ಪಾಪ ಯಾರಿಗೆ ಸುತ್ತೀತು

ನೋವಿಗೆ ಹೊಯ್ದಾಡುತಿತ್ತು
ಪಾಪ ಯಾರಿಗೆ ಸುತ್ತೀತು
ಸೃಷ್ಠಿಕರ್ತನಿಗೋ,
ಗಾಳಕ್ಕೆ ಸಿಕ್ಕಿಸಿದವನಿಗೋ.
ಹುಳದಾಸೆಗೆ
ಮೀನು ಗಾಳಕ್ಕೆ ಬಿತ್ತು,
ವಿಲವಿನನೆ ಒದ್ದಾಡುತಿತ್ತು
ಪಾಪ ಯಾರಿಗೆ ಸುತ್ತೀತು
ಸೃಷ್ಠಿಕರ್ತನಿಗೋ,
ಗಾಳ ಬೀಸಿದವನಿಗೋ,
ಹುಳುವಿಗೋ,
ಮೀನ ಸುಟ್ಟ,
ಹಸಿವಿಗೆ ಗಬ ಗಬನೆ
ತಿಂದು ಬಿಟ್ಟ,
ಮುಳ್ಳು ಗಂಟಲಲ್ಲಿ
ಸಿಕ್ಕಿ ನರಳಾಡುತಿದ್ದ,
ಪಾಪ ಯಾರಿಗೆ ಸುತ್ತೀತು
ಸೃಷ್ಠಿಕರ್ತನಿಗೋ
ಹುಳುವಿಗೋ,
ಸುಟ್ಟಿಟ್ಟ ಮೀನಿಗೋ?
Comments
Post a Comment
ಅನ್ಸಿದ್ ಬರೀರಿ