ನನ್ನ ಪ್ರವರ

ಬರೆಯುವ ಗೀಳು ಹತ್ತಿದ್ದೇ ಹತ್ತಿದ್ದು ಮಿಕ್ಕ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲವೆಂಬುದು ಮನಸ್ಸಿನ ವ್ಯಥೆ... ಇದ್ದದ್ದನ್ನು ಇದ್ದಹಾಗೆ ಬರೆಯುತ್ತಿರು ಖುಷಿ ಇದೆ

Sunday, December 30, 2012

ಈ ಸಂಜೆ ನೀನು ಸಿಗಬೇಕಿತ್ತು ಹುಡುಗಿ,

ಈ ಸಂಜೆ ನೀನು
ಸಿಗಬೇಕಿತ್ತು ಹುಡುಗಿ,
ಸಿಗಬೇಕಿತ್ತು

ನಡುಗುತಿದ್ದ ತುಟಿಗೆ
ತುಟಿಯೊತ್ತಿ ಸಮಾಧಾನಿಸಬೇಕಿತ್ತು
ಯಾಕೋ ಗೊತ್ತಿಲ್ಲ
ಕೊರೆವ ಚಳಿ ಇಲ್ಲ
ಆದರೂ ಸಂಜೆಗೆ
ಸಿಗಬೇಕಿತ್ತು ಹುಡುಗಿ

ರೋಮಗಳೆಲ್ಲ ಎದ್ದು
ನಿಲ್ಲುವಂತೆ ಮೈ
ಮರುಗಟ್ಟಿದೆ ಹುಡುಗಿ
ನೀ ಅಪ್ಪಬೇಕಿದೆ ಒಮ್ಮೆ
ಉಸಿರುಗಟ್ಟುವಂತೆ
ಬೆವರಿಳಿಯುವಷ್ಟು,
ಬಿಸಿಯೇರುವಂತೆ
ಬೆಳಕಿನ್ನು ಆರಿಲ್ಲ
ಆದರೂ ಈ ಸಂಜೆಗೆ
ಸಿಗಬೇಕಿತ್ತು ಹುಡುಗಿ

ಕತ್ತಲೆಗೆ ನಿನ್ನೊಟ್ಟಿಗಿರಲು
ಅಳುಕು ನನಗೆ
ನಿನ್ನವನಾದರೇ ಹೇಗೆಂದು,
ಕತ್ತಲೊಂಚೂರು ದೂರವಿದೆ
ಆದರೂ ಈ ಸಂಜೆಗೆ
ಸಿಗಬೇಕಿತ್ತು ಹುಡುಗಿ

No comments:

Post a Comment

ಅನ್ಸಿದ್ ಬರೀರಿ