ನವಿಲ ಗರಿ ನೇವರಿಸಿದ ಪುಸ್ತಕದ ಹಾಳೆಯಲ್ಲಿ

ಎದೆಗೆ ಚಿಮ್ಮಿ ನೆಗೆವ ನಿನ್ನ
ನೆನಪುಗಳಲ್ಲಿ ಕಹಿ ಶರಾಬಿನ ರುಚಿ ಇದೆ,
ನಾಲಿಗೆಗೆ ಹಿಡಿಸದಿದ್ದರೂ
ನಶೆಗೆ ಬೇಕು
ಬಾನಿಗೂ ಹಿಡಿದ ಸಂಜೆಹೊತ್ತಿನ ಝೋಂಪಿನಂತೆ
ಕೈಗೆ ಸಿಗದಿದ್ದರೂ
ಕಂಡರೂ ಕಾಣಲಿ ಚುಕ್ಕಿಗಳು.

ಬೆಳಕಿಗಿಂತ ಹೆಚ್ಚು ಕತ್ತಲಲ್ಲೇ ಕಾಣುತ್ತಿ
ಕಣ್ಣ ಪರದೆಯ ಮೇಲೆ ಇಷ್ಟಗಲ
ಚಿತ್ರಗಳು,
ಕಾಡಿಗೆ ತೀಡಿದ್ದ ಕಪ್ಪು ಕಣ್ಣು,
ಮೂಗುತ್ತಿಯಿದ್ದ ಚೂಪು ಮೂಗು,
ಕೆಂಡದಂಥ ತುಟಿ.
ರಾತ್ರಿಯೆಲ್ಲಾ ಬೆವರು

ಶಾಲು ಹೊದ್ದು
ಕಾಯುತ್ತೇಬೆ ಬಾಟಲಿ ಹಿಡಿಯುವುದಕ್ಕೆ
ಯಾರೋ ಬಿಡುತ್ತಿಲ್ಲ
ಭುಜವ ಕಚ್ಚಿ ಸರಕ್ಕನೆ ನಾಲಿಗೆ ಎಳೆದುಕೊಂಡ ಸದ್ದು
ಕಿವಿಯ ಬಳಿ ಎದೆ ಮೀರಿದ ಉಸಿರಾಟ.
ಥೂ ಹಾಳು ನೆನಪುಗಳು
ಮತ್ತೆ ಮತ್ತೆ ನೀರಾಗುವಂತೆ ಮಾಡುತ್ತವೆ

ರಾತ್ರಿಯೆಲ್ಲಾ ಹುಡುಕಿದ್ದೇನೆ
ನಿನ್ನದೇ ಹೆಜ್ಜೆ ಗುರುತುಗಳ,
ನವಿಲ ಗರಿಯನ್ನು ನೇವರಿಸಿದ ಪುಸ್ತಕದ ಹಾಳೆಯಲ್ಲಿ
ಹತ್ತಾರು ಕವಿತೆಗಳಿವೆ.
ಎಷ್ಟೇ ಮಗ್ಗುಲು ಬದಲಾಯಿಸಿ ಓದಿದರೂ
ನಿನ್ನದೇ ಅತೀ ಕಾಡುವ ನೆನಪುಗಳು
-ಪ್ರವರ


Comments

  1. ಪ್ರವರ ನಿನ್ ತರಹ.. ಬರೆಯೋಕೆ ಅದೆಷ್ಟೇ ಸಲ ಪ್ರೀತಿಲಿ ಬಿದ್ದ್ದಿರೋರಿಗೂ ಸಾದ್ಯ ಇಲ್ಲ.. ಬರಹ ಅನ್ನೋದು.. ಎಲ್ಲರಿಗು ಸಾದ್ಯ ಇಲ್ಲ ಅನ್ನೋದು ನಿನ್ನ ಬರಹಗಳಿಂದ ಆರ್ಥ ಆಗುತ್ತೆ..

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ