಯೇ
ದಿಕ್ಕ ಬದಲಿಸಿ ನೋಡಿವೆ.

ಎದೆಗೆ ಗಕ್ಕನೆ ತುಂಬಿಕೊಂಡೆ
ಕಣ್ಣಿನೊಳಗೆ ಬಿಡಿಸಿಕೊಂಡೆ
ರಾತ್ರಿ ಕನಸಿಗೆ ಬಿಟ್ಟುಕೊಂಡೆ
ಹುಳಗಳಂತೆ ನಿನ್ನನು
-ಪ್ರವರ

1 comment:

  1. ಕನಸಿನಲ್ಲೂ ಕಾಡುತ್ತಿರುವ ಆ ಸುಂದರಿಯ ಹೆಸರೇನು ಗುರುವೇ?
    ಅಂದ ಹಾಗೆ ಚೆನ್ನಾಗಿದೆ ನಿಮ್ಮ ವೇದನೆ...

    ReplyDelete

ಅನ್ಸಿದ್ ಬರೀರಿ