ಕನಸುಗಳೆಲ್ಲಾ ನೀಲಿಚಿತ್ರಗಳಂತೆ ಗೋಚರಿಸುತ್ತಿವೆ



ಅಯ್ಯೋ ಇದೇನು
ಇಂದು ಹುಣ್ಣಿಮೆಯೇ,
ಕಣ್ಣು ಕುಕ್ಕುತ್ತಿರುವನಲ್ಲ
ಬೆಳ್ಳಿ ಚಂದಿರ.
ಮೊದಲು ಕತ್ತಲಿಗೆ ಮೈಯೊಡ್ಡಬೇಕು
ಇಲ್ಲದಿದ್ದರೆ ವಿರಹದಲ್ಲಿ ಬೆಂದು ಹೋದೆನು,

ಅಬ್ಬಾ ಕತ್ತಲು ಕೋಣೆ
ಇಂಜಿದರೂ ಕಾಣಲೊಲ್ಲದಷ್ಟು ಕತ್ತಲು,
ಬೆಳದಿಂಗಳಲ್ಲಿ ಸುರಿವ
ಬೆವರ ಮೈಥುನಕ್ಕಿಂತ
ಮೈ ಸೋಕುವ ಕತ್ತಲಡಿಯಲ್ಲಿ
ನರಳುವುದೇ ವಾಸಿ

ಆಗೋ ಕೇಳಿಸುತ್ತಿದೆಯೇ
ಅಲೆಗಳು ಮೈ ನವಿರೇಳಿಸಿಕೊಂಡು
ಯಾರದೋ ಆಲಿಂಗನಕೆ
ಕೈ ಚಾಚುತ್ತಿರುವ ಹುಚ್ಚು ಸದ್ದು,
ಒಮ್ಮೆಲೇ ಆಗಸಕ್ಕೆ ನೆಗೆದದ್ದು
ಸುಸ್ತಾಗಿ ಮತ್ತೆ ಅಂಗಾತ ಮಲಗಿದ್ದು

ಪಕ್ಕದ ಮನೆಯಲ್ಲಿದ್ದ ಮಂಚದ
ಕಿರಲು ಸದ್ದು, ಬಾಗಿಲು ಕಿಟಕಿಗಳ
ಸಂದು-ಗೊಂದುಗಳ ದಾಟಿಕೊಂಡು ಬಂದಿದೆ,
ಕಿವಿ ಕಿವಿಚಿಡುವಷ್ಟು ನರಳಾಟ.

ಕಸುಗಳೆಲ್ಲಾ ನೀಲಿ ಚಿತ್ರಗಳಂತೆ
ಗೋಚರಿಸುತ್ತಿವೆ,
ಕತ್ತಲು ಕೋಣೆಯ ಗೋಡೆ ಗೋಡೆಗಳಲ್ಲೂ
ವಿಲಕ್ಷಣ ಆಕೃತಿಗಳು ತುಟಿಕಚ್ಚಿ
ಪೋಲಿಯಾಗಿ ಕರೆದಂತಿವೆ

ಹೇ ಬೆಳದಿಂಗಳೇ
"ನನ್ನಾಕೆಯಿದ್ದಾಗ ಬಾ ನೋಡುವ"
ತೊಡೆ ತಟ್ಟಿದ್ದು ನಾನಲ್ಲವೆಂದು
ಹೇಳುವ ಹೊತ್ತಿಗೆ ನಿದ್ದೆ ಝೋಪು

-ಪ್ರವರ

Comments

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ