ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Saturday, January 26, 2013

ಕವಿತೆಯೊಂದು ಬದುಕಿದೆಕವಿತೆಯೊಂದು ಎದೆಯೊಳಿದ್ದು
ಏನನ್ನೊ ಮತ್ತೆ ಬರೆಸಿದೆ,
ಹಗಲು ರಾತ್ರಿ ದಣಿಸಿ ದಣಿಸಿ
ಮೈಯ ಬೆವರ ಸುರಿಸಿದೆ

ಒಂದು ಹಾಳೆ ನೂರು ಕವನ
ಸಾಲದಂತೆ ನಾಳೆಯು,
ಮಣ್ಣ ಗೋರಿಯಾಳವನ್ನು
ಸೀಳಿದಂತೆ ಬೀಜವು

ಅಳುವ ಜನರ ಕಣ್ಣಲೊಂದು
ಹನಿಯು ಕುಳಿತು ಇಣುಕಿದೆ,
ಒಣ ಮರದ ಬೇರ ಸೇರೊ
ಆಸೆಯಲ್ಲೆ ಕಾದಿದೆ

ನಾಳೆ ಕನಸ ಗಂಟಲಲ್ಲಿ
ಕವಿತೆಯೊಂದು ಬದುಕಿದೆ
ಸತ್ತ ಜಗಕೆ ಮೂಕ ಜನಕೆ
ದನಿಯ ಆಸೆ ಉಳಿಸಿದೆ
-ಪ್ರವರ
No comments:

Post a Comment

ಅನ್ಸಿದ್ ಬರೀರಿ